ಕೋವಿಡ್ ವಾರಿಯರ್‌ಗಳಿಗೆ ಆದ್ಯತೆಯಲ್ಲಿ ಹಂಚಿಕೆ | ಬೆಂಗಳೂರು, ಬೆಳಗಾವಿ, ಮೈಸೂರು, ಕಲಬುರಗಿ, ಶಿವಮೊಗ್ಗದಲ್ಲಿ ಡ್ರೈ ರನ್
ಬೆಂಗಳೂರು(ಜ.01): ಕೋವಿಡ್ -19 ಲಸಿಕೆ ವಿತರಣೆಯ ಪ್ರಕ್ರಿಯೆಗಳ ಡ್ರೈ ರನ್ (ಅಣಕು ವಿತರಣೆ) ಚಟುವಟಿಕೆ ರಾಜ್ಯದ ಐದು ಜಿಲ್ಲೆಗಳಾದ ಬೆಂಗಳೂರು ನಗರ, ಶಿವಮೊಗ್ಗ, ಕಲಬುರಗಿ, ಮೈಸೂರು ಮತ್ತು ಬೆಳಗಾವಿಯಲ್ಲಿ ಜ.2 ರಿಂದ ನಡೆಯಲಿದೆ
ಈ ಜಿಲ್ಲೆಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಒಂದು ಲಸಿಕೆ ಕೇಂದ್ರ, ತಾಲೂಕು ಮಟ್ಟದಲ್ಲಿ ಒಂದು ಲಸಿಕಾ ಕೇಂದ್ರ ಇರಲಿದ್ದು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡ್ರೈ ರನ್ ಇರಲಿದೆ. ಆರೋಗ್ಯ ಕಾರ್ಯಕರ್ತರು ಮತ್ತು ಕೋವಿಡ್ ವಾರಿಯರ್ ಗಳಿಗೆ ಆದ್ಯತೆಯಲ್ಲಿ ಲಸಿಕೆ ವಿತರಣೆ ನಡೆಯಲಿರುವ ಹಿನ್ನೆಲೆಯಲ್ಲಿ ಅವರೆಲ್ಲರ ಹೆಸರನ್ನು ಕೋವಿನ್ ಅಪ್ಲಿಕೇಶನ್ ನಲ್ಲಿ ನಮೂದಿಸಲಾಗಿದೆ.
undefined
ಹೊಸ ವರ್ಷ: ಕೆಲವು ಮೊಬೈಲ್‌ಗಳಲ್ಲಿ ವಾಟ್ಸಪ್ ಸ್ಥಗಿತ, ಇಂದಿನಿಂದ ಏನೇನು ಬದಲಾಗುತ್ತೆ...? ಇಲ್ಲಿ ನೋಡಿ
ಈ ಡ್ರೈ ರನ್ ನ ಸಂದರ್ಭದಲ್ಲಿ ಅಪ್ಲಿಕೇಶನ್ ನ ಬಳಕೆ ಮತ್ತು ಕಾರ್ಯಸಾಧ್ಯತೆ, ಯೋಜನೆಯ ಜಾರಿಯ ಸಂದರ್ಭದಲ್ಲಿನ ಸಂಪರ್ಕ ವ್ಯವಸ್ಥೆಯ ಪರಿಶೀಲನೆ ಹೇಗಿರಲಿದೆ ಎಂಬುದನ್ನು ಗಮನಿಸಲಾಗುತ್ತದೆ.
ಲಸಿಕೆಯ ದಾಖಲೆ ನಿರ್ವಹಣೆ, ಫಲಾನುಭವಿಗಳಿಗೆ ಲಸಿಕೆ ನೀಡುವ ಮಾಕ್ ಡ್ರಿಲ್ ಸೇರಿದಂತೆ ಲಸಿಕೆಯನ್ನು ಹೊರತು ಪಡಿಸಿ ಉಳಿದೆಲ್ಲ ಚಟುವಟಿಕೆಗಳು ಡ್ರೈ ರನ್‌ನಲ್ಲಿ ಇರಲಿದೆ.