ಕೋಲಾರ ಜಿಲ್ಲೆಯ ಬಡವರ ಆ್ಯಪಲ್ ಎಂದೇ ಹೆಸರಾಗಿರುವ ಟೊಮೆಟೋ 15 ಕೆ.ಜಿ ಬಾಕ್ಸ್ ಬೆಲೆ 2000 ರೂ.ಗಳ ಗಡಿ ದಾಟಿದೆ. ಉತ್ತಮ ಫಸಲು ಇಲ್ಲದ ಸಂದರ್ಭದಲ್ಲಿ ಟೊಮೆಟೋ ಬೆಲೆ ದಿನೇ ದಿನೇ ಏರಿಕೆಯಾಗತೊಡಗಿದೆ.
ಕೋಲಾರ (ಜು.11) ಕೋಲಾರ ಜಿಲ್ಲೆಯ ಬಡವರ ಆ್ಯಪಲ್ ಎಂದೇ ಹೆಸರಾಗಿರುವ ಟೊಮೆಟೋ 15 ಕೆ.ಜಿ ಬಾಕ್ಸ್ ಬೆಲೆ 2000 ರೂ.ಗಳ ಗಡಿ ದಾಟಿದೆ. ಉತ್ತಮ ಫಸಲು ಇಲ್ಲದ ಸಂದರ್ಭದಲ್ಲಿ ಟೊಮೆಟೋ ಬೆಲೆ ದಿನೇ ದಿನೇ ಏರಿಕೆಯಾಗತೊಡಗಿದೆ.
ಕೋಲಾರ ಜಿಲ್ಲೆಯ ರೈತರ ಜೀವನಾಡಿಗಳಲ್ಲಿ ಟೊಮೆಟೋ ಬೆಳೆಯೂ ಒಂದಾಗಿದೆ. ಕೋಲಾರ ಟೊಮೆಟೋ ಎಂದರೆ ದೇಶದ ವಿವಿಧ ರಾಜ್ಯಗಳಲ್ಲಿ ಖ್ಯಾತಿ ಪಡೆದಿದೆ. ಇದಲ್ಲದೆ ಹೊರ ದೇಶಗಳಿಗೂ ರಪ್ತಾಗುತ್ತಿತ್ತು. ಏಷ್ಯಾದಲ್ಲಿಯೇ ಎರಡನೇ ಅತಿ ದೊಡ್ಡ ಮಾರುಕಟ್ಟೆಕೋಲಾರ ಮಾರುಕಟ್ಟೆಯಾಗಿದೆ. ಕಳೆದ 6 ತಿಂಗಳುಗಳಿಂದ ಮಾರುಕಟ್ಟೆಗೆ ಬರುವ ಟೊಮೆಟೋ ಗುಣಮಟ್ಟವಿಲ್ಲದೆ ಮಾರುಕಟ್ಟೆಗೆ ಬರುವ ವ್ಯಾಪಾರಸ್ಥರ ಸಂಖ್ಯೆಯೂ ಕಡಿಮೆಯಾಗಿತ್ತು.
undefined
ಟೊಮ್ಯಾಟೊ ಬೆಲೆ 100 ರೂ. ಗಡಿ ದಾಟಲು ಕಾರಣ ಬಹಿರಂಗ: ಇನ್ನೂ 2 ತಿಂಗಳು ಕಡಿಮೆಯಾಗೋಲ್ಲ
ಟೊಮೆಟೊ ಬೆಳೆಗೆ ವೈರಸ್ ಕಾಟ
ಆಂಧ್ರ ಪ್ರದೇಶ, ತಮಿಳುನಾಡು ರಾಜ್ಯಗಳಿಂದಲೂ ಕೋಲಾರ ಎಪಿಎಂಸಿ ಮಾರುಕಟ್ಟೆಗೆ ಟೊಮೆಟೋ ಬರುತ್ತಿತ್ತು. ಈ ಹಿಂದೆ ಗುಣಮಟ್ಟಇಲ್ಲದ ಟೊಮೆಟೋ ಬರುತ್ತಿತ್ತು. ಈಗ ಹೊರ ರಾಜ್ಯಗಳಿಂದ ಬರುವ ಟೊಮೆಟೋ ಗುಣಮಟ್ಟದಿಂದ ಕೂಡಿದೆ. ಕೋಲಾರ ಜಿಲ್ಲೆಯಿಂದ ಬರುವ ಟೊಮೆಟೋ ಗುಣಮಟ್ಟವನ್ನು ಕಳೆದುಕೊಳ್ಳುತ್ತಿದೆ. ಕಾರಣ ವೈರಸ್ ಕಾಟದ ಜೊತೆಗೆ ನಾನಾ ರೋಗಗಳು ಟೊಮೆಟೋ ಬೆಳೆಯನ್ನು ಆವರಿಸಿಕೊಳ್ಳುತ್ತಿವೆ.
