ಚೈತ್ರಾ ಕುಂದಾಪುರ ಮಾದರಿಯಲ್ಲಿ ಮತ್ತೊಂದು ವಂಚನೆ: ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಕೋಟಿ ಕೋಟಿ ಪಂಗನಾಮ!

By Govindaraj S  |  First Published Oct 22, 2023, 2:42 PM IST

ಮಳೆ ನಿಂತ್ರೂ ಅದರ ಹನಿ ನಿಲ್ಲೋದಿಲ್ಲ ಅನ್ನೋ ಮಾತಿನಂತೆ. ವಿಧಾನಸಭೆ ಚುನಾವಣೆ ಮುಗಿದು ಬಿಜೆಪಿ ಸೋತು ಸುಣ್ಣವಾದ ಬಳಿಕವೂ ಚುನಾವಣೆ ವೇಳೆ ಬಿಜೆಪಿಯಲ್ಲಿ ಟಕೆಟ್ ಹಂಚಿಕೆ ವೇಳೆ ನಡೆದ ಗೊಂದಲಗಳ ಕತೆ ಇನ್ನೂ ಮುಗಿಯುತ್ತಲೇ ಇಲ್ಲ.


ವರದಿ: ನರಸಿಂಹ ಮೂರ್ತಿ ಕುಲಕರ್ಣಿ, ಬಳ್ಳಾರಿ

ಬಳ್ಳಾರಿ (ಅ.22): ಮಳೆ ನಿಂತ್ರೂ ಅದರ ಹನಿ ನಿಲ್ಲೋದಿಲ್ಲ ಅನ್ನೋ ಮಾತಿನಂತೆ. ವಿಧಾನಸಭೆ ಚುನಾವಣೆ ಮುಗಿದು ಬಿಜೆಪಿ ಸೋತು ಸುಣ್ಣವಾದ ಬಳಿಕವೂ ಚುನಾವಣೆ ವೇಳೆ ಬಿಜೆಪಿಯಲ್ಲಿ ಟಕೆಟ್ ಹಂಚಿಕೆ ವೇಳೆ ನಡೆದ ಗೊಂದಲಗಳ ಕತೆ ಇನ್ನೂ ಮುಗಿಯುತ್ತಲೇ ಇಲ್ಲ. ಬಿಜೆಪಿ ಟಿಕೆಟ್ ಕೊಡಿಸೋದಾಗಿ ಚೈತ್ರಾ ಕುಂದಾಪುರ ನಡೆಸಿದ ಡೀಲ್ ಮಾದರಿಯಲ್ಲಿ ಇದೀಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ, ಹಗರಿಬೊಮ್ಮನ ಹಳ್ಳಿ ಟಿಕೆಟ್ ಕೊಡಿಸೋದಾಗಿ ಕೋಟಿ ಕೋಟಿ ಡೀಲ್ ಮಾಡಿ ಪಂಗನಾಮ ಹಾಕಲಾಗಿದೆ.  ಅಷ್ಟಕ್ಕೂ ಏನು ಆ ಡೀಲ್..?  ಇಲ್ಲಿ ಹಣ ಕಳೆದುಕೊಂಡವರಾರು ಅನ್ನೋದ್ರ ಕಂಪ್ಲೀಟ್ ಡಿಟೈಲ್ ಸ್ಟೋರಿ ಇಲ್ಲಿದೆ ನೋಡಿ..

