ದಾವಣಗೆರೆಯ ಡಿಸಿ - ಸಿಇಒ ಮದುವೆ : ಒಂದಾಗುತ್ತಿದೆ ಪ್ರೀತಿ

Published : Feb 02, 2019, 08:37 AM ISTUpdated : Feb 02, 2019, 03:13 PM IST
ದಾವಣಗೆರೆಯ ಡಿಸಿ - ಸಿಇಒ ಮದುವೆ : ಒಂದಾಗುತ್ತಿದೆ ಪ್ರೀತಿ

ಸಾರಾಂಶ

ಇಲ್ಲೊಂದು ಅಪರೂಪದ ಪ್ರೀತಿಯು ಒಂದಾಗುತ್ತಿದೆ. ದಾವಣಗೆರೆ ಜಿಲ್ಲಾಧಿಕಾರಿ ಹಾಗೂ ಇಲ್ಲಿನ ಸಿಇಒ ಇದೇ ಪ್ರೇಮಿಗಳ ದಿನದಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. 

ದಾವಣಗೆರೆ: ಇದು ಬಹು ಅಪರೂಪದ ಪ್ರಸಂಗ. ಕಳೆದ ನಾಲ್ಕು ವರ್ಷಗಳಿಂದ ಪ್ರೇಮಿಗಳಾಗಿದ್ದ ಐಎಎಸ್ ಅಧಿಕಾರಿಗಳಿಬ್ಬರು ಇದೀಗ ಸಪ್ತಪದಿ ತುಳಿಯಲು ಅಣಿಯಾಗಿದ್ದಾರೆ. 

"

ರಾಜ್ಯದಲ್ಲಿ ಶೌಚಾಲಯ ನಿರ್ಮಾಣದ ಮೂಲಕ ಕ್ರಾಂತಿಯನ್ನೇ ಮಾಡಿದ್ದ ಜಿಪಂ ಸಿಇಒ ಎಸ್.ಅಶ್ವತಿ ಹಾಗೂ ದಾವಣ ಗೆರೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಫೆ. 14ರ ಪ್ರೇಮಿಗಳ ದಿನಾಚರಣೆಯಂದು ಕೇರಳದ ಕಲ್ಲಿಕೋಟೆಯಲ್ಲಿ ದಾಂಪತ್ಯ ಜೀವನಕ್ಕೆ ಅಡಿ ಇಡಲಿದ್ದಾರೆ.


ಜನ ಸ್ನೇಹಿ ಅಧಿಕಾರಿಯೆಂದೇ ಗುರುತಿಸಲ್ಪಡುವ ಸಿಇಒ ಅಶ್ವತಿ ಐಎಎಸ್ ಅಧಿಕಾರಿಯೊಬ್ಬರನ್ನು ವಿವಾಹವಾಗಲಿದ್ದಾರೆ ಎಂಬ ವಿಚಾರ ಕಳೆದ 2 - 3 ತಿಂಗಳಿನಿಂದಲೂ ಹರಿದಾಡುತ್ತಿತ್ತು. ಆದರೆ ವರ ಯಾರು ಎಂಬ ವಿಚಾರ ಯಾರಿಗೂ ತಿಳಿದಿರಲಿಲ್ಲ. ಎಸ್. ಅಶ್ವತಿ ಕಲ್ಲಿಕೋಟೆಯವರಾದರೆ, ಬಗಾದಿ ಗೌತಮ್ ವಿಶಾಖಪಟ್ಟಣ ಮೂಲದವರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ದಾಖಲೆಯತ್ತ ಸಿಎಂ ಸಿದ್ದರಾಮಯ್ಯ ಹೆಜ್ಜೆ: 17ನೇ ಬಜೆಟ್‌ನತ್ತ ಎಲ್ಲರ ಚಿತ್ತ
ವಿಪಕ್ಷ ಆಹ್ವಾನ ನನ್ನಿಂದ ಸ್ವೀಕಾರ ಹೇಳಿದೆಡೆಗೆ ಬರಲು ನಾನು ರೆಡಿ: ಡಿಕೆಶಿ ಚಾಲೆಂಜ್