ಬೆಂಗಳೂರು: ಸ್ನೇಹಿತನನ್ನೇ ಬಡಿದು ಕೊಲೆ ಮಾಡಿ ಕಥೆ ಕಟ್ಟಿದ್ರು..!

By Kannadaprabha News  |  First Published Nov 1, 2019, 10:11 AM IST

ಸ್ನೆಹಿತರೇ ಬಡಿದು ಕೊಲೆ ಮಾಡಿ ನಂತರ ಸಹಜ ಸಾವು ಎಂಬಂತೆ ಕಥೆ ಕಟ್ಟಿದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ತೀವ್ರ ಹಲ್ಲೆ ಮಾಡಿ ಯುವಕ ಕುಸಿದು ಬಿದ್ದಾಗ ಕುಡಿದು ಬಿದ್ದು ಗಾಯಗೊಂಡ ಎಂದು ಆಸ್ಪತ್ರೆಗೆ ದಾಖಲಿಸಿ ಕಥೆ ಕಟ್ಟಿದ್ದಾರೆ. ಮತ್ತೇನಾಯಿತು..? ತಿಳಿಯಲು ಇಲ್ಲಿ ಓದಿ.


ಬೆಂಗಳೂರು(ನ.01): ಹಣಕಾಸಿನ ವಿಚಾರಕ್ಕೆ ಸ್ನೇಹಿತನ ಕೊಂದು ಸಹಜ ಸಾವು ಎಂದು ಕೊಲೆ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ್ದ ಪ್ರಕರಣ ಕೆ.ಆರ್‌.ಪುರದಲ್ಲಿ ಬೆಳಕಿಗೆ ಬಂದಿದೆ.

ರಾಜಸ್ಥಾನ ಮೂಲದ ಕರೋಲಿ ಮೂಲದ ರಾಮಕೇಶ್‌ ಮಾಲಿ (26) ಕೊಲೆಯಾದ ಯುವಕ. ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಕೆ.ಆರ್‌.ಪುರ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

Tap to resize

Latest Videos

undefined

ನೆಲಮಂಗಲ: ಮೊಬೈಲ್‌ ಚಾರ್ಜರ್‌ ವೈರ್‌ ಬಳಸಿ ಮಹಿಳೆ ಕೊಲೆ

ಟೈಲ್ಸ್‌ ಕೆಲಸ ಮಾಡುತ್ತಿದ್ದ ರಾಮಕೇಶ್‌ ತಮ್ಮ ಊರಿನವರಾದ ವಿಷ್ಣು, ರಾಮ್‌ಪಾಲ್‌ ಮತ್ತು ಮೋಹನ್‌ ಜತೆಗೆ ಮುಳುಬಾಗಿಲಿನ ತಾಟಪಲ್ಲಿ ಬಳಿ ನೆಲೆಸಿದ್ದ. ಕೂಲಿ ವಿಚಾರಕ್ಕೆ ಸೆ.24ರಂದು ರಾಮಕೇಶ್‌ ಮತ್ತು ವಿಷ್ಣು ನಡುವೆ ಜಗಳ ನಡೆದಿತ್ತು. ಈ ವೇಳೆ ಆರೋಪಿ ದೊಣ್ಣೆಯಿಂದ ರಾಮಕೇಶ್‌ನ ಮೇಲೆ ಹಲ್ಲೆ ನಡೆಸಿದ್ದ. ಈ ವೇಳೆ ರಾಮ್‌ಪಾಲ್‌ ಮತ್ತು ಮೋಹನ್‌ ಕೂಡ ರಾಮಕೇಶ್‌ಗೆ ಕಾಲಿನಿಂದ ಒದ್ದು ಹಲ್ಲೆ ನಡೆಸಿದ್ದರು.

ಟ್ರ್ಯಾಕ್ಟರ್‌-ಕಾರು ಡಿಕ್ಕಿ: ಇಬ್ಬರು ಸ್ಥಳದಲ್ಲೇ ದುರ್ಮರಣ

ತೀವ್ರ ರಕ್ತಸ್ರಾವವಾಗಿ ಕುಸಿದ ಗಾಯಾಳುವನ್ನು ಆರೋಪಿಗಳು ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದರು. ಕುಡಿದು ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ಆಸ್ಪತ್ರೆ ಅವರ ಬಳಿ ಹೇಳಿದ್ದರು. ಯುವಕ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದ. ಪೊಲೀಸರ ಅಸಹಜ ಸಾವು ಪ್ರಕರಣ ದಾಖಲಿಸಿ, ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಪೋಷಕರಿಗೆ ಒಪ್ಪಿಸಿದ್ದರು. ರಾಜಸ್ಥಾನದಲ್ಲಿ ರಾಮಕೇಶ್‌ನ ಅಂತ್ಯಕ್ರಿಯೆ ಆಗಿತ್ತು.

ಸಾವಿನ ಬಗ್ಗೆ ಗ್ರಾಮಸ್ಥರು ಕೆಲ ದಿನಗಳ ಹಿಂದೆ ರಾಮ್‌ಪಾಲ್‌ ಮತ್ತು ಮೋಹನ್‌ನನ್ನು ಪ್ರಶ್ನಿಸಿದಾಗ ಸತ್ಯಾಂಶ ಬಾಯ್ಬಿಟ್ಟಿದ್ದರು. ಪೋಷಕರು ಪೊಲೀಸರಿಗೆ ತಿಳಿಸಿದ್ದು, ಇದೀಗ ಪ್ರಮುಖ ಆರೋಪಿ ಬಂಧನಕ್ಕೆ ಹುಡುಕಾಟ ನಡೆಸಿದ್ದಾರೆ.

click me!