ಹೋರಾಟ ಬಿಟ್ರೆ ಅವರಿಗಿನ್ನೇನು ಕೆಲಸ?: ಬಿಜೆಪಿ ವಿರುದ್ಧ ಜಾರಕಿಹೊಳಿ ವ್ಯಂಗ್ಯ

By Ravi JanekalFirst Published Jun 4, 2023, 3:25 PM IST
Highlights

ಬೆಳಗಾವಿ (ಜೂ.4) : ಅವರದ್ದಿನ್ನು ಐದು ವರ್ಷ ಹೋರಾಟವೇ ಅವರಿಗೆ ಇನ್ನೇನು ಕೆಲಸ ಇದೆ? ಬಿಜೆಪಿ ನಾಯಕರ ವಿರುದ್ಧ ವ್ಯಂಗ್ಯ ಮಾಡಿದ ಸಚಿವ ಸತೀಶ್ ಜಾರಕಿಹೊಳಿ.

ಬೆಳಗಾವಿ (ಜೂ.4) : ಅವರದ್ದಿನ್ನು ಐದು ವರ್ಷ ಹೋರಾಟವೇ ಅವರಿಗೆ ಇನ್ನೇನು ಕೆಲಸ ಇದೆ? ಬಿಜೆಪಿ ನಾಯಕರ ವಿರುದ್ಧ ವ್ಯಂಗ್ಯ ಮಾಡಿದ ಸಚಿವ ಸತೀಶ್ ಜಾರಕಿಹೊಳಿ.

ಗೋಹತ್ಯೆ ನಿಷೇಧ ಕಾಯ್ದೆ ರದ್ದು ಮಾಡಿದ್ರೆ ಉಗ್ರ ಹೋರಾಟ ಮಾಡುತ್ತೇವೆ ಎಂಬ ಬಿಜೆಪಿ ನಾಯಕರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಅವರದು ಇನ್ನೂ ಐದು ವರ್ಷ ಹೋರಾಟವೇ. ಗೆಲ್ಲೋವರೆಗೂ ಹೋರಾಟ ಅಂತಾ ಇನ್ನು ಬೋರ್ಡ್ ಬರೆದಿಡಬೇಕು ಎಂದು ವ್ಯಂಗ್ಯ ಮಾಡಿದರು.

ಅಧಿಕಾರದಲ್ಲಿದ್ದಾಗಲೂ ಅವರು ಇದನ್ನೇ ಮಾಡಿದ್ದಾರೆ. ಅವರಿಗೆ ಅಭಿವೃದ್ಧಿ ಅಂತೂ ಗೊತ್ತೇ ಇಲ್ಲ. ಬರೀ‌ ಕೋಮುದ್ವೇಷ ಹರಡಿಸೋದು, ಗಲಾಟೆ, ಒಬ್ಬರ ವಿರುದ್ಧ ಎತ್ತಿಕಟ್ಟೋದು ಇಷ್ಟೇ ಅವರು ಮಾಡಿರುವ ಕೆಲಸ ಎಂದು ಕಿಡಿಕಾರಿದರು.

 

ಸತೀಶ ಜಾರಕಿಹೊಳಿಗೆ ಸಿಗುತ್ತಾ ಬೆಳಗಾವಿ ಉಸ್ತುವಾರಿ ಪಟ್ಟ?

