Davanagere Stone Pelting on Hindu Families: ಹಿಂದೂಗಳ ಮೇಲೆ ಪೊಲೀಸರ ದರ್ಪ, ಕಲ್ಲು ತೂರಿದವರ ಮೇಲೆ ಏಕಿಲ್ಲ?

Kannadaprabha News, Ravi Janekal |   | Kannada Prabha
Published : Sep 27, 2025, 11:18 AM IST
Davanagere Karl Marx Nagar incident

ಸಾರಾಂಶ

Davanagere Karl Marx Nagar incidentದಾವಣಗೆರೆಯ ಕಾರ್ಲ್ ಮಾರ್ಕ್ಸ್ ನಗರದಲ್ಲಿ ಮತೀಯ ಗೂಂಡಾಗಳು ಹಿಂದೂ ಕುಟುಂಬಗಳ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿ, ಮಹಿಳೆಯರು ಮತ್ತು ಮಕ್ಕಳ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹಿಂದೂ ಸುರಕ್ಷಾ ಸಮಿತಿ ಆರೋಪಿಸಿದೆ. ಈ ಘಟನೆಯು ಕಾಶ್ಮೀರದ ಸನ್ನಿವೇಶವನ್ನು ನೆನಪಿಸಿದೆ

ದಾವಣಗೆರೆ (ಸೆ.27): ಇಲ್ಲಿಯ ಕಾರ್ಲ್ ಮಾರ್ಕ್ಸ್ ನಗರದಲ್ಲಿ ಕ್ರಿಮಿನಲ್ ಹಿನ್ನೆಲೆಯ, ಮತೀಯ ಗೂಂಡಾಗಳು ಹಿಂದೂಗಳ ಮನೆಗಳ ಮೇಲೆ ಕಲ್ಲು ತೂರಾಟ ಮಾಡಿ, ಮನೆಗಳಿಗೆ ನುಗ್ಗಿ ಮಕ್ಕಳು, ಮಹಿಳೆಯರು, ವೃದ್ಧರು, ಪುರುಷರ ಮೇಲೆ ಹಲ್ಲೆ ಮಾಡಿದ್ದಾರೆ. ಆ ಮೂಲಕ ಕಾಶ್ಮೀರ ಘಟನೆಗಳ ಸಿನಿಮಾ ನೆನಸುವಂತಹ ಭಯದ ವಾತಾವರಣ ನಿರ್ಮಾಣ ಮಾಡಿದ್ದಾರೆ ಎಂದು ಹಿಂದೂ ಸುರಕ್ಷಾ ಸಮಿತಿ ಮುಖಂಡ ಸಿದ್ದಲಿಂಗ ಸ್ವಾಮಿ ಕಿಡಿಕಾರಿದರು.

ಕಾಂಗ್ರೆಸ್‌ ಪಕ್ಷಕ್ಕೆ ಹಿಂದೂಗಳು ವೋಟು ಹಾಕಿಲ್ಲವೇ?

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಸ್ಲಿಮರ ತುಷ್ಟೀಕರಣ ಮಾತುಗಳಿಂದಾಗಿ ಹಿಂದೂಗಳು ಕಡಿಮೆ ಜನಸಂಖ್ಯೆ ಇರುವ ಕಡೆಗಳಲ್ಲಿ ಹಿಂದೂ ಕುಟುಂಬಗಳು ಬದುಕುವುದೇ ಕಷ್ಟವೆಂಬ ಪರಿಸ್ಥಿತಿ ನಿರ್ಮಾಣ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಹಿಂದೂಗಳ್ಯಾರೂ ಮತಗಳನ್ನೇ ಹಾಕಿಲ್ಲವೇ? ಯುವತಿಗೂ ಹಲ್ಲೆ ಮಾಡಿ, ಪೋಲ್ಸ್‌ಗಳಿಂದ ಹೊಡೆದು, ಕಾಲುಗಳಿಂದ ತುಳಿದಿದ್ದಾರೆ. ಕುಟುಂಬಕ್ಕೆ ರಕ್ಷಣೆ ನೀಡಬೇಕಾದ ಪೊಲೀಸರು ಆಕೆಯ ಸಹೋದರನನ್ನೇ ಬಂಧಿಸಿದ್ದಾರೆ ಎಂದು ಕಿಡಿಕಾರಿದರು.

