ಮಹಾಮಾರಿ ಕೊರೋನಾ ಸೋಂಕಿನಿಂದ ಕರ್ನಾಟಕದ ಸ್ವಾಮೀಜಿ ನಿಧನ

By Suvarna News  |  First Published Jul 15, 2020, 8:37 PM IST

ರಾಜ್ಯದಲ್ಲಿ ಕೊರೋನಾ ಅಟ್ಟಹಾಸ ಮಿತಿಮೀರಿದ್ದು, ದೊಡ್ಡವರಿಂದ ಹಿಡಿದು ಚಿಕ್ಕಮಕ್ಕಳು ಮತ್ತು ಬಡವ, ಶ್ರೀಮಂತರನ್ನು ಬಿಟ್ಟಿಲ್ಲ. ಈ ಮಹಾಮಾರಿ ಇದೀಗ ಸ್ವಾಮೀಜಿಯೊಬ್ಬರನ್ನು ಬಲಿ ಪಡೆದಿದೆ.


ಶಿವಮೊಗ್ಗ, (ಜುಲೈ.15): ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕು ರಾಂಪುರದ ಶಿವಯೋಗಿ ಮಠದ ಪರಮ ಪೂಜ್ಯ ಹಾಲಸ್ವಾಮಿ ಕೊರೋನಾ ಸೋಂಕಿನಿಂದ ಇಂದು (ಬುಧವಾರ) ಮೃತಪಟ್ಟಿದ್ದಾರೆ. 

ಹಲವು ದಿನಗಳಿಂದ ತೀವ್ರ ತರ ಉಸಿರಾಟದ ತೊಂದರೆಯಿಂದ ನರಳುತ್ತಿದ್ದರು. ಭಕ್ತರು ಎಷ್ಟೇ ವಿನಂತಿಸಿದರೂ ಆಸ್ಪತ್ರೆಗೆ ಹೋಗಲು ನಿರಾಕರಿಸಿದ್ದರು. ಕೊನೆಗೆ ಎರಡು ದಿನಗಳ ಹಿಂದೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಕೋವಿಡ್‌ ಕೇಂದ್ರಕ್ಕೆ ಕರೆತರಲಾಗಿತ್ತು.

Tap to resize

Latest Videos

ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ದಾವಣಗೆರೆ ಜಿಲ್ಲೆ ಸಾಸ್ವೆಹಳ್ಳಿ ಸಮೀಪದ ರಾಂಪುರ ಮಹಾಸಂಸ್ಥಾನದ ಹಾಲಸ್ವಾಮಿ ಅವರಿಗೆ ಕೆಲ ದಿನಗಳ ಹಿಂದೆ ಕೊರೋನಾ ಸೋಂಕು ದೃಢಪಟ್ಟಿತ್ತು. ಸೋಂಕಿಗೆ ತುತ್ತಾಗಿದ್ದ ಶ್ರೀಗಳು ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದರು.  ಆದ್ರೆ, ಚಿಕಿತ್ಸೆ ಫಲಿಸದೆ‌ ಇಂದು (ಬುಧವಾರ) ಹಾಲಸ್ವಾಮಿಜೀ ಶಿವೈಕ್ಯರಾಗಿದ್ದಾರೆ. 

ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರು ಆಸ್ಪತ್ರೆಗೆ ಹೋಗುವಂತೆ ಭಕ್ತರು ಮನವಿ ಮಾಡಿದರೂ ಒಪ್ಪಿರಲಿಲ್ಲ. ಆದರೆ ಎರಡು ದಿನಗಳ ಹಿಂದಷ್ಟೇ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದರು ಎನ್ನಲಾಗಿದೆ.

ಹಾಲಸ್ವಾಮೀಜಿ ಅವರನ್ನು ಆ ಭಾಗದ ಭಕ್ತರು ಪವಾಡ ಪುರುಷ ಎಂದೇ ನಂಬಿದ್ದರು. ದಾವಣಗೆರೆ, ಶಿವಮೊಗ್ಗ ಮಾತ್ರವಲ್ಲದೆ ಹಲವೆಡೆ ಅಪಾರ ಭಕ್ತ ಸಮೂಹವನ್ನು ಅವರು ಹೊಂದಿದ್ದರು.

click me!