Mysuru: ಸ್ನಾನಕ್ಕೆ ಹೋದ ಅಕ್ಕ-ತಂಗಿಯರ ದುರಂತ ಅಂತ್ಯ: ನಡೆದಿದ್ದೇನು?

Published : Oct 25, 2025, 07:17 AM IST
sisters death in mysuru

ಸಾರಾಂಶ

cylinder leak accident while bathing: ಮೈಸೂರಿನ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಗ್ರಾಮದಲ್ಲಿ ಸ್ನಾನ ಮಾಡುವ ವೇಳೆ ಸಿಲಿಂಡರ್‌ ಲೀಕ್‌ ಆಗಿ ಉಸಿರುಗಟ್ಟಿ ಅಕ್ಕ-ತಂಗಿ ಮೃತಪಟ್ಟಿದ್ದಾರೆ. ಗುಲ್ಫಾರ್ಮ್ (23) ಮತ್ತು ಸಿಮ್ರಾನ್ ತಾಜ್ (20) ಮೃತರು, ಈ ಘಟನೆಯಿಂದ ಕುಟುಂಬಸ್ಥರು ಆಘಾತ.

ಮೈಸೂರು (ಅ.25): ಮೈಸೂರಿನಲ್ಲಿ ಮತ್ತೊಂದು ದುರಂತ ಘಟನೆ ಸಂಭವಿಸಿದೆ. ಸ್ನಾನ ಮಾಡುವ ವೇಳೆ ಸಿಲಿಂಡರ್‌ ಲೀಕ್‌ ಆಗಿ ಉಸಿರುಗಟ್ಟಿ ಅಕ್ಕ-ತಂಗಿ ಮೃತಪಟ್ಟಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಗ್ರಾಮದಲ್ಲಿ ಜರುಗಿದೆ. ಗುಲ್ಫಾರ್ಮ್ (23), ಸಿಮ್ರಾನ್ ತಾಜ್ (20) ಮೃತ ದುರ್ದೈವಿಗಳು.

ಘಟನೆ ಹೇಗಾಯ್ತು:

ಅಕ್ಕ-ತಂಗಿಯರಾದ ಗುಲ್ಫಾರ್ಮ್, ಸಿಮ್ರಾನ್ ತಾಜ್ ಇಬ್ಬರೂ ಒಟ್ಟಿಗೆ ಸ್ನಾನ ಮಾಡಲು ಹೋಗಿದ್ದಾರೆ. ಆದರೆ ಸ್ನಾನಕ್ಕೆ ಹೋದವರು ಬಹಳ ಸಮಯವಾದರೂ ಹೊರಗೆ ಬಂದಿರಲಿಲ್ಲ. ಇದರಿಂದ ಅನುಮಾನಗೊಂಡ ತಂದೆ ಅಲ್ತಾಫ್‌ ಬಾಗಿಲು ಬಡಿದಿದ್ದಾರೆ. ಆಗಲೂ ಬಾಗಿಲು ತೆಗೆದಿಲ್ಲ. ತೆರೆದು ನೋಡಿದಾಗ ಮಕ್ಕಳಿಬ್ಬರು ಅರೆಪ್ರಜ್ಞಾವಸ್ಥೆಯಲ್ಲಿರೋದು ಕಂಡು ಶಾಕ್ ಆಗಿದ್ದಾರೆ. ತಕ್ಷಣ ಮಕ್ಕಳನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಷ್ಟರಲ್ಲಿ ಇಬ್ಬರೂ ಮೃತಪಟ್ಟಿದ್ದರು.

ಇದನ್ನೂ ಓದಿ: Boiler Explosion: ಸ್ನಾನ ಮಾಡುವಾಗ ಬಾಯ್ಲರ್ ಸ್ಫೋಟ, ಗಾಯಗೊಂಡಿದ್ದ ಬಾಲಕಿ ದುರ್ಮರಣ

ಆಘಾತಗೊಂಡ ಪಾಲಕರು:

ಈ ಘಟನೆಯಿಂದಾಗಿ ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದಾರೆ, ಆಡಿ ಬೆಳೆಯಬೇಕಾದ ಮಕ್ಕಳು ಕಣ್ಮುಂದೆ ಇಲ್ಲವಾಗಿರುವುದು ಪಾಲಕರ ಅಕ್ರಂದನ ಮುಗಿಲು ಮುಟ್ಟಿತು.

ಮೈಸೂರಿನಲ್ಲಿ ಮತ್ತೊಂದು ದುರಂತ ಘಟನೆ ಸಂಭವಿಸಿದೆ. ಸ್ನಾನ ಮಾಡುವ ವೇಳೆ ಸಿಲಿಂಡರ್‌ ಲೀಕ್‌ ಆಗಿ ಉಸಿರುಗಟ್ಟಿ ಅಕ್ಕ-ತಂಗಿ ಮೃತಪಟ್ಟಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಗ್ರಾಮದಲ್ಲಿ ಜರುಗಿದೆ. ಗುಲ್ಫಾರ್ಮ್ (23), ಸಿಮ್ರಾನ್ ತಾಜ್ (20) ಮೃತ ದುರ್ದೈವಿಗಳು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್