ಇದನ್ನೂ ಓದಿ: ದಾವಣಗೆರೆಯಲ್ಲಿ 'ಐ ಲವ್ ಮೊಹಮ್ಮದ್' ಫ್ಲೆಕ್ಸ್, ಬ್ಯಾನರ್ ಅಳವಡಿಕೆ; ಹಿಂದೂ ಮನೆಗಳಿಗೆ ಕಲ್ಲೆಸೆತ!

ಕಾರ್ಲ್ ಮಾರ್ಕ್ಸ್ ನಗರದಲ್ಲಿ ಮತಾಂಧರ ಅಟ್ಟಹಾಸ:

ಜಿಲ್ಲಾಡಳಿತ ಮುಸ್ಲಿಮರ ತುಷ್ಟೀಕರಣ ಮಾಡುತ್ತಿದೆ. ಸಿದ್ದರಾಮಯ್ಯ ಸರ್ಕಾರ ಕೇಸ್ ಹಿಂಪಡೆದಿದ್ದೇ ನಗರ, ಜಿಲ್ಲೆ, ರಾಜ್ಯದಲ್ಲಿ ಮುಸ್ಲಿಂ ಗೂಂಡಾಗಳ ಅತಿರೇಕವಾಗಿ ವರ್ತಿಸಲು ಕಾರಣವಾಗಿದೆ. ಕಾರ್ಲ್ ಮಾರ್ಕ್ಸ್ ನಗರದಲ್ಲಿ ಮತಾಂಧರ ಅಟ್ಟಹಾಸ ಖಂಡನೀಯ. ಐ ಲವ್ ಮಹಮ್ಮದ್ ಎಂಬ ಬ್ಯಾನರ್ ಹಾಕಿದಾಗ ಹಿಂದೆ ಉತ್ತರ ಪ್ರದೇಶ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಅಹಿತಕರ ಘಟನೆಗಳು ನಡೆದಿವೆ. ಇದು ಸ್ವತಃ ಜಿಲ್ಲಾಡಳಿತ, ಪೊಲೀಸ್ ಇಲಾಖೆಗೂ ಅರಿವಿರುವ ವಿಚಾರ ಎಂದು ಹೇಳಿದರು.

ಹಿಂದೂಗಳ ಮೇಲೆ ತೋರಿಸುವ ದರ್ಪ ಕಲ್ಲು ತೂರಿದವರ ಮೇಲೆ ಏಕಿಲ್ಲ?

ಹಿಂದೂಗಳ ರಕ್ಷಣೆಗೆ ನಿಲ್ಲದ್ದು ಇಲಾಖೆ ವೈಫಲ್ಯ ತೋರಿಸುತ್ತದೆ. ಸಂತ್ರಸ್ಥ ಹಿಂದೂಗಳಿಗೆ ಸಾಂತ್ವನ ಹೇಳಲು ಸ್ಥಳಕ್ಕೆ ತೆರಳಿದ್ದ ಹಿಂದೂ ಕಾರ್ಯಕರ್ತರಿಗೆ ಪೊಲೀಸರು ಬೆದರಿಸಿ ಕಳಿಸಿದ್ದಾರೆ. ಕಲ್ಲು ತೂರಾಟ ಮಾಡಿದವರ ಮುಂದೆ ಯಾಕೆ ಇಷ್ಟು ಧೈರ್ಯ ತೋರಲಿಲ್ಲ? ಹಿಂದೂಗಳ ಮನೆಗಳ ಮೇಲೆ ಕಲ್ಲುಗಳು ಬಿದ್ದಿದ್ದರೂ, ನೀವೇ ಸುಮ್ಮನೇ ಇದನ್ನೆಲ್ಲಾ ಸೃಷ್ಟಿ ಮಾಡುತ್ತಿದ್ದೀರಿ ಅಂತಾ ನಮ್ಮ ಕಾರ್ಯಕರ್ತರನ್ನೇ ಪೊಲೀಸ್ ಅಧಿಕಾರಿಗಳು ದಬಾಯಿಸಿದ್ದಾರೆ. ಘಟನೆ ಬಗ್ಗೆ ಮುಸ್ಲಿಂ ಸಮಾಜದ ಜವಾಬ್ದಾರಿ ಏನು? ಅಲ್ಲಿರುವ ಕೆಲವೇ ಹಿಂದೂಗಳನ್ನು ಒಕ್ಕಲೆಬ್ಬಿಸಿ, ಲ್ಯಾಂಡ್ ಜಿಹಾದ್ ಮಾಡಲು ಹೊರಟಿರುವುದಕ್ಕೆ ಈ ಘಟನೆ ಸ್ಪಷ್ಟವಾಗಿದೆ ಎಂದು ಟೀಕಿಸಿದರು.