Tap to resize

Latest Videos

undefined

ಮತ್ತೊಮ್ಮೆ ಕೋಟಿ ಕೋಟಿ ಡೀಲ್ ಪ್ರಕರಣ ಬೆಳಕಿಗೆ: ಹಗರಿಬೊಮ್ಮನ ಹಳ್ಳಿ ಟಿಕೆಟ್ ಕೊಡಿಸೋದಾಗಿ ನಿವೃತ್ತ ಎಂಜಿನಿಯರ್ ಗೆ ಎರಡು ಕೊಟಿಗೂ ಹೆಚ್ಚು ವಂಚನೆ… ಚೈತ್ರಾ ಕುಂದಾಪುರ ಪ್ರಕರಣದ ಮಾದರಿಯಲ್ಲಿಯೇ ನಡೆದ ಘಟನೆ. ಹೌದು, ಚುನಾವಣೆ ಸಂಧರ್ಭದಲ್ಲಿ  ಟಿಕೆಟ್ ಹಂಚಿಕೆ ವೇಳೆ ಬಿಜೆಪಿ ಪಕ್ಷದಲ್ಲಿ ನಡೆದ ಒಂದಷ್ಟು ಗೊಂದಲಗಳನ್ನು ಕೆಲ ಬಿಜೆಪಿಯ ಎರಡನೇ ಮತ್ತು ಮೂರನೇ ದರ್ಜೆ ನಾಯಕರು ದುರ್ಬಳಕೆ ಮಾಡಿಕೊಂಡಿದ್ದಾರೆ ಅನ್ನೋದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ. ಕಳೆದ ವರ್ಷ ನಿವೃತ್ತಿ ಹೊಂದಿದ್ದ ಕೊಟ್ಟೂರಿನ ಎಂಜಿನೇಯರ್ ಶಿವಮೂರ್ತಿ ಎನ್ನುವವರು  ಚುನಾವಣೆಯಲ್ಲಿ ಸ್ಪರ್ಧೆ ಮಾಡೋ  ಮೂಲಕ ಸಮಾಜ ಸೇವೆಗೆ ಮುಂದಾಗಿದ್ರು. 

ಗುಮ್ಮಟನಗರಿಯಲ್ಲಿ ಸಂಭ್ರಮದ ನವರಾತ್ರಿ: ಪ್ರತಿವರ್ಷ ಪ್ರತಿಷ್ಟಾಪನೆಯಾಗುತ್ತೆ ವಿಸ್ಮಯಕಾರಿ ಮೂರ್ತಿ!

ಈ ವೇಳೆ ಬಿಜೆಪಿ ಮಾಜಿ ಮುಖಂಡ ಮತ್ತು ಹಾಲಿ ಕೆಆರ್ಪಿಪಿ ಪಕ್ಷದ ವಿಜಯನಗರ ಜಿಲ್ಲಾಧ್ಯಕ್ಷ ರೇವಣ್ಣ ಸಿದ್ದಪ್ಪ ಪರಿಚಯವಾಗುತ್ತಾರೆ. ಹಗರಿಬೊಮ್ಮನ ಕ್ಷೇತ್ರದ ಟಿಕೆಟ್ ಕೊಡಿಸೋ ನೆಪದಲ್ಲಿ ಬಿಜೆಪಿಯ ಕೆಲ ನಾಯಕರನ್ನು ಪರಿಚಯ ಮಾಡಿಸುತ್ತಾರೆ. ಟಿಕೆಟ್ ಕೊಡಿಸೋಕೆ ಹಣ ನೀಡಬೇಕೆಂದು ಹೇಳಿ ರೇವಣ ಸಿದ್ದಪ್ಪ ಮತ್ತು ಪುತ್ತೂರಿನ ಶೇಖರ್ ಇಬ್ಬರು ಹಂತ ಹಂತವಾಗಿ ಎರಡು ಕೋಟಿಗೂ ಹೆಚ್ಚು ಹಣ ವಸೂಲಿ ಮಾಡಿದ್ದಾರೆ. ಕೊನೆಗೆ ಟಿಕೆಟ್ ಬ್ಯಾಲ ಹುಣಸಿ ರಾಮಣ್ಣ ಅವರಿಗೆ ಸಿಗುತ್ತದೆ. ಈ ವೇಳೆ ಆಕ್ರೋಶಗೊಂಡ ಶಿವಮೂರ್ತಿ ಆಕ್ರೋಶ ವ್ಯಕ್ತಪಡಿಸೋ ಮೂಲಕ ಹಣ ವಾಪಸ್ ಕೇಳ್ತಾರೆ. ಈ ವೇಳೆ ವಾಗ್ವಾದ ನಡೆದು ಗಲಾಟೆಯಾಗಿದೆ. 

