ದೇಶದ ಅತ್ಯುತ್ತಮ ಟಾಪ್ 20 ಸ್ಮಾರ್ಟ್‌ಸಿಟಿಗಳಲ್ಲಿ ದಾವಣಗೆರೆ| ಟಾಪ್ 20 ನಗರಗಳಿಗೆ ‘100 ದಿವಸದ ಚಾಲೆಂಜ್’ ಸ್ಪರ್ಧೆ| ಬಾಟಮ್-20ಯಲ್ಲಿರುವ ನಗರಗಳನ್ನು 100 ದಿನದಲ್ಲಿ ಮೇಲೆತ್ತಬೇಕು
ನವದೆಹಲಿ[ಫೆ.10]: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ‘ಸ್ಮಾರ್ಟ್ ಸಿಟಿ’ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿರುವ ದೇಶದ ಟಾಪ್ 20 ನಗರಗಳ ಪೈಕಿ ದಾವಣಗೆರೆ (15ನೇ ಸ್ಥಾನ) ಕೂಡಾ ಸ್ಥಾನ ಪಡೆದುಕೊಂಡಿದೆ. ಜೊತೆಗೆ ಈ ಕ್ಷೇತ್ರದಲ್ಲಿ ಕಳಪೆ ಸಾಧನೆ ಮಾಡಿದ ಮತ್ತೊಂದು ನಗರವನ್ನು ಮೇಲಕ್ಕೆತ್ತುವ ಹೊಣೆಯನ್ನೂ ಇದೀಗ ದಾವಣಗೆರೆಗೆ ವಹಿಸಲಾಗುತ್ತಿದೆ.
ಸ್ಮಾರ್ಟ್‌ಸಿಟಿ ಯೋಜನೆಯನ್ನು ಮತ್ತಷ್ಟುಚುರುಕುಗೊಳಿಸಲು ಮುಂದಾಗಿರುವ ಕೇಂದ್ರ ಸರ್ಕಾರ, ಟಾಪ್ 20 ನಗರಗಳ ಪಟ್ಟಿಯೊಂದನ್ನು ಬಿಡುಗಡೆ ಮಾಡಿದೆ. ಯೋಜನೆಯಲ್ಲಿ ಉತ್ತಮ ಪ್ರಗತಿ ಸಾಧಿಸಿರುವ ಟಾಪ್-20 ನಗರಗಳನ್ನು, ಹಿಂದೆ ಬಿದ್ದಿರುವ ಬಾಟಮ್-20 ನಗರಗಳನ್ನು ಮೇಲೆತ್ತಲು ‘ಸೋದರ ನಗರ’ಗÜಳೆಂದು ಸಂಯೋಜಿಸಲಾಗಿದೆ.
undefined
ಟಾಪರ್ಸ್
ಪ್ರಧಾನಿ ಮೋದಿ ಅವರ ತವರು ರಾಜ್ಯ ಅಹಮದಾಬಾದ್ ಯೋಜನೆ ಅನುಷ್ಠಾನದಲ್ಲಿ ನಂ.1 ಸ್ಥಾನ ಪಡೆದಿದೆ. ನಂತರದ ಟಾಪ್-20 ಸ್ಥಾನಗಳಲ್ಲಿ ಕ್ರಮವಾಗಿ ನಾಗಪುರ, ತಿರುಪ್ಪುರ, ರಾಂಚಿ, ಭೋಪಾಲ್, ಸೂರತ್, ಕಾನ್ಪುರ, ಇಂದೋರ್, ವಿಶಾಖಪಟ್ಟಣ, ವೆಲ್ಲೂರು, ವಡೋದರಾ, ನಾಸಿಕ್, ಆಗ್ರಾ, ವಾರಾಣಸಿ, ದಾವಣಗೆರೆ, ಕೋಟಾ, ಪುಣೆ, ಉದಯಪುರ, ಡೆಹ್ರಾಡೂನ್ ಹಾಗೂ ಅಮರಾವತಿ ಇವೆ.
ಸೋದರ ನಗರಗಳು:
ಈ ನಗರಗಳನ್ನು ಯೋಜನೆ ಅನುಷ್ಠಾನದಲ್ಲಿ ಹಿಂದೆ ಬಿದ್ದಿರುವ ಬಾಟಮ್-20 ನಗರಗಳ ಜತೆ ಸಂಯೋಜಿಸಿ ಮಾರ್ಗದರ್ಶನ ಮಾಡುವಂತೆ ಸೂಚಿಸಲಾಗಿದೆ. ಈ ಪ್ರಕಾರ, ಅಹಮದಾಬಾದ್ ನಗರವು ಬಾಟಮ್-20ಯಲ್ಲಿರುವ ಚಂಡೀಗಢಕ್ಕೆ, ವಾರಾಣಸಿಯು ಅಮೃತಸರಕ್ಕೆ ಸಹಾಯ ಮಾಡಲಿವೆ. ಶಾಖಪಟ್ಟಣ ಹಾಗೂ ಸೂರತ್‌ಗಳು ಕ್ರಮವಾಗಿ ದಿಯು ಹಾಗೂ ಸಹಾರನ್‌ಪುರಗಳಿಗೆ, ಭೋಪಾಲ್ ನಗರವು ಮಿಜೋರಂನ ಐಜ್ವಾಲ್‌ಗೆ ಸಹಾಯಹಸ್ತ ಚಾಚಲಿವೆ.
100 ದಿನಗಳ ಚಾಲೆಂಜ್:
ಈ ರೀತಿಯಾಗಿ ‘ಸೋದರ ನಗರ’ಗಳಾಗಿ ಜೋಡಿಯಾಗಲಿರುವ ನಗರಗಳು ಫೆಬ್ರವರಿ 20ರಂದು ಒಪ್ಪಂದಕ್ಕೆ ಸಹಿ ಹಾಕಲಿವೆ ಎಂದು ಕೇಂದ್ರ ನಗರಾಭಿವೃದ್ಧಿ ಸಚಿವಾಲಯದ ಅಧಿಕಾರಿ ತಿಳಿಸಿದ್ದಾರೆ. ಸಹಿ ಹಾಕಿದ 100 ದಿನಗಳಲ್ಲಿ ಹಿಂದೆ ಬಿದ್ದಿರುವ ನಗರಗಳನ್ನು ರಾರಯಂಕ್‌ನಲ್ಲಿ ಮೇಲೆತ್ತಲು ‘100 ದಿವಸಗಳ ಚಾಲೆಂಜ್’ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.