ಇದನ್ನೂ ಓದಿ: I Love Muhammad: ಯಾಕೆ ಈ ಟ್ರೆಂಡ್ ವೈರಲ್ ಆಗ್ತಿದೆ? ಏನಿದರ ಸತ್ಯ?

ಛತ್ರಪತಿ ಶಿವಾಜಿ ಮಹಾರಾಜರ ಫ್ಲೆಕ್ಸ್ ವಿಚಾರಕ್ಕೆ ಜಿಲ್ಲಾ ಸಚಿವ ಎಸ್ಸೆಸ್ ಮಲ್ಲಿಕಾರ್ಜುನ ಹಿಂದೂ ಕಾರ್ಯಕರ್ತರಿಗೆ ಹೀಯಾಳಿಸಿದ್ದರು. ಈಗ ಕಾರ್ಲ್ ಮಾರ್ಕ್ಸ್ ನಗರದ ಬಗ್ಗೆ ಏನು ಹೇಳುತ್ತಾರೆ ಎಂಬುದನ್ನು ಕೇಳಲು ಇಡೀ ಹಿಂದೂ ಸಮಾಜ ಕಾಯುತ್ತಿದೆ. ಹಿಂದೂ ಕಾರ್ಯಕರ್ತ ಸತೀಶ ಪೂಜಾರಿ ವಿರುದ್ಧ ಕ್ರಮ ಕೈಗೊಳ್ಳಲು ತೋರಿಸುವ ಜಾಣ್ಮೆ, ಅವಸರ, ಪ್ರಾಮಾಣಿಕತೆ ಮುಸ್ಲಿಂ ರೌಡಿ ಲಾಂಗ್‌ ಹಿಡಿದು, ಆನೆಕೊಂಡ ಭಾಗದಲ್ಲಿ ಸುತ್ತಾಡಿದರೂ ಯಾಕೆ ಕ್ರಮ ಕೈಗೊಂಡಿಲ್ಲ? ಸತೀಶ ಪೂಜಾರಿಗೆ ಅವಹೇಳನಾಕಾರಿಯಾಗಿ ಮಾತನಾಡಿದ ಮುಸ್ಲಿಂ ಗೂಂಡಾ ಬಗ್ಗೆ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಸಿದ್ದಲಿಂಗ ಸ್ವಾಮಿ ಪ್ರಶ್ನಿಸಿದರು.

ಸಮಿತಿ ಹಿರಿಯ ಮುಖಂಡ ವಿನಾಯಕ ರಾನಡೆ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ಮಾಜಿ ಮೇಯರ್ ಗಳಾದ ಎಸ್.ಟಿ. ವೀರೇಶ, ಬಿ.ಜಿ.ಅಜಯಕುಮಾರ, ಧನಂಜಯ ಕಡ್ಲೇಬಾಳು,

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!
ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!