ಒಂದು ಎಕರೆಗೆ 3 ಸಾವಿರ ಬಾಕ್ಸ್ ಬೆಳೆಯುತ್ತಿದ್ದ ರೈತನ ತೋಟದಲ್ಲಿ 300 ಬಾಕ್ಸ್ ಬೆಳೆಯುವಂತಾಗಿದೆ. ಟೊಮೆಟೋ ಸಸಿಗಳನ್ನು ನಾಟಿ ಮಾಡಿದ ಒಂದು ತಿಂಗಳಲ್ಲಿಯೇ ಗಿಡಕ್ಕೆ ನಾನಾ ರೀತಿಯ ರೋಗಗಳು ಆವರಿಸಿಕೊಳ್ಳುತ್ತಿವೆ. ಉತ್ತಮ ಬೆಳೆಯಾದರೆ ಒಂದು ಗಿಡದಲ್ಲಿ 10 ಕೆ.ಜಿ ಗುಣಮಟ್ಟದ ಕಾಯಿ ಸಿಗುತ್ತಿತ್ತು. ಈಗ ಒಂದು ಕೆ.ಜಿ ಕಾಯಿ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಶೇ.25ರಷ್ಟುಮಾತ್ರ ಬೆಳೆ
ಈಗಾಗಲೇ ಬೆಳೆ ಇರುವ ತೋಟಗಳಲ್ಲಿ ಶೇ.25 ರಷ್ಟುಮಾತ್ರ ಫಸಲು ಕಾಣಿಸುತ್ತಿದ್ದು ಅದರಲ್ಲಿಯೂ ಗುಣಮಟ್ಟಇಲ್ಲದ ಕಾಯಿ ಹೆಚ್ಚಾಗಿರುವುದರಿಂದ ಮಾರುಕಟ್ಟೆಗೆ ಬರುವ ಕಾಯಿಯಲ್ಲಿ ಶೇ.25 ರಷ್ಟುಗುಣಮಟ್ಟದ ಹಣ್ಣು ಬರುತ್ತಿದೆ. ಉಳಿದಂತೆ ಶೇ.75 ರಷ್ಟುಗುಣಮಟ್ಟವಿಲ್ಲದ ಹಣ್ಣು ಬರುತ್ತಿದೆ. ಆಂಧ್ರ ಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಿಂದ ಬರುವ ಟೊಮೆಟೋ ಗುಣಮಟ್ಟದಿಂದ ಕೂಡಿದ್ದು 15 ಕೆ.ಜಿ ಬಾಕ್ಸ್ ಒಂದು 2100 ರೂ.ಗಳಿಗೆ ಮಂಗಳವಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಮಾರಾಟವಾಗಿದೆ.
ಏಕಾ ಏಕಿ ಟೊಮೆಟೋ ಬೆಲೆ ಏರಿಕೆಯಾಗಿರುವುದಕ್ಕೆ ಒಂದು ಕಡೆ ರೈತರಿಗೆ ಸಂತೋಷವಾದರೆ ಮತ್ತೊಂದೆಡೆ ಬೇಸರದ ಸಂಗತಿಯೂ ಆಗಿದೆ. ಜಿಲ್ಲೆಯಲ್ಲಿ ಇರುವುದೇ ಶೇ.25 ರಷ್ಟುತೋಟಗಳು ಅದರಲ್ಲಿಯೂ ಗುಣಮಟ್ಟವಿಲ್ಲದ ತೋಟಗಳೇ ಆಗಿವೆ. ಕಳೆದ 6 ತಿಂಗಳಿಂದ ವೈರಸ್ ಕಾಟದಿಂದ ತತ್ತರಿಸಿ ನಷ್ಟಅನುಭವಿಸಿದ್ದ ರೈತರು ಟೊಮೆಟೋ ಬೆಳೆ ಮಾಡುವುದರಿಂದ ದೂರ ಸರಿದರು. ಬೆಳೆ ಕಡಿಮೆ ಇರುವುದರಿಂದ ಮಾರುಕಟ್ಟೆಯಲ್ಲಿ ಟೊಮೆಟೋಗೆ ಉತ್ತಮ ಬೆಲೆ ಬಂದಿದೆ.
ಟೊಮೆಟೊ ಬೆಲೆ ಗಗನಕ್ಕೆ, ಕೋಲಾರದಿಂದ 2 ಲಕ್ಷ ರೂ ಮೌಲ್ಯದ ಟೊಮೆಟೊ ತುಂಬಿದ ಗಾಡಿ ಹೈಜಾಕ್!
ನಿದ್ದೆಯಲ್ಲಿರುವ ತೋಟಗಾರಿಕೆ ಇಲಾಖೆ ಮತ್ತು ತೋಟಗಾರಿಕೆ ಸಂಶೋಧನೆ ಕೇಂದ್ರದವರು ವೈರಸ್ ಹಾವಳಿಗೆ ಇದುವರೆವಿಗೂ ಔಷಧ ಪೂರೈಸಲು ಹಾಗೂ ವೈರಸ್‌ಗೆ ಕಾರಣ ಏನೆಂಬುದನ್ನು ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಕಳೆದ ಶನಿವಾರ ನಡೆದ ಜಿಲ್ಲಾ ತ್ರೈ ಮಾಸಿಕ ಸಭೆಯಲ್ಲಿ ಟೊಮೆಟೋದಲ್ಲಿರುವ ವೈರಸ್ ಮತ್ತು ಕಾರಣಗಳ ಬಗ್ಗೆ ಸಮಗ್ರ ವರದಿ ನೀಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.