ಜೈಲ್ ದರ್ಬಾರ್​ಗೆ ದರ್ಶನ್ ಕೊಟ್ಟಿದ್ದು 2 ಕೋಟಿ..?

By Santosh Naik  |  First Published Aug 30, 2024, 9:04 PM IST

ದರ್ಶನ್‌ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ನೀಡಿದ ಪ್ರಕರಣದಲ್ಲಿ ಕೋಟ್ಯಂತರ ರೂಪಾಯಿ ವ್ಯವಹಾರ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಈ ಸಂಬಂಧ ಕಾರಾಗೃಹ ಇಲಾಖೆ ಡಿಜಿಪಿಗೆ ಸರ್ಕಾರ ನೋಟಿಸ್ ಜಾರಿ ಮಾಡಿದೆ.


ಬೆಂಗಳೂರು (ಆ.30): ದರ್ಶನ್‌ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಪ್ರಕರಣ ಸಂಬಂಧಪಟ್ಟಂತೆ ಮತ್ತೊಂದು ಎಕ್ಸ್‌ಕ್ಲೂಸಿವ್‌ ಆದ ವರದಿಗಳು ಬಂದಿವೆ. ಕಾರಾಗೃಹ ಇಲಾಖೆ ಡಿಜಿಪಿಗೆ ಈಗ ರಾಜಾತಿಥ್ಯದ ಸಂಕಷ್ಟ ಶುರುವಾಗಿದೆ. ರಾಜಾತಿಥ್ಯ ನೀಡಲು ಜೈಲು ಅಧಿಕಾರಿಗಳಿಗೆ ಕೋಟ್ಯಂತರ ರೂಪಾಯಿ ಸಂದಾಯ ಆಗಿದ್ಯಾ ಎನ್ನುವ ಪ್ರಶ್ನೆಗಳು ಎದ್ದಿವೆ. ಇದೇ ಕಾರಣಕ್ಕೆ ಡಿಜಿಪಿ ಮಾಲಿನಿ ಕೃಷ್ಣಮೂರ್ತಿ ವಿರುದ್ಧ ಸರ್ಕಾರ ಕೂಡ ಕ್ರಮಕ್ಕೆ ಮುಂದಾಗಿದೆ. ಡಿಜಿಪಿ ಮಾಲಿನಿ ಕೃಷ್ಣಮೂರ್ತಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ನೋಟಿಸ್ ನೀಡಿ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಜೈಲಲ್ಲಿ ಎಲ್ಲ ವ್ಯವಸ್ಥೆಗಾಗಿ ದರ್ಶನ್‌ 2 ಕೋಟಿ ರೂಪಾಯಿ ನೀಡಿದ್ದರು ಎಂದು ಹೇಳಲಾಗಿದೆ.

ರಾಜಾತಿಥ್ಯ ನೀಡುವ ಸಲುವಾಗಿಯೇ ದರ್ಶನ್‌ ಬಂಧಿಖಾನೆ ಅಧಿಕಾರಿಗಳಿಗೆ ಕೋಟ್ಯಾಂತರ ರೂ. ಸಂದಾಯ ಮಾಡಿದ್ದರು. ಬಂಧಿಖಾನೆಯ ಹಲವು ಅಧಿಕಾರಿಗಳಿಗೆ ಲಕ್ಷಲಕ್ಷ ಸಂದಾಯವಾಗಿದೆ ಎನ್ನುವ ಮಾಹಿತಿಗಳಿವೆ. ಇದೇ ವಿಚಾರದಲ್ಲಿ ಕಾರಾಗೃಹ ಡಿಜಿಪಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. ರಾಜ್ಯ ಮುಖ್ಯ ಕಾರ್ಯದರ್ಶಿಯಿಂದ ಕಾರಾಗೃಹ ಡಿಜಿಪಿಗೆ ನೋಟಿಸ್ ಹೋಗಿದ್ದು.  ಜೈಲು ಅಕ್ರಮದ ಬಗ್ಗೆ ಉತ್ತರ ನೀಡುವಂತೆ ಕೇಳಿದ ಸಿಎಸ್ ಶಾಲಿನಿ ರಜನೀಶ್ ಹೇಳಿದ್ದಾರೆ.