ಎಮ್ಮೆ ಕೋಣ ಕಡಿದು ಹಾಕುವುದಾದ್ರೆ ಹಸು ಏಕೆ ಕಡಿಯಬಾರದು ಎಂಬ ಪಶುಸಂಗೋಪನಾ ಖಾತೆ ಸಚಿವ ಕೆ.ವೆಂಕಟೇಶ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ ಅವರು, ಚರ್ಚೆ ಮಾಡಲು ಸದನ ಇದೆ, ಕಾನೂನು ಅಲ್ಲಿ ತರಬೇಕು. ನಾವು ಹೇಳಿಕೆ ಕೊಟ್ಟರೆ ಕಾನೂನು ಅಂತೂ ಸದನದಲ್ಲಿ ಬರುತ್ತೆ. ಅವರ ಹೇಳಿಕೆಗೆ ಚರ್ಚೆ ಮಾಡಲು ಅವಕಾಶ ಇದೆ. ಸಾಧಕ ಬಾಧಕ ನೋಡಿ ನಿರ್ಣಯಗಳು ಆಗುತ್ತೆ. ಈಗ ಅವರೇನೋ ಹೇಳಿದರು, ಇವರೇನು ಖಾಲಿ ಇದ್ದಾರೆ ಅಂತಾ ತಕ್ಷಣ ಹಾಗೇ ಹೇಳಲಿಕ್ಕೆ ಆಗೋದಿಲ್ಲ. ಅವರು ಸೋತಿದ್ದಾರೆ, ಕೆಲವರು ಗೆದ್ದಿದ್ದಾರೆ ಜನರಿಗೆ ಏನಾದರೂ ಒಳ್ಳೆಯ ಕೆಲಸ ಮಾಡಲಿ. ಅವರು ನಾಲ್ಕು ವರ್ಷದಲ್ಲಿ ಏನೂ ಒಳ್ಳೆಯ ಕೆಲಸ ಮಾಡಲು ಆಗಿಲ್ಲ. ನಮ್ಮ ಸರ್ಕಾರದಲ್ಲಾದರೂ ಅವರು ಒಳ್ಳೆಯ ಕೆಲಸ ಮಾಡಲಿ. ಅವರು ಏನೋ ಅಂದ್ರು, ಇವರು ಏನೋ ಅಂದ್ರು ಅದನ್ನೇ ಆಧಾರ ಗುರಿಯಾಗಿಟ್ಟುಕೊಂಡ್ರೆ ಅಭಿವೃದ್ಧಿ ಬಗ್ಗೆ ಏನು? ಎಂದು ಪ್ರಶ್ನಿಸಿದರು.
ಈಗ ವಿರೋಧ ಪಕ್ಷದಲ್ಲಿ ಇದ್ದಾಗಲೂ ಅದೇ ಪಿಚ್ಚರ್ ತೋರಿಸೋರು

ಬಿಜೆಪಿಯವರು ಅಭಿವೃದ್ಧಿ ಮಾಡಲ್ಲ. ಹೋರಾಟ, ಕೋಮುಗಲಭೆ ಮಾಡಿ ಅವರಿಗೆ ರೂಢಿ ಆಗಿದೆ, ಏನೂ ಮಾಡಕ್ಕಾಗಲ್ಲ. ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ಸರ್ಕಾರ ಯೋಗ್ಯ ನಿರ್ಣಯ ಮಾಡುತ್ತೆ ಯಾವುದೇ ವಿಷಯ ಇದ್ರು ಚರ್ಚೆ ಮಾಡಲು ಅವಕಾಶ ಇದೆ ಎಂದರು.

ಕಾಂಗ್ರೆಸ್ ಗ್ಯಾರಂಟಿ ಘೋಷಣೆಯಿಂದ ಬಿಜೆಪಿಗೆ ಶಾಕ್ ಆಯ್ತಾ ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ, ಶಾಕ್ ಆಗಿಯೇ ಆಗುತ್ತೆ, ಜನರ ಕಲ್ಯಾಣಕ್ಕಾಗಿ ದೊಡ್ಡ ಮೊತ್ತ ಕೊಡುತ್ತಿದ್ದೇವೆ. ಅವರಿಗೆ ಎಲ್ಲೋ ಆತಂಕ ಇದೆ, ಅದನ್ನ ಡೈವರ್ಟ್ ಮಾಡಲು ಹೊಸ ಅಸ್ತ್ರ ಹೂಡುತ್ತಾರೆ. ಹದಿನೈದು ದಿನಗಳಲ್ಲಿ ಫಲಿತಾಂಶ ಮರೆಸಿದ್ರು ಗ್ಯಾರಂಟಿ ಹಿಡಿದುಕೊಂಡು ಕುಳಿತರು. ಈಗ ಗ್ಯಾರಂಟಿ ಕೊಟ್ಟಿದ್ದೇವೆ, ಬೇರೆ ವಿಷಯಕ್ಕೆ ಬರ್ತಾರೆ ಅವರಿಗೇನು ಕೆಲಸ ಎಂದರು.

ಗ್ಯಾರಂಟಿ ಯೋಜನೆ ನೆರೆರಾಜ್ಯಗಳಿಗೂ ಮಾದರಿಯಾಗಿದೆ. ಬಹಳಷ್ಟು ಜನ ಇದನ್ನ ಕಾಪಿ ಮಾಡ್ತಾರೆ, ಅನುಕೂಲ ಆಗುತ್ತೆ. ಕರ್ನಾಟಕ ಮಾಡಲ್ ಬಂದೇ ಬರುತ್ತೆ, ಕರ್ನಾಟಕ ಮಾಡಲ್ ಫೇಮಸ್ ಆಗಿಯೇ ಆಗುತ್ತೆ ಎಂದು ಸಚಿವ ಸತೀಶ್ ಜಾರಕಿಹೊಳಿ ಗ್ಯಾರಂಟಿ ಯೋಜನೆ ಬಲವಾಗಿ ಸಮರ್ಥಿಸಿದರು.

