ಕಾಫಿನಾಡಿನ ಇನಾಂ ದತ್ತಾತ್ರೇಯ ಪೀಠದಲ್ಲಿ ಶ್ರೀರಾಮಸೇನೆ ವತಿಯಿಂದ ನಡೆಯುತ್ತಿರೋ 20ನೇ ವರ್ಷದ ದತ್ತಮಾಲಾ ಅಭಿಯಾನಕ್ಕೆ ಇಂದು ಅಧಿಕೃತ ಚಾಲನೆ ದೊರೆತಿದೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಅ.30): ಕಾಫಿನಾಡಿನ ಇನಾಂ ದತ್ತಾತ್ರೇಯ ಪೀಠದಲ್ಲಿ ಶ್ರೀರಾಮಸೇನೆ ವತಿಯಿಂದ ನಡೆಯುತ್ತಿರೋ 20ನೇ ವರ್ಷದ ದತ್ತಮಾಲಾ ಅಭಿಯಾನಕ್ಕೆ ಇಂದು ಅಧಿಕೃತ ಚಾಲನೆ ದೊರೆತಿದೆ. ನಗರದ ಶಂಕರಮಠದಲ್ಲಿ 50ಕ್ಕೂ ಹೆಚ್ಚು ದತ್ತಭಕ್ತರು ಮಾಲಾಧಾರಿಗಳಾಗಿ, ಇಂದಿನಿಂದ 7 ದಿನಗಳ ಕಾಲ ವ್ರತಾಚರಣೆಯಲ್ಲಿದ್ದು, ನವೆಂಬರ್ 5ರಂದು ದತ್ತಪೀಠದಲ್ಲಿ ವಿಶೇಷ ಹೋಮ-ಹವನ ನಡೆಸಲಿದ್ದಾರೆ. ಈ ವರ್ಷದ ದತ್ತಮಾಲಾ ಅಭಿಯಾನಕ್ಕೆ ನಾಗಸಾಧು ಕೂಡ ಆಗಮಿಸಲಿದ್ದಾರೆ. ಇಂದಿನಿಂದ ಜಿಲ್ಲಾದ್ಯಂತ ಪೊಲೀಸ್ ಇಲಾಖೆ ಕೂಡ ಹೈ ಅಲರ್ಟ್ ಘೋಷಿಸಿದೆ.
20ನೇ ವರ್ಷದ ದತ್ತಮಾಲಾ ಅಭಿಯಾನ: ಕರ್ನಾಟಕದ ಅಯೋಧ್ಯೆ ಎಂದೇ ಕರೆಸಿಕೊಳ್ಳೋ ಚಿಕ್ಕಮಗಳೂರು ತಾಲೂಕಿನ ಇನಾಂ ದತ್ತಾತ್ರೇಯ ಪೀಠದಲ್ಲಿ ಇಂದಿನಿಂದ ದತ್ತಮಾಲಾ ಅಭಿಯಾನ ಸಂಭ್ರಮ.ಶ್ರೀರಾಮಸೇನೆ ನಡೆಸುತ್ತಿರುವ ದತ್ತಮಾಲಾ ಅಭಿಮಾನಕ್ಕೆ 20 ವರ್ಷಗಳು ತುಂಬಿತ್ತಿರುವ ಹಿನ್ನೆಲೆಯಲ್ಲಿ ಈಭಾರೀ ಅತ್ಯಂತ ಸಂಭ್ರಮದಿಂದ ಆಚರಣೆ ಮಾಡಲು ಶ್ರೀರಾಮಸೇನೆ ನಿರ್ಧಾರಿಸಿದೆ. ಅದರಭಾಗಿ ಇಂದು ಚಿಕ್ಕಮಗಳೂರು ಸೇರಿದಂತೆ ರಾಜ್ಯಾದ್ಯಂತ ಸಾವಿರಾರು ಕಾರ್ಯಕರ್ತರು ಮಾಲಾಧಾರಿಗಳಾಗಿದ್ದು, ನವೆಂಬರ್ 5ನೇ ತಾರೀಖಿನಂದು ನಗರದಲ್ಲಿ ಶೋಭಾಯಾತ್ರೆ ನಡೆಸಿ ದತ್ತಪೀಠದಲ್ಲಿ ವಿಶೇಷ ಹೋವ-ಹವನ ನಡೆಸಿ ದತ್ತಪಾದುಕೆ ದರ್ಶನ ಪಡೆಯಲಿದ್ದಾರೆ.