ಕಾರಾಗೃಹ ಡಿಜಿಪಿಗೆ ನೋಟಿಸ್‌ನಲ್ಲಿರೋ ಪ್ರಶ್ನೆಗಳೇನು?: ಜೈಲಿನ ಅಕ್ರಮದ ಬಗ್ಗೆ ಮಾಧ್ಯಮ ವರದಿಗಳು ಬರುತ್ತಲೇ ಇರುತ್ತವೆ ಇವುಗಳನ್ನು ತಡೆಗಟ್ಟುವ ಬಗ್ಗೆ ನೀವು ತೆಗೆದುಕೊಂಡ ಕ್ರಮಗಳೇನು? ಜೈಲಿನ ಅಕ್ರಮಗಳು ಮೊದಲೇ ನಿಮ್ಮ ಗಮನಕ್ಕೆ ಬಂದಿರಲಿಲ್ವಾ...? ನೀವು ಕೂಡ ಈ ಅಕ್ರಮದಲ್ಲಿ ಭಾಗಿಯಾಗಿದ್ದೀರಿ ಎಂದ್ಯಾಕೆ ಭಾವಿಸಬಾರದು? ಎಂದು ಪ್ರಶ್ನೆಗಳನ್ನು ಕೇಳಲಾಗಿದೆ.

Tap to resize

Latest Videos

suvarnanews exclusive: ರೌಡಿ ವಿಲ್ಸನ್‌ ಗಾರ್ಡನ್ ನಾಗನ ಜತೆ ಜೈಲಲ್ಲಿ ದರ್ಶನ್‌ ಸಿಗರೇಟ್‌ ಸೇದುವ ಫೋಟೋ ವೈರಲ್!

ಜೈಲಲ್ಲಿ ದರ್ಶನ್​ಗೆ ಎಲ್ಲ ವ್ಯವಸ್ಥೆ ನೀಡಲು 2 ಕೋಟಿ ಲಂಚ ಸ್ವೀಕಾರ ಮಾಡಲಾಗಿದೆ ಎನ್ನುವ ಗುರುತರ ಆರೋಪ ಕೂಡ ಕೇಳಿ ಬಂದಿದೆ. ಓರ್ವ ರಾಜಕಾರಣಿ ಮೂಲಕ 2 ಕೋಟಿ ಸಂದಾಯದ ಅನುಮಾನ ವ್ಯಕ್ತವಾಗಿದೆ. ಜೈಲಿನ ಅಕ್ರಮಗಳ ತನಿಖೆಯಲ್ಲಿ ಸ್ಪೆಷಲ್‌ ಟೀಮ್‌ ಈ  ಸ್ಫೋಟಕ ಅಂಶ ಬಿಚ್ಚಿಟ್ಟಿದೆ. ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಚಂದ್ರಗುಪ್ತ ನೇತೃತ್ವದ ತಂಡ ಇದರ ತನಿಖೆ ನಡೆಸುತ್ತಿದೆ. ತನಿಖೆ ಆರಂಭ ಬೆನ್ನಲ್ಲೇ ದರ್ಶನ್​ಗೆ ರಾಜಾತಿಥ್ಯದ ಸೀಕ್ರೆಟ್ ಬಯಲಾಗಿದೆ. ಜೈಲಿನಲ್ಲಿ ರೆಸಾರ್ಟ್ ರೀತಿ ಸೌಲಭ್ಯಕ್ಕಾಗಿ ದರ್ಶನ್ ಹಣ ಸಂದಾಯ ಮಾಡಲಾಗಿದೆ. ಪೊಲೀಸರ ಮುಂದೆ ಕೂಡ ದರ್ಶನ್‌ ಎಲ್ಲಾ ವಿವರಗಳನ್ನು ಬಾಯಿಬಿಟ್ಟಿದ್ದಾರೆ. ನಟ ದರ್ಶನ್ ಹೇಳಿದ್ದು ಕೇಳಿ ತನಿಖಾಧಿಕಾರಿಗಳು ಕೂಡ ಗಾಬರಿಯಾಗಿದ್ದಾರೆ. ಸ್ಪೆಷಲ್ ಟೀಂ ವರದಿ ಬಳಿಕ ಮತ್ತಷ್ಟು ಅಧಿಕಾರಿಗಳ ವಿರುದ್ಧ ಕ್ರಮ ಆಗುವ ಸಾಧ್ಯತೆ ಇದೆ.

ರಸ್ತೆ ದಾಟಲು ಒದ್ದಾಡುತ್ತಿದ್ದ ಅನುಪಮಾ ಗೌಡರನ್ನು ಸೇವ್ ಮಾಡಿದ ನಟ ದರ್ಶನ್; ವಿಡಿಯೋ ವೈರಲ್!

click me!