ಬೆನ್ನುನೋವಿನ ಕಾರಣ ಜಾಮೀನು ಅರ್ಜಿ ಸಲ್ಲಿಸಿದ್ದ ನಟ ದರ್ಶನ್‌ಗೆ ಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಬಳ್ಳಾರಿ ಜೈಲಿನಲ್ಲಿರುವ ದರ್ಶನ್ ಶೀಘ್ರದಲ್ಲೇ ಕುಟುಂಬಸ್ಥರನ್ನು ಭೇಟಿಯಾಗಲಿದ್ದಾರೆ.
ಬೆಂಗಳೂರು (ಅ.30): ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಪಾಲಾಗಿದ್ದ ನಟ ದರ್ಶನ್‌ಗೆ ರಿಲೀಫ್ ಸಿಕ್ಕಿದೆ. ಬೆನ್ನುನೋವಿನ ಕಾರಣ ಹೇಳಿ ಕೋರ್ಟ್‌ಗೆ ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದ ದರ್ಶನ್ ತೂಗುದೀಪ ಮನವಿಯನ್ನು ಕೋರ್ಟ್ ಪುರಸ್ಕರಿಸಿದ್ದು, ಜಾಮೀನು ದಯಪಾಲಿಸಿದೆ. ಮಧ್ಯಂತರ ಜಾಮೀನು ಸಿಕ್ಕ ವಿಚಾರ ಕೇಳಿ ಬಳ್ಳಾರಿ ಜೈಲಿನಲ್ಲಿಯೇ ದರ್ಶನ್ ಖುಷಿ ಪಟ್ಟಿದ್ದಾರೆ. ಜೈಲು ಸಿಬ್ಬಂದಿಯಿಂದ ದರ್ಶನ್‌ಗೆ ಈ ಬಗ್ಗೆ ಮಾಹಿತಿ ಸಿಕ್ಕಿದೆ. ಸದ್ಯ ಬಳ್ಳಾರಿ ಸೆಂಟ್ರಲ್ ಜೈಲಿನ ಹೈ ಸೆಕ್ಯೂರಿಟಿ ಸೆಲ್‌ನಲ್ಲಿ ದರ್ಶನ್ ಬಂಧಿಯಾಗಿದ್ದು, ಕೆಲವೇ ಹೊತ್ತಿನಲ್ಲಿ ಕುಟುಂಬಸ್ಥರನ್ನು ಭೇಟಿಯಾಗಲಿದ್ದಾರೆ. 111.30ರ ಬಳಿಕ ಪತ್ನಿ ವಿಜಯಲಕ್ಷ್ಮೀ ಹಾಗೂ ಕುಟುಂಬಸ್ಥರು ಜೈಲಿಗೆ ಆಗಮಿಸಲಿದ್ದಾರೆ.
'ದರ್ಶನ್‌ಗೆ ಸ್ಟ್ರೋಕ್ ಆಗಬಹುದು..' ಹೈಕೋರ್ಟ್‌ಗೆ ತಿಳಿಸಿದ ಕಿಲ್ಲಿಂಗ್ ಸ್ಟಾರ್ ಪರ ವಕೀಲ
ನಟ ದರ್ಶನ್ ಮಧ್ಯಂತರ ಜಾಮೀನು ಮಂಜೂರು ಸಿಕ್ಕಿದ ಬೆನ್ನಲ್ಲಿಯೇ ಬಳ್ಳಾರಿ ಜೈಲು ಮುಂಭಾಗ ಆತನ ಅಭಿಮಾನಿಗಳು ಕೂಡ ಸೇರುತ್ತಿದ್ದಾರೆ.ದರ್ಶನ್ ಪತ್ನಿ ವಿಜಯಲಕ್ಷ್ಮಿ, ಸಹೋದರ ದಿನಕರ್, ನಟ ದನ್ವೀರ್ ಹಾಗೂ ಆಪ್ತರು ಜೈಲಿನ ಬಳಿ ಬರುವ ನಿರೀಕ್ಷೆ ಇದೆ. ಜಾಮೀನು ನಿರೀಕ್ಷೆಯಲ್ಲಿರುವ ದರ್ಶನ್ ಕುಟುಂಬಸ್ಥರಿಗೆ ಇದರಿಂದ ನೆಮ್ಮದಿಯಾಗಿದ. ಬಳ್ಳಾರಿಯ ಕಪಗಲ್ ರಸ್ತೆ ಆಪ್ತರ ಮನೆಯಲ್ಲಿ ದರ್ಶನ್ ಕುಟುಂಬದವರು ತಂಗಿದ್ದಾರೆ. ಈಗಾಗಲೇ ಜೈಲಾಧಿಕಾರಿಗಳೊಂದಿಗೆ ಕುಟುಂಬಸ್ಥರು ಮಾತನಾಡಿದ್ದಾರೆ. ಜಾಮೀನಿಗೆ ಸಂಬಂಧಿಸಿದ ಕೆಲ ಪ್ರಕ್ರಿಯೆ ಮುಗಿದ ಬಳಿಕ ದರ್ಶಣ್ ಹೊರಬರಲಿದ್ದಾರೆ.
ದಾಸನ ಬೆನ್ನುನೋವು ಜೈಲು ಅಧಿಕಾರಿಗಳಿಗೆ ತಲೆನೋವು; ದರ್ಶನ್ ಇನ್ ಡೇಂಜರ್!