ಸನಾತನ ಧರ್ಮವು ಜಗತ್ತಿನಲ್ಲಿಯೇ ಶ್ರೇಷ್ಠವಾಗಿದೆ: ಸಂಸದ ಬಚ್ಚೇಗೌಡ
ಈ ಬಾರಿಯ ದತ್ತಮಾಲಾ ಅಭಿಯಾನಕ್ಕೆ ನಾಗಸಾಧುಗಳು ಕೂಡ ಸಾಥ್ ನೀಡಲಿದ್ದಾರೆ. ದತ್ತಪೀಠ ಸಂಪೂರ್ಣ ಹಿಂದೂಗಳ ಪೀಠ. ಅಲ್ಲಿ ಯಾವ ಬಾಬಾಬುಡನ್ ಇಲ್ಲ. ದತ್ತಪೀಠದಲ್ಲಿ ಯಾವ ಶಾಖಾದ್ರಿಗೂ ಕೆಲಸವಿಲ್ಲ. ಶಾಖಾದ್ರಿ ನಾಗೇನಹಳ್ಳಿಗೆ ಹೋಗಿ ಅವರ ಕಾರ್ಯ ಮಾಡಿಕೊಳ್ಳಲಿ. ಶಾಖಾದ್ರಿ ಕುಟುಂಬ ಜಿಂಕೆ-ಚಿರತೆ ಕೇಸಿನಲ್ಲಿ ಸಿಕ್ಕಿಬಿದ್ದಿದ್ದಾರೆ. ದತ್ತಪೀಠದ ಹೆಸರಿನಲ್ಲಿ ಅವ್ಯವಹಾರ ಮಾಡುತ್ತಿದ್ದಾರೆ. ದತ್ತಪೀಠದಲ್ಲಿರುವ ವನ್ಯಸಂಪತ್ತು ಹಾಗೂ ವನ್ಯಜೀವಿಯನ್ನ ಲೂಟಿ ಮಾಡುತ್ತಿದ್ದಾರೆ. ಶಾಖಾದ್ರಿಯಮ್ನ ಹಿಂದೂ ಧರ್ಮಪೀಠದಲ್ಲಿ ಇರಲು ಒಪ್ಪಲು ಸಾಧ್ಯವಿಲ್ಲ. ಶಾಖಾದ್ರಿಯನ್ನ ದತ್ತಪೀಠದಿಂದ ಜಿಲ್ಲಾಡಳಿತ ಹಾಕುತ್ತೋ ಇಲ್ಲ ಶ್ರೀರಾಮಸೇನೆ ಹಾಕ್ಬೇಕೋ ಎಂದು ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಪೊಲೀಸ್ ಇಲಾಖೆಯಿಂದ ಹೈ ಅಲರ್ಟ್: ದತ್ತಪೀಠಕ್ಕೆ ಹಿಂದೂ ಅರ್ಚಕರ ನೇಮಕ ಕೂಡ ಆಗಿದೆ. ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿನ ದೇವಾಲಯದಲ್ಲಿ ಶಾಖಾದ್ರಿಗೆ ಏನು ಕೆಲಸ ಎಂದು ಶ್ರೀರಾಮಸೇನೆ ಪ್ರಶ್ನಿಸಿದೆ.ದತ್ತಪೀಠದಲ್ಲಿ ವಸ್ತ್ರ ಸಂಹಿತೆ ಜಾರಿ ಮಾಡಬೇಕು.ಪುರುಷರು-ಮಹಿಳೆಯರು ಹಿಂದೂ ಧರ್ಮದ, ಸಂಸ್ಕೃತಿಯ ವಸ್ತ್ರಗಳನ್ನೇ ಧರಿಸಿ ಬರುವಂತೆ ಸರ್ಕಾರ ಕಾನೂನು ರಚಿಸಬೇಕು. ದತ್ತಪೀಠದಲ್ಲಿನ ಗೋರಿಗಳನ್ನ ನಾಗೇನಗಳ್ಳಿಗೆ ಸ್ಥಳಾಂತರಿಸಬೇಕು ಎಂದು ಶ್ರೀರಾಮಸೇನೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.
ನಟಿ ಶುಭಾ ಪೂಂಜಾರ ಜೊತೆ ಅಸಭ್ಯ ವರ್ತನೆ ಎನ್ನುವುದು ಸತ್ಯಕ್ಕೆ ದೂರ: ಸ್ಥಳೀಯರ ವಾದ
ಈ ನಡುವೆ ಪೊಲೀಸ್ ಇಲಾಖೆ ಕೂಡ ದತ್ತಪೀಠ ಹಾಗೂ ಜಿಲ್ಲೆಯ ಸೂಕ್ಷ್ಮ ಪ್ರದೇಶಗಳಲ್ಲಿ ಹದ್ದಿನ ಕಣ್ಣಿಟ್ಟಿದೆ. ಮುಂಜಾಗೃತ ಕ್ರಮವಾಗಿ ಎಸ್ಪಿ ವಿಕ್ರಂ ಅಮಟೆ ದತ್ತಪೀಠಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಒಟ್ಟಾರೆ, 20ನೇ ವರ್ಷದ ದತ್ತಮಾಲಾಧಾರಣೆ ಆಗಿರುವುದರಿಂದ ಈ ಬಾರಿಯ ದತ್ತಪೀಠದ ದತ್ತಮಾಲಾಧಾರಣೆ ಹಿಂದೆಂದಿಗಿಂತಲೂ ಅದ್ಧೂರಿಯಾಗಿ ನಡೆಯೋ ಎಲ್ಲಾ ಮುನ್ಸೂಚನೆಗಳಿವೆ. ಈ ನಡುವೆ ಪೊಲೀಸ್ ಇಲಾಖೆ ಕೂಡ ದತ್ತಪೀಠದಲ್ಲಿ ಶಾಂತಿ ಕಾಪಾಡಲು ಸಕಲ ಸಿದ್ಧತೆ ಮಾಡ್ಕೊಂಡಿದೆ. ಆದ್ರೆ, ಕಾಫಿನಾಡಿಗರು ಯಾವುದೇ ಅಹಿತಕರ ಘಟನೆ ನಡೆಯದೆ ಶಾಂತಿಯುತವಾಗಿ ಅಭಿಯಾನ ಮುಗಿದ್ರೆ ಸಾಕು ಅಂತಿದ್ದಾರೆ.