Covid-19: ವೀಕೆಂಡ್ ಕರ್ಫ್ಯೂ ರದ್ದು ಮಾಡಿದ ರಾಜ್ಯ ಸರ್ಕಾರ, ಬೆಂಗಳೂರಿನಲ್ಲಿ ಶಾಲೆಗಳು ಸದ್ಯಕ್ಕೆ ಆರಂಭವಿಲ್ಲ!

By Suvarna News  |  First Published Jan 21, 2022, 2:40 PM IST

ವೀಕೆಂಡ್ ಕರ್ಫ್ಯೂ ರದ್ದು ಮಾಡಿದ ರಾಜ್ಯ ಸರ್ಕಾರ
ಜನರ ಕಷ್ಟವನ್ನು ಗಮನದಲ್ಲಿಟ್ಟುಕೊಂಡ ರಾಜ್ಯ ಸರ್ಕಾರದ ಕ್ರಮ
ಸಣ್ಣ ಹಾಗೂ ಮಧ್ಯಮ ವರ್ಗದ ಉದ್ಯಮಿಗಳ ಮನವಿಗೆ ಸ್ಪಂದಿಸಿದ ಸರ್ಕಾರ


ಬೆಂಗಳೂರು (ಜ. 21): ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂವನ್ನು(Weekend Curfew)  ರದ್ದು ಮಾಡುವಂತೆ ಹೋಟೆಲ್, ಬಾರ್ ಮಾಲೀಕರು, ಉದ್ಯಮಿಗಳ ಸಂಘ ಮಾಡಿದ ಮನವಿಗೆ ಕರ್ನಾಟಕ ಸರ್ಕಾರ ಸ್ಪಂದಿಸಿದ್ದು ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂವನ್ನು ರದ್ದು ಮಾಡುವ ಅಧಿಕೃತ ಘೋಷಣೆ ಮಾಡಿದೆ. ಅದರೊಂದಿಗೆ ಈ ವಾರದಿಂದ ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಇರುವುದಿಲ್ಲ, ನೈಟ್ ಕರ್ಫ್ಯೂಅಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆ. ನೈಟ್ ಕರ್ಫ್ಯೂಅನ್ನು(Night Curfew) ಮುಂದುವರಿಸುವಂತೆ ತಜ್ಞರು ಸಲಹೆ ನೀಡಿದ್ದರೂ, ರಾಜ್ಯ ಸರ್ಕಾರ (Karnataka government) ಇದರಲ್ಲಿ ಕೊಂಚ ಬದಲಾವಣೆ ಮಾಡಿದೆ. ಇದರ ಪ್ರಕಾರ ರಾತ್ರಿ 10 ರಿಂದ ಬೆಳಗ್ಗೆ 5ರವರೆಗೆ ನೈಟ್ ಕರ್ಫ್ಯೂ ಇರಲಿದೆ.

ರಾಜ್ಯದಲ್ಲಿ ಕೋವಿಡ್ (Covid 19) ಕೇಸ್ ಗಳ ಸಂಖ್ಯೆಯಲ್ಲಿ ಏರಿಕೆ ಆಗುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಎರಡು ವಾರದ ಹಿಂದೆ ರಾಜ್ಯ ಸರ್ಕಾರ ವೀಕೆಂಡ್ ಹಾಗೂ ನೈಟ್ ಕರ್ಫ್ಯೂ ಘೋಷಣೆ ಮಾಡಿತ್ತು. ಆದರೆ, ಇದಕ್ಕೆ ಜನರಿಂದ ಆಕ್ರೋಶ ವ್ಯಕ್ತವಾಗಿತ್ತು. ಆರ್ಥಿಕವಾಗಿ ಈಗಾಗಲೇ ಸಂಕಷ್ಟದಲ್ಲಿದ್ದು, ವೀಕೆಂಡ್ ಹಾಗೂ ನೈಟ್ ಕರ್ಫ್ಯೂ ಇದ್ದಲ್ಲಿ ನಾವು ಬೀದಿಗೆ ಬರಲಿದ್ದೇವೆ ಎಂದು ಉದ್ಯಮಿಗಳು ಅಳಲು ತೋಡಿಕೊಂಡಿದ್ದರು.

ವೀಕೆಂಡ್ ಕರ್ಫ್ಯೂ ತೆರವು ಮಾಡಲು ಇಂದು ಮುