ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿದ ಆರೋಪದಲ್ಲಿ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಬಂಧನ. ಬಂಧನ ಬಳಿಕ ಹಲ್ಲೆಗೊಳಗಾದ ಸಿಟಿ ರವಿಗೆ ಚಿಕಿತ್ಸೆ ಕೊಡಿಸದೆ ರಾತ್ರಿಯಿಡೀ ಪೊಲೀಸ್ ಜೀಪ್‌ನಲ್ಲಿ ಸುತ್ತಾಡಿಸಿರುವುದು, ರಾತ್ರಿ ನಿರ್ಜನ ಪ್ರದೇಶದಲ್ಲಿ ವಾಹನ ನಿಲ್ಲಿಸಿ ಯಾರೊಂದಿಗೆ ರಹಸ್ಯ ಮಾತುಕತೆ ನಡೆಸಿರುವುದು ಪೊಲೀಸರ ನಡೆಯೇ ಹಲವು ಅನುಮಾನಗಳು ಹುಟ್ಟುಹಾಕಿದೆ.
ಬಾಗಲಕೋಟೆ (ಡಿ.20): ಬೆಳಗಾವಿ ಸುವರ್ಣ ಸೌಧದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿದ ಆರೋಪದಲ್ಲಿ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧನ ಬಳಿಕ ಹಲ್ಲೆಗೊಳಗಾದ ಸಿಟಿ ರವಿಗೆ ಚಿಕಿತ್ಸೆ ಕೊಡಿಸದೆ ರಾತ್ರಿಯಿಡೀ ಪೊಲೀಸ್ ಜೀಪ್‌ನಲ್ಲಿ ಸುತ್ತಾಡಿಸಿರುವುದು, ರಾತ್ರಿ ನಿರ್ಜನ ಪ್ರದೇಶದಲ್ಲಿ ವಾಹನ ನಿಲ್ಲಿಸಿ ಯಾರೊಂದಿಗೆ ರಹಸ್ಯ ಮಾತುಕತೆ ನಡೆಸಿರುವುದು ಪೊಲೀಸರ ನಡೆಯೇ ಹಲವು ಅನುಮಾನಗಳು ಹುಟ್ಟುಹಾಕಿದೆ.
ಪೊಲೀಸರ ವರ್ತನೆ ಬಗ್ಗೆ ಸಿಟಿ ರವಿ ಅವರೇ ಆತಂಕ ವ್ಯಕ್ತಪಡಿಸಿದ್ದು, 'ನನ್ನ ಜೀವಕ್ಕೆ ಏನಾದರೂ ಆದಲ್ಲಿ ಅದಕ್ಕೆ ಪೊಲೀಸ್ ಇಲಾಖೆ, ಕಾಂಗ್ರೆಸ್ ಸರ್ಕಾರವೇ ಕಾರಣ. ಕಾಂಗ್ರೆಸ್ ಕಾರ್ಯಕರ್ತರ ಹಲ್ಲೆಯಿಂದ ತಲೆಗೆ ಗಾಯವಾಗಿದ್ದು ರಕ್ತ ಸುರಿಯುತ್ತಿದ್ದರೂ ಚಿಕಿತ್ಸೆ ನೀಡದೆ ಪೊಲೀಸರು ರಾತ್ರಿಯಿಡೀ ಸುತ್ತಾಡಿಸಿದ್ದಾರೆ. ಹೀಗಾಗಿ ಸರ್ಕಾರದ ಜೊತೆ ಪೊಲೀಸರು ಸೇರಿ ಷಡ್ಯಂತ್ರ ನಡೆಸಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
undefined
ಹಿರೇಬಾಗೇವಾಡಿಯಿಂದ ಬೆಂಗಳೂರಿಗೆ ಕರೆದೊಯ್ಯವುದಾಗಿ ಹೇಳಿ ಮೂರ್ನಾಲ್ಕು ಜಿಲ್ಲೆ ಸುತ್ತಿಸಿದ ಪೋಲೀಸರು. ರಾತ್ರಿಯಿಡೀ ಸಿಟಿ ರವಿ ಜೊತೆ ಇದ್ದ ಎಂಎಲ್ ಸಿ ಕೇಶವ್ ಪ್ರಸಾದರನ್ನ ಬಾಗಲಕೋಟೆ ಜಿಲ್ಲೆಯ ಲೋಕಾಪುರದಿಂದ ಯರಗಟ್ಟಿಗೆ ತೆರಳುವ ವೇಳೆ ಅಜ್ಞಾತ ಸ್ಥಳದಲ್ಲಿ ಪೊಲೀಸರು ಬೇರ್ಪಡಿಸಿರುವುದು ಪೊಲೀಸರ ನಡೆ ಸಂಶಯಕ್ಕೆ ಕಾರಣವಾಗಿದೆ.
