* ಪಿಎಂ ಕೇರ್‌ಗೆ ಕಾಂಗ್ರೆಸ್ ಒಂದೇ ಒಂದು ರೂಪಾಯಿ ನೀಡಿಲ್ಲ
* ಕಾಂಗ್ರೆಸ್ ವ್ಯಾಕ್ಸಿನ್ ವಿಚಾರದಲ್ಲಿ ಅಪಪ್ರಚಾರ ಮಾಡುತ್ತಿದೆ
* ಡಿಸೆಂಬರ್ ಅಂತ್ಯಕ್ಕೆ 250 ಕೋಟಿ ಲಸಿಕೆ ಲಭ್ಯ
ಬೆಂಗಳೂರು(ಮೇ.22): ದೇಶವನ್ನೇ ನೀವು ಗುರಿ ಮಾಡುವುದಾದರೆ ಇದು ನಿಮ್ಮದು ರಾಜಕಾರಣ ಅಲ್ಲ. ಇದು ನಿಮ್ಮ ಅಂತ್ಯ ಕಾಲವಾಗಿದೆ. ಮಹಾಮಾರಿ ಕೊರೋನಾ ಸೋಂಕಿನ ವಿರುದ್ಧ ಭಾರತ ಹೋರಾಟ ಮಾಡುತ್ತಿದ್ದರೆ. ಕಾಂಗ್ರೆಸ್ ಸುಳ್ಳು ಹೇಳಿ ಜನರ ದಾರಿ ತಪ್ಪಿಸುತ್ತಿದೆ. ಚೀನಾವನ್ನು ಪ್ರಶ್ನೆ ಮಾಡೋಕೆ ಕಾಂಗ್ರೆಸ್‌ಗೆ ಧೈರ್ಯ ಇಲ್ಲ. ಇಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಲ್ಲಿ ಸುಳ್ಳನ್ನು ಸ್ಪ್ರೆಡ್ ಮಾಡುತ್ತಿದ್ದಾರೆ. ನಿಮಗೆ ದೇಶದ ವಿಜ್ಞಾನಿಗಳ ಮೇಲೆ ನಂಬಿಕೆ ಇಲ್ಲ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹರಿಹಾಯ್ದಿದ್ದಾರೆ.
ಇಂದು(ಶನಿವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೂಲಭೂತ ವ್ಯವಸ್ಥೆ ಬಗ್ಗೆ ಈಗ ಪ್ರಶ್ನೆ ಮಾಡುತ್ತಿದ್ದೀರಿ, ದೇಶದಲ್ಲಿ ಸುಮಾರು 60 ವರ್ಷ ಅಧಿಕಾರ ನಡೆಸಿದ್ದು ನೀವು. ಟೂಲ್ ಕಿಟ್ ಪ್ರಚಾರಕ್ಕೆ ಯಾರನ್ನು ಬಳಸಿಕೊಳ್ಳಬೇಕಿತ್ತು ಎಂದು ಅದರಲ್ಲಿಯೇ ಇದೆ. ಅವರ ಹಿತೈಷಿಗಳನ್ನು ಬಳಸಿಕೊಳ್ಳಬೇಕೆಂದು ಇತ್ತು. ವ್ಯಾಕ್ಸಿನ್ ಕಂಡು ಹಿಡಿದು 50 ವರ್ಷ ಆದ್ರೂ ನಮ್ಮ ದೇಶಕ್ಕೆ ಬರಲಿಲ್ಲ. ಆದರೆ ಕರೋನಾಗೆ ಒಂದೇ ವರ್ಷದಲ್ಲಿ ಎರಡು ವ್ಯಾಕ್ಸಿನ್ ಕಂಡುಹಿಡಿದ್ರೂ ಮೋದಿ ಸ್ವತಃ ಪೂನಾಗೆ ಹೋಗಿ ಬಂದಿದ್ದಾರೆ. ಮೋದಿ ವ್ಯಾಕ್ಸಿನ್ ಅಂದ್ರು, ಮೋದಿ ಮೊದಲು ಚುಚ್ಚಿಸಬೇಕಿತ್ತು ಅಂದ್ರು, ಇಂದು ಕಾಂಗ್ರೆಸ್‌ನ ಗುಲಾಮಿ ಮನಸ್ಥಿತಿಯಾಗಿದೆ. ಈಗ ವ್ಯಾಕ್ಸಿನ್ ಕೊಡಿ ಎನ್ನುವ ಕಾಂಗ್ರೆಸ್‌ನ ಇಬ್ಬಗೆ ನೀತಿ ತೋರಿಸತ್ತದೆ ಎಂದು ಕಾಂಗ್ರೆಸ್ ವಿರುದ್ಧ ಕಟುವಾಗಿ ಟೀಕಿಸಿದ್ದಾರೆ.
