
ಬೆಳಗಾವಿ (ಆ.30): ಓಮಾನ್ ದೇಶದಲ್ಲಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಗೋಕಾಕ ಮೂಲದ ನಾಲ್ವರು ಸಜೀವ ದಹನವಾಗಿರುವ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ಗೋಕಾಕ ನಗರದ ಪವನ್‌ಕುಮಾರ್ ತಹಶೀಲ್ದಾರ್, ಪೂಜಾ ತಹಶಿಲ್ದಾರ್, ವಿಜಯಾ ತಹಶಿಲ್ದಾರ್, ಅದಿಶೇಷ ಬಸವರಾಜ್ ಮೃತ ದುದೈವಿಗಳಾಗಿದ್ದಾರೆ.
ಬಿಕಿನಿ ಹಾಕಿ ಬೀಚ್‌ಗಿಳಿದ ಸ್ತ್ರೀವಾದಿ ಇನ್‌ಫ್ಲುಯೆನ್ಸರ್! ತಡೆದ ಉಡುಪಿ ಪೊಲೀಸರ ವಿರುದ್ಧ ಕಿಡಿ!
ಓಮಾನ್ ನಗರದ ಸಲಾಲಾ ನಗರದಿಂದ ಮುಸ್ಕತ್‌ಗೆ ತೆರಳುವಾಗ ಹೈಮಾ ಬಳಿ ಟ್ರಕ್ ಒಂದು ಗುದ್ದಿ ಈ ಘಟನೆ ನಡೆದಿದ್ದು, ಬೆಂಕಿಯಲ್ಲಿ ಬೆಂದು ಹೋಗಿದ್ದಾರೆ. ಘಟನೆಯಲ್ಲಿ ಓರ್ವನಿಗೆ ಗಾಯವಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ವಿದೇಶಿ ಮಾಧ್ಯಮಗಳು ಸುದ್ದಿ ಮಾಡಿದೆ. ಸದ್ಯ ಹೈಮಾ ಆಸ್ಪತ್ರೆಯ ಶವಾಗಾರದಲ್ಲಿ ಶವ ಇರಿಸಲಾಗಿದೆ. ಮೃತ ದೇಹಗಳನ್ನು ಭಾರತಕ್ಕೆ ತರಲು ವಿದೇಶಾಂಗ ಇಲಾಖೆಗೆ ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಮನವಿ ಮಾಡಿದ್ದಾರೆ.
ಸಂಗೀತಾಗೆ ಯೂತ್ ಐಕಾನ್ ಪ್ರಶಸ್ತಿ ಗ್ಯಾರಂಟಿ, ಶೃಂಗೇರಿ ನೀವೇ ವಿನ್ ರೀ ಅಂತಿದ್ದಾರೆ ಜನ!
ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ಕುಟುಂಬದವರು ಪ್ರಯಾಣಿಸುತ್ತಿದ್ದ ಕಾರು ಮತ್ತು ಟ್ರಕ್ ಪರಸ್ಪರ ಡಿಕ್ಕಿಯಾಗಿ ಬೆಂಕಿ ಹೊತ್ತಿಕೊಂಡು ಈ ದುರ್ಘಟನೆ ನಡೆದಿದೆ. ನಿಸ್ವಾದಲ್ಲಿ ಆದಿಶೇಷ ಕೆಲಸ ಮಾಡುತ್ತಿದ್ದರು. ಸಂಬಂಧಿಕರ ಜೊತೆಗೆ ಸಲಾಲಾದಿಂದ ಮಸ್ಕತ್ ಗೆ ತೆರಳುತ್ತಿದ್ದಾಗ ಹೈಮಾದಿಂದ 50 ಕಿಮೀಟರ್ ದೂರದಲ್ಲಿ ಅಪಘಾತ ಸಂಬಂಧಿಸಿದೆ. ಸಂಬಂಧಿಕರು ವಿಸಿಟಿಂಗ್ ವೀಸಾದಲ್ಲಿ ಓಮಾನ್ ಗೆ ಭೇಟಿ ನಿಡಿದ್ದರು ಎಂದು ತಿಳಿದುಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