77ನೇ ಸ್ವಾತಂತ್ರ್ಯ ದಿನಾಚರಣೆ ವಿಶೇಷ; ಲಾಡ್‌ ಫೌಂಡೇಶನ್‌ನಿಂದ ಸಾಂಸ್ಕೃತಿಕ ಕಾರ್ಯಕ್ರಮ

By Ravi Janekal  |  First Published Sep 3, 2023, 11:48 PM IST

77ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸಚಿವ ಸಂತೋಷ್ ಲಾಡ್ ಫೌಂಡೇಶನ್ ಸೆಪ್ಟೆಂಬರ್ 3ರಂದು ಹಲವು ಕಾರ್ಯಕ್ರಮಗಳನ್ನ ಹಮ್ಮಿಕೊಂಡಿದೆ. ಇದೇ ವೇಳೆ ಸಿಎಂ ಸಿದ್ದರಾಮಯ್ಯರನ್ನ ಅಭಿನಂದಿಸಲು ವಿಶೇಷ ಲೇಸರ್ ಶೋ ಹಮ್ಮಿಕೊಳ್ಳಲಾಗಿದೆ. 


ಧಾರವಾಡ: 77ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸಂತೋಷ್ ಲಾಡ್ ಫೌಂಡೇಶನ್ ವತಿಯಿಂದ ಇಂದು ಸಂಜೆ 5 ಗಂಟೆಯಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಸಂತೋಷ್ ಲಾಡ್(Santosh lad) ಅವರ ಸಾರಥ್ಯದಲ್ಲಿ ಸಂತೋಷ್ ಲಾಡ್ ಪೌಂಡೇಶನ್ ಸಾಧಕರಿಗೆ ಸನ್ಮಾನ್ ಕಾರ್ಯಕ್ರಮಗಳನ್ನ ಮತ್ತು ಸಾವಿರಾರು ವಿದ್ಯಾರ್ಥಿಗಳಿಗೆ ತಲಾ ಐದು ಸಾವಿರ ಚೆಕ್ ನೀಡಿ ವಿವಿಧ ಕ್ಚೆತ್ರಗಳಲ್ಲಿ ಸಾಧನೆ ಮಾಡಿದವರನ್ನ ಸನ್ಮಾನಿಸಿ ಗೌರವಿಸಲಾಯಿತು.

ಧಾರವಾಡದ ಕೆಸಿಡಿ ಮೈದಾನದಲ್ಲಿ  ನಡೆದ ಕಾರ್ಯಕ್ರಮದಲ್ಲಿ ಸಾಧಕರಿಗೆ ಹಾಗೂ ಯೋಧರಿಗೆ ಸನ್ಮಾನ ಮತ್ತು ನಮ್ಮ ಭವ್ಯ ಪರಂಪರೆ ಬಿಂಬಿಸುವ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಖ್ಯಾತ ಚಿತ್ರ ಸಾಹಿತಿ ವಿ ನಾಗೇಂದ್ರ ಪ್ರಸಾದ್(V Nagendraprasad) ಅವರಿಂದ ಕಿರು ನಾಟಕ ಹಾಗೂ ಗಾಯಕಿ ಎಂ ಡಿ ಪಲ್ಲವಿ(MD Pallavi) ಮತ್ತು ಇಂಡಿಯನ್ ಐಡಲ್ 18 ರ ವಿಜೇತ ಗಾಯಕ ಸಲ್ಮಾನ್ ಅಲಿ ಅವರಿಂದ ಸಂಗೀತ ಸಂಜೆ ಆಯೋಜಿಸಲಾಗಿತ್ತು.

Tap to resize

Latest Videos

ಮುನೇನಕೊಪ್ಪ, ಚಿಕ್ಕನಗೌಡ್ರ ಕಾಂಗ್ರೆಸ್‌ಗೆ ಬರ್ತಾರೆ: ಸಚಿವ ಸಂತೋಷ್‌ ಲಾಡ್‌

ದೇಶದ ಪ್ರಖ್ಯಾತ ಫ್ಯಾಷನ್ ಗುರು ಪ್ರಸಾದ್ ಬಿದ್ದಪ್ಪ(Guru prasad biddappa) ಅವರ ತಂಡದಿಂದ ನಮ್ಮ ಸಂಸ್ಕೃತಿ ಹಾಗೂ ಪರಂಪರೆ ಬಿಂಬಿಸುವ ದೇಸಿ ಸೀರೆಗಳಾದ ಇಳಕಲ್, ಮೊಳಕಾಲ್ಮೂರು, ಮೈಸೂರು ಸೀರೆಗಳನ್ನು ತೊಟ್ಟು 15 ಕ್ಕೂ ಅಧಿಕ ಮಿಸ್ ಇಂಡಿಯಾ ಸ್ಪರ್ಧಿಗಳು ಹೆಜ್ಜೆ ಹಾಕಿದರು.

ಗ್ಯಾರಂಟಿ ಯೋಜನೆ: ಧಾರವಾಡದಲ್ಲಿ ಸಿಎಂ ಸಿದ್ದು ಅಭಿನಂದನೆಗೆ ಲೇಸರ್ ಶೋ

ಮದುವಣಗಿತ್ತಿಯಂತೆ ಸಿಂಗಾರಗೊಂಡಿರುವ ಕೆಸಿಡಿ ಕ್ರಿಡಾಂಗಣ(KCD ground dharwad) ಸದ್ಯ ಜಗಮಗಿಸುತ್ತಿದೆ. ಸಂತೋಷ್ ಲಾಡ್ ಫೌಂಡೇಶನ್(Santosh Lad Foundation) ವತಿಯಿಂದ ನಡೆಯುತ್ತಿರುವ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಕಿಕ್ಕಿರಿದು ತುಂಬಿದ್ದ ಸಾವಿರಾರು ಜನರು ಕಾರ್ಯಕ್ರಮವನ್ನ ನೋಡಿ ಕಣ್ತುಂಬಿಕ್ಕೊಂಡರು. ರಾತ್ರಿ 10 ಘಂಟೆಯಾದ್ರೂ ಕದಲದೆ ವಿವಿಧ ಮನರಂಜನೆಯ ಕಾರ್ಯಕ್ರಮಗಳನ್ನ ನೋಡಿ ಕಣ್ತುಂಬಿ ಕ್ಕೊಂಡರು.

click me!