ಈಗ ಡಿ.ಕೆ.ಶಿವಕುಮಾರ್ ಹೇಳ್ತಾರೆ ನಾವು ಲಸಿಕೆ ವಿರೋಧ ಮಾಡಿರಲಿಲ್ಲ ಅಂತಾರೆ. ಖಾದರ್ ಏನು ಟ್ವೀಟ್ ಮಾಡಿದ್ರು ಅಂತ ಈಗಲೂ ಇದೆ. ನೀವು ಲಸಿಕೆ ವಿಚಾರದಲ್ಲಿ ದೇಶದ ಜನತೆಯಲ್ಲಿ ಕ್ಷಮೆ ಕೇಳಬೇಕು. ನಾವು ಲಸಿಕೆ ವಿಚಾರದಲ್ಲಿ ಅಪಪ್ರಾಚಾರ ಮಾಡಿದ್ವಿ ಎಂದು ಜನತೆ ಮುಂದೆ ಒಪ್ಪಿಕೊಂಡು ಕ್ಷಮೆ ಕೇಳಿ ಎಂದು ಸಿ.ಟಿ. ರವಿ ಆಗ್ರಹಿಸಿದ್ದಾರೆ.
ಇಸ್ರೋದಿಂದ ಆಕ್ಸಿಜನ್ ಪಡೀರಿ ಎಂದ HK ಪಾಟೀಲ್‌ಗೆ ಹೈಕೋರ್ಟ್ ತರಾಟೆ
ಡಿಸೆಂಬರ್ ಅಂತ್ಯಕ್ಕೆ 250 ಕೋಟಿ ಲಸಿಕೆ ಲಭ್ಯ
ಮೇ ಅಂತ್ಯಕ್ಕೆ 8 ಕೋಟಿ 32 ಲಕ್ಷ ಕೋವಿಡ್ ಎರಡೂ ಲಸಿಕೆಗಳು ಲಭ್ಯವಾಗಲಿವೆ. ಆಗಸ್ಟ್ ಅಂತ್ಯಕ್ಕೆ 19 ಕೋಟಿ, ಡಿಸೆಂಬರ್ ಅಂತ್ಯಕ್ಕೆ 250 ಕೋಟಿ ಲಸಿಕೆ ಲಭ್ಯವಾಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಕೊರೋನಾ ವ್ಯಾಕ್ಸಿನ್ ಮೈತ್ರಿ ಯಶಸ್ವಿ
ಕೊರೋನಾ ವ್ಯಾಕ್ಸಿನ್ ಮೈತ್ರಿ ಯಶಸ್ವಿ ಆಗಿದೆ. ನಮ್ಮ ಸುತ್ತ ಮುತ್ತಲ ರಾಷ್ಟ್ರಗಳು ವ್ಯಾಕ್ಸಿನ್ ಮೈತ್ರಿ ಮಾಡಿಕೊಂಡಿವೆ. ಆದರೆ ಕಾಂಗ್ರೆಸ್ ವ್ಯಾಕ್ಸಿನ್ ವಿಚಾರದಲ್ಲಿ ಅಪಪ್ರಚಾರ ಮಾಡುತ್ತಿದೆ. ಎಲ್ಲಾ ದೇಶವಾಸಿಗಳಿಗೂ ಲಸಿಕೆ ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ.
ಪಿಎಂ ಕೇರ್‌ಗೆ ಕಾಂಗ್ರೆಸ್ ಒಂದೇ ಒಂದು ರೂಪಾಯಿ ನೀಡಿಲ್ಲ. ಸುಮ್ಮನೆ ಅಪಪ್ರಚಾರರ ಮೂಲಕ ಪ್ರಚಾರ ಮಾಡುತ್ತಿದೆ. ಕೆಲವು ಕಾಂಗ್ರೆಸ್ ಲೀಡರ್‌ಗಳು ಎತ್ತಿನಗಾಡಿಯಲ್ಲಿ ಬಂದವರು ಇಂದು ವಿಮಾನದಲ್ಲಿ ಹಾರಾಡುತ್ತಿದ್ದಾರೆ. ಇವರೇನು ತಮ್ಮ ತಿಜೂರಿಯಿಂದ ಹಣ ಕೊಡ್ತೇನೆ ಎಂದಿದ್ದಾರಾ?, ಶಾಸಕರ ನಿಧಿಗೆ ನೀಡಿರುವ ನೂರು ಕೋಟಿ ಕೊಡ್ತೇವೆ ಎಂದಿದ್ದಾರೆ. ಪ್ರತಿ ಶಾಸಕರಿಗೆ ತಲಾ 50 ಲಕ್ಷ ಹಣ ಬಿಡುಗಡೆ ಆಗಿದೆ. ಇವರು ನೂರು ಕೋಟಿ ನೀಡ್ತೇವೆ ಅಂತಾರೆ. ಈ ಹಿಂದೆ ವಿದೇಶಿ ತಾರೆಯರನ್ನು ಬಳಸಿಕೊಂಡು ಟೂಲ್ ಕಿಟ್ ಮಾಡಿತ್ತು. ಈ ಟೂಲ್ ಕಿಟ್ ಅಪರಾಧವನ್ನು ದೇವರು ಕೂಡ ಕ್ಷಮಿಸಲ್ಲ ಎಂದು ಕೈ ನಾಯಕರ ವಿರುದ್ಧ ಸಿ.ಟಿ. ರವಿ ಅವರು ಕಿಡಿ ಕಾರಿದ್ದಾರೆ.