ವಾ.ಓ.2;ಆರಂಭದಲ್ಲಿ ವಿಷಯ ಹೊರಗೆ ಹೇಳಿದ್ರೇ,ಎಲ್ಲಿ ಮರ್ಯಾದೆ ಹೋಗ್ತದೆ ಎಂದು ಕೊಟ್ಟೂರಿನ ಕೆಲ ಪ್ರಮುಖರು ರಾಜಿ ಪಂಚಾಯಿತಿ ಮಾಡೋ ಮೂಲಕ ವಿಷಯ ಮುಚ್ಚಿಡಲು ಪ್ರಯತ್ನ ಮಾಡುತ್ತಾರೆ. ಹಣ ವಾಪಸ್ ನೀಡೋ ಭರವಸೆ ನೀಡ್ತಾರೆ.  ಮೂರು ತಿಂಗಳಾದ್ರೂ ಹಣ ನೀಡದ ಹಿನ್ನೆಲೆ ಶಿವಮೂರ್ತಿಯವರು ಇದೀಗ ಕೊಟ್ಟೂರು ಠಾಣೆಯಲ್ಲಿ ದೂರನ್ನು ನೀಡೋ ಮೂಲಕ ವಂಚನೆಯ ವಿವರಣೆ ನೀಡಿದ್ದಾರೆ. ಅಲ್ಲದೇ ಮುಖ್ಯಮಂತ್ರಿ ಉಪಮುಖ್ಯಮಂತ್ರಿ ಮತ್ತು ಗೃಹ ಸಚಿವರಿಗೆ ದೂರನ್ನು ನೀಡಿದ್ದಾರೆ. ಇನ್ನೂ ಪ್ರಕರಣಕ್ಕೆ ಸಂಬಂದಿಸಿದಂತೆ ಆರೋಪಿ ರೇವಣ ಸಿದ್ದಪ್ಪ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಮತ್ತು ಪೊಲೀಸರು ಕೂಡ ಅವರನ್ನು ವಿಚಾರಣೆಗೆ ಕರೆಯಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ಈ ಮಧ್ಯೆ ವಂಚಕರು ನೀಡಿದ ಒಂದೆರಡು ಚೆಕ್ ಗಳು ಕೂಡ ಬೌನ್ಸ್ ಆಗಿರೋ ಹಿನ್ನೆಲೆ ಶಿವಮೂರ್ತಿ ಇದೀಗ ಕಂಗಾಲಾಗಿದ್ದಾರೆ.  

ಡಿಕೆಶಿ, ಭೈರತಿ, ಪಾಟೀಲ್ ರಾಜೀನಾಮೆ ನೀಡಲಿ: ಕೆ.ಎಸ್.ಈಶ್ವರಪ್ಪ ಆಗ್ರಹ

ಕೊಟ್ಟವನು ಕೋಡಂಗಿ ಇಸ್ಕೊಂಡವನನು ವೀರಭದ್ರ ಎನ್ನುವಂತೆ  ಪ್ರಕಣದಲ್ಲಿ ಬಹುತೇಕ ಗೋಲ್ ಮಾಡಿರೋದು ಸಾಭಿತಾಗಿದೆ.  ಆದ್ರೇ, ಸರ್ಕಾರಿ ನೌಕರಿಯಲ್ಲಿದ್ದ ವ್ಯಕ್ತಿ ಈ ರೀತಿಯ ರಾಷ್ಟ್ರೀಯ ಪಕ್ಷವೊಂದು ಹಣಕ್ಕಾಗಿ ಟಿಕೆಟ್ ನೀಡ್ತದೆ ಅನ್ನೋದನ್ನು ಹೇಗೆ ನಂಬಿದ್ರು.. ? ಅಲ್ಲದೇ ಕೆಲ ದಿನಗಳಲ್ಲಿಯೇ ಪರಿಚಯವಾದ ವ್ಯಕ್ತಿಗೆ ಇಷ್ಟೊಂದು ಹಣ ಹೇಗೆ ಕೊಟ್ಟರೂ ಅನ್ನೋದೇ ದೊಡ್ಡ ಪ್ರಶ್ನೆಯಾಗಿದೆ. ಅಲ್ಲದೇ ಮೋಸ ಹೋಗೋರು ಇರೋವರೆಗೂ ಮೋಸ ಮಾಡುವವರು ಇರುತ್ತಾರೆ ಅನ್ನೋದಕ್ಕೆ ಈ ಪ್ರಕರಣ ಮತ್ತೊಂದು ಸಾಕ್ಷಿಯಾಗಿದೆ.

click me!