ಒಡಿಶಾದಲ್ಲಿ ರೈಲು ದುರಂತ ಪ್ರಕರಣ, ಹೆಚ್ಚಿನ ಪರಿಹಾರಕ್ಕೆ ಜಾರಕಿಹೊಳಿ ಒತ್ತಾಯ:

ಒಡಿಸಾದಲ್ಲಿ ರೈಲು ದುರಂತದಲ್ಲಿ ಮೃತಪಟ್ಟ ಕುಟುಂಬಗಳಿಗೆ ಸರ್ಕಾರ ಹೆಚ್ಚಿನ ಪರಿಹಾರ ನೀಡಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ಇದು ದೇಶದಲ್ಲೇ ದೊಡ್ಡ ರೈಲು ದುರಂತ, ಮೃತರ ಆತ್ಮಕ್ಕೆ ಸಂತಾಪ ಸೂಚಿಸಿದ ಅವರ ಮೃತರ ಕುಟುಂಬಗಳಿಗೆ ಸರ್ಕಾರ, ಪ್ರಧಾನಮಂತ್ರಿ ಅವರು ಹೆಚ್ಚಿನ ಪರಿಹಾರ ಕೊಡಬೇಕು. ಆಯಾ ರಾಜ್ಯ ಸರ್ಕಾರಗಳು ಹೆಚ್ಚಿನ ಪರಿಹಾರ ಕೊಡಬೇಕು ಎಂದರು.

ಈಗಾಗಲೇ ಪ್ರಧಾನಮಂತ್ರಿ ಕಾರ್ಯಾಲಯ 2 ಲಕ್ಷ ಕೊಟ್ಟಿದೆ. ರೈಲ್ವೆ ಇಲಾಖೆ 10 ಲಕ್ಷ ಕೊಟ್ಟಿದೆ. ಪ್ರಧಾನಮಂತ್ರಿ ಕಾರ್ಯಾಲಯ ಪರಿಹಾರ ಹೆಚ್ಚಿಗೆ ಕೊಡಬೇಕು ಇದರಿಂದ ಮೃತರ ಕುಟುಂಬಕ್ಕೆ ಅನುಕೂಲ ಆಗಲಿದೆ ಎಂದರು.

ಗ್ಯಾರಂಟಿ ಯೋಜನೆ ಜಾರಿಯಾದ್ರೆ ಹಳೆಯ ಯೋಜನೆಗಳ ಬಂದ್ ಆಗುತ್ತಾ ಎಂದು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅನವಶ್ಯಕ ಯೋಜನೆ ಬಂದ್ ಮಾಡ್ತೀವಿ, ಜನಪರ ಯೋಜನೆ ಮುಂದುವರಿಸುತ್ತೇವೆ ಎಂದರು.

ಬಳ್ಳಾರಿ ನಾಲಾ ಹೂಳೆತ್ತಿ ಶಾಶ್ವತ ಪರಿಹಾರಕ್ಕೆ ರೈತರ ಆಗ್ರಹ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಸತೀಶ್ ಜಾರಕಿಹೊಳಿ ಅವರು, ಮಳೆಗಾಲದಲ್ಲಿ ಆಗೋ ಅನಾಹುತ ತಡೆಯಲು ಆಗಲ್ಲ. ಆದರೆ  ಗ್ಯಾರಂಟಿ ಯೋಜನೆ ಘೋಷಣೆ ಗೆ ಜನರು ನಮ್ಮ ಮೇಲೆ ವಿಶ್ವಾಸ ಇಟ್ಟಿದ್ದಾರೆ. ನಾವೂ ಈಗ ಆ ಗ್ಯಾರಂಟಿ ಅನುಷ್ಠಾನ ಮಾಡ್ತಿದ್ದೇವೆ. ಇದು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಅನುಕೂಲ ಆಗಲಿದೆ.ಈ ಬಾರಿ ಲೋಕಸಭೆಯಲ್ಲಿ ಕರ್ನಾಟಕದಲ್ಲಿ 20 ಸ್ಥಾನ ನಾವು ಗೆಲ್ಲಲೇಬೇಕು ಎಂದು ಸಂಕಲ್ಪ ಮಾಡಿದ್ದೇವೆ ಎಂದರು.