ಎಂಎಲ್ ಸಿ ಕೇಶವ ಪ್ರಸಾದ ಹೇಳೋದೇನು?
ಪೊಲೀಸರ ವರ್ತನೆ ಬಗ್ಗೆ ಲೋಕಾಪುರದಲ್ಲಿ ಎಂಎಲ್‌ಸಿ ಕೇಶವ ಪ್ರಸಾದ ಪ್ರತಿಕ್ರಿಯಿಸಿದ್ದು, ನಾನು ರಾತ್ರಿಯಿಡೀ ಹಿರೇಬಾಗೇವಾಡಿಯಿಂದ ಸಿಟಿ ರವಿ ಅವರ ಜೊತೆಗೇ ಇದ್ದೆ. ಆದರೆಅಲ್ಲಿಂದ ಬೆಂಗಳೂರಿಗೆ ಕರೆದೊಯ್ಯುತ್ತೇವೆ ಅಂತ ಪೋಲಿಸರು ಹೇಳಿದ್ರು. ಆದ್ರೆ ಹಾಗೆ ಮಾಡದೇ ಬೆಳಗಾವಿ ಜಿಲ್ಲೆಯ ಅಕ್ಕಪಕ್ಕದ ಬಾಗಲಕೋಟೆ, ವಿಜಯಪುರ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಲ್ಲಿ ರಾತ್ರಿಯಿಡೀ ಸುತ್ತಾಡಿಸಿದ್ದಾರೆ. ಕೊನೆಗೆ ಲೋಕಾಪೂರ ಯರಗಟ್ಟಿ ಮಾರ್ಗ ಮದ್ಯೆ ನನ್ನನ್ನು ಬೇರ್ಪಡಿಸಿ ಸಿಟಿ ರವಿ ಅವರನ್ನು ಪೊಲೀಸ್ ವಾಹನದಲ್ಲಿ ಕೂರಿಸಿಕೊಂಡು ಹೋಗಿದ್ದಾರೆ. ಈ ವೇಳೆ ಅತ್ಯಂತ ದೊಡ್ಡ ಪೊಲೀಸ್ ಫೋರ್ಸ್ ಅಲ್ಲಿತ್ತು ಆತಂಕ ವ್ಯಕ್ತಪಡಿಸಿದ್ದಾರೆ.
ಸಿಟಿ ರವಿ ಖಾನಪುರ ಠಾಣೆಯಿಂದ ಬೆಂಗಳೂರಿಗೆ ಶಿಫ್ಟ್, ಪೊಲೀಸರ ವಿರುದ್ದ ಬಿಜೆಪಿ ಆಕ್ರೋಶ!
ಸಿಟಿ ರವಿ ಭಯೋತ್ಪಾದಕರೇ?
ವಿಧಾನ ಪರಿಷತ್ ಸದಸ್ಯರನ್ನು ಪೊಲೀಸರು ಈ ರೀತಿ ನಡೆಸಿಕೊಳ್ಳುತ್ತಾರೆಂದರೆ ಹೇಗೆ? ಸಿಟಿ ರವಿ ಅವರೇನು ಕೊಲೆಗಡುಕಲ್ಲ, ಭಯೋತ್ಪಾದಕರಲ್ಲ, ಅವರ ಬಳಿ ಬಾಂಬ್‌ಗಳೇನೂ ಪತ್ತೆಯಾಗಿಲ್ಲ. ಗನ್ ಸಿಕ್ಕಿಲ್ಲ. ಈ ಪ್ರಕರಣದಿಂದ ಕರ್ನಾಟಕ ತಲೆತಗ್ಗಿಸುವಂತಾಗಿದೆ. ಸರ್ಕಾರ ತಕ್ಷಣ ಕ್ಷಮೆಯಾಚಿಸಬೇಕು. ಇಷ್ಟಕ್ಕೆಲ್ಲಾ ಕಾರಣ ಡಿಸಿಎಂ ಡಿಕೆ ಶಿವಕುಮಾರ, ಸಚಿವೆ ಲಕ್ಷ್ಮೀ ಹೆಬ್ಬಾಳಕರ ಕಾರಣ ಎಂದು ಆರೋಪಿಸಿದ್ದಾರೆ.