
ವಿಧಾನ ಪರಿಷತ್ತು : ಸೈಬರ್ ಅಪರಾಧ ಪ್ರಕರಣಗಳನ್ನು ಬೇಧಿಸುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಮಾದಕ ಜಾಲ ಸೈಬರ್ ಕ್ರೈಮ್‌ಗಿಂತಲೂ ಅಪಾಯಕಾರಿ, ಇದು ಇಡೀ ಜನಸಮುದಾಯಕ್ಕೆ ಹರಡುವ ಆತಂಕ ಬಂದಿದೆ. ಆದರೂ, ಎರಡನ್ನೂ ನಿಯಂತ್ರಿಸಲು ಶಕ್ತಿ ಮೀರಿ ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಕಾಂಗ್ರೆಸ್‌ನ ಎಸ್.ರವಿ ಹಾಗೂ ಬಿಜೆಪಿಯ ಎನ್.ರವಿಕುಮಾರ್ ಕೇಳಿದ ಪ್ರತ್ಯೇಕ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು, ಸೈಬರ್ ಅಪರಾಧ ಪ್ರಕಣಗಳನ್ನು ಪತ್ತೆ ಹಚ್ಚುವುದು ಸುಲಭ ಅಲ್ಲ. ಯಾವುದೋ ದೇಶದಲ್ಲಿ ಕುಳಿತು ಈ ಅಪರಾಧ ನಡೆಸುತ್ತಾರೆ. ಅವರ ಐಪಿ ವಿಳಾಸಗಳು ಸಿಗುವುದಿಲ್ಲ. ಬೇರೆ ಬೇರೆ ಆಧುನಿಕ ತಂತ್ರಜ್ಞಾನದ ಉಪಕರಣಗಳು ಹಾಗೂ ಅವುಗಳನ್ನು ಬಳಸಲು ಸಿಬ್ಬಂದಿಗೆ ಸೂಕ್ತ ತರಬೇತಿ ಬೇಕಿದೆ. ಇದಕ್ಕಾಗಿ ಸಿಬ್ಬಂದಿಗೆ ವಿಶೇಷ ತರಬೇತಿ ನೀಡುತ್ತಿದ್ದೇವೆ. ಇದುವರೆಗೆ 9000 ಜನರಿಗೆ ತರಬೇತಿ ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಎಂಜಿನಿಯರಿಂಗ್, ಎಂಟೆಕ್ ಆಗಿರುವ ಅಥವಾ ಸೈಬರ್ ಕ್ರೈಂ ತಡೆಗೆ ಸಂಬಂಧಿಸಿದ ವಿಶೇಷ ಕೋರ್ಸುಗಳನ್ನು ಮಾಡಿರುವವನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದರು.
2023ರಲ್ಲಿ 22,253 ಸೈಪರ್ ಕ್ರೈಂ ಪ್ರಕರಣಗಳು ದಾಖಲಾಗಿದ್ದು 1287 ಕೋಟಿ ರು. ವಂಚನೆ ಆಗಿದೆ. 2024ರಲ್ಲಿ 22,472 ಪ್ರಕರಣಗಳಲ್ಲಿ 2,515 ಕೋಟಿ ರು. ವಂಚನೆ ಆಗಿದೆ. 2025ರಲ್ಲಿ ಇದುವರೆಗೆ 8,620 ಪ್ರಕರಣ ದಾಖಲಾಗಿ 861 ಕೋಟಿ ರು. ವಂಚನೆ ಆಗಿದೆ. ಆದರೆ, ಇಂತಹ ಪ್ರಕರಣಗಳನ್ನು ಭೇದಿಸುವ, ಹಣ ವಸೂಲಾತಿ ಮಾಡುವ ಪ್ರಮಾಣ ಬಹಳ ಕಡಿಮೆ ಇದೆ. ಆದರೂ, ಕರ್ನಾಟಕ ಸೈಬರ್ ಕ್ರೈಮ್ ಪತ್ತೆ ಹಚ್ಚುವುದರಲ್ಲಿ ಮುಂಚೂಣಿಯಲ್ಲಿದೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