ದಿಲ್ಲಿ ಗಣರಾಜ್ಯೋತ್ಸವದ NCC ಪರೇಡ್ ಲೀಡ್ ಮಾಡಲಿದ್ದಾರೆ ರಾಜ್ಯದ ಶ್ರೀಷ್ಮ

By Kannadaprabha News  |  First Published Jan 23, 2020, 1:14 PM IST

ದಾವಣಗೆರೆ ಯುವತಿ ಶ್ರೀಷ್ಮಾ ಹೆಗ್ಡೆ ದಿಲ್ಲಿಯಲ್ಲಿ ನಡೆಯುವ ಎನ್‌ಸಿಸಿ ಪರೇಡ್ ನೇತೃತ್ವ ವಹಿಸಲು ಆಯ್ಕೆಯಾಗಿದ್ದಾರೆ. ಈ ಮೂಲಕ ರಾಷ್ಟ್ರ ರಾಜಧಾನಿಯಲ್ಲಿ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ. 


ದಾವಣಗೆರೆ  [ಜ.23]: 71 ನೇ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ದಿಲ್ಲಿಯಲ್ಲಿ ನಡೆಯುವ NCC ಪರೇಡ್ಗೆ ದಾವಣಗೆರೆಯ ಯುವತಿ ಲೀಡ್ ಮಾಡಲಿದ್ದಾರೆ. 

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಶ್ರೀಷ್ಮಾ ಹೆಗ್ಡೆ ದಿಲ್ಲಿಯಲ್ಲಿ ಜನವರಿ 26 ರಂದು ನಡೆಯುವ ಗಣರಾಜ್ಯೋತ್ಸವದ ಎನ್ ಸಿಸಿ ಪರೇಡ್ ನೇತೃತ್ವ ವಹಿಸಲಿದ್ದಾರೆ. 

Tap to resize

Latest Videos

ಗಣರಾಜ್ಯೋತ್ಸವಕ್ಕೆ ಹಕ್ಕಿಪಿಕ್ಕಿ ಜನಾಂಗದ ದಂಪತಿ ಆಯ್ಕೆ...

ಡಾ.ಪ್ರವೀಣ್ ಹೆಗ್ಡೆ-  ಬಿಂದು ಹೆಗ್ಡೆ ದಂಪತಿ ಪುತ್ರಿ ಶ್ರೀಷ್ಮಾ ಹೆಗ್ಡೆ  ಹರಿಹರ ಸಮೀಪದ ಕುಮಾರಪಟ್ಟಣದ ಆದಿತ್ಯ ಬಿರ್ಲಾ ಪಿಯು ಕಾಲೇಜಿನ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದು,  ದೆಹಲಿಯ ಗಣರಾಜ್ಯೋತ್ಸವದ ಎನ್‌ಸಿಸಿ ಪರೇಡ್‌ಗೆ  ಆಯ್ಕೆಯಾಗಿದ್ದು, ರಾಷ್ಟ್ರ ರಾಜಧಾನಿಯಲ್ಲಿ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ. 

ಗಣರಾಜ್ಯೋತ್ಸವ ಪಥಸಂಚಲನ: ರಾಜ್ಯದಿಂದ ಅನುಭವ ಮಂಟಪ ಸ್ತಬ್ಧ ಚಿತ್ರ...
 
2017ರಲ್ಲಿ ದೆಹಲಿ ಗಣರಾಜ್ಯೋತ್ಸದ ಪರೇಡ್‌ನಲ್ಲಿ ಕೊಡಗಿನ ಐಶ್ವರ್ಯಾ ಲೀಡ್ ಮಾಡಿದ್ದರು. 3 ವರ್ಷದ ನಂತರ ಮತ್ತೆ ಕರ್ನಾಟಕದ ಎನ್‌ಸಿಸಿ ಯುವತಿಗೆ ವಿಶೇಷ ಅವಕಾಶ ದೊರಕಿದ್ದು, ರಾಜ್ಯಕ್ಕೆ ಹೆಮ್ಮೆಯ ಸಂಗತಿಯಾಗಿದೆ.

click me!