ಬೆಳಗಾವಿ, ಚಿಕ್ಕೋಡಿಯಿಂದ ಲೋಕಸಭೆ ಅಭ್ಯರ್ಥಿ ಘೋಷಣೆ ಮಾಡ್ತೀವಿ. ಆ ಬಗ್ಗೆ ಇನ್ನೊಂದು ತಿಂಗಳಲ್ಲಿ ಸಭೆ ಮಾಡ್ತೀವಿ. ಆ ಸಭೆಯಲ್ಲಿ ಎಲ್ಲವೂ ಚರ್ಚೆ ಮಾಡಿ ಘೋಷಣೆ ಮಾಡ್ತಿವಿ ಎಂದರು. ಇದೇ ವೇಳೆ ವಂದೇ ಭಾರತ್ ಎಕ್ಸ್‌ಪ್ರೆಸ್‌ ಕೇವಲ ಧಾರವಾಡವರೆಗೆ ಮಾತ್ರ ಸೇವೆಯಾಗಿದೆ ಎಂದು ಪರೋಕ್ಷವಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ಸತೀಶ್ ಜಾರಕಿಹೊಳಿ ಅಸಮಾಧಾನ ವ್ಯಕ್ತಪಡಿಸಿದರು.

ನಮ್ಮ ಬೆಳಗಾವಿ ವಿಮಾನ ನಿಲ್ದಾಣ ಒಳ್ಳೆಯ ರೀತಿ ನಡೆಯುತ್ತಿತ್ತು. ಇಲ್ಲಿನ ವಿಮಾನಗಳು ಹುಬ್ಬಳ್ಳಿ ಗೆ ಶಿಫ್ಟ್ ಆಗಿವೆ. ನಮ್ಮ ಅನೇಕ ವಿಮಾನಗಳು ಬಂದ್ ಆಗಿವೆ. ಇದಕ್ಕೆಲ್ಲ ಬಿಜೆಪಿಯ ಸರ್ಕಾರ, ಬಿಜೆಪಿ‌ ಮಂತ್ರಿಯೊಬ್ಬರು ಕಾರಣ. ಈಗ
ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲನ್ನು ಬೆಳಗಾವಿ - ಮುಂಬೈ ಮಧ್ಯೆಯಾದರೂ ಓಡಿಸಲಿ ಈ ಬಗ್ಗೆ ನಾವು ಕೂಡಾ ಚರ್ಚೆ ಮಾಡ್ತಿವಿ ಎಂದರು.

ಬೆಳಗಾವಿ: ಬುಡಾ ಅವ್ಯವಹಾರ ಪ್ರಕರಣ ಸಿಐಡಿ ತನಿಖೆಗೆ, ಸಚಿವ ಸತೀಶ ಜಾರಕಿಹೊಳಿ

ಕೃಷ್ಣಾ, ಭೀಮಾ ನದಿಗೆ ಮಹಾರಾಷ್ಟ್ರದಿಂದ ನೀರು ಬಿಡುಗಡೆ ಸಂಬಂಧ ಮಹಾರಾಷ್ಟ್ರ ದಿಂದ ಮೊನ್ನೆಯಷ್ಟೇ ನೀರು ಬಿಟ್ಟಿದ್ದಾರೆ, ಇನ್ನೊಂದು ವಾರದಲ್ಲಿ ಮಳೆ ಆಗಲಿದೆ ಎಂದರು.

ಲೋಕಸಭೆ ಚುನಾವಣೆಗೆ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ‌ ಸ್ಪರ್ಧೆ ಮಾಡ್ತಾರಾ ಎಂದು ಮಾಧ್ಯಮಗಳ ಪ್ರಶ್ನೆಗೆ 'ನೋಡೋಣ ಪಕ್ಷದ ಮುಖಂಡರು ತೀರ್ಮಾನ ಮಾಡ್ತಾರೆ. ಲೋಕಸಭೆ ಚುನಾವಣೆ ಕುರಿತ ಸಭೆ ಬಳಿಕ ಸ್ಪಷ್ಟವಾಗಿ ಗೊತ್ತಾಗಲಿದೆ ಸಭೆಗೂ ಮುನ್ನ ಯಾರು ಪ್ರಚಾರ ಮಾಡಲು ಆಗುವುದಿಲ್ಲ ಎಂದ ಸತೀಶ್ ಜಾರಕಿಹೊಳಿ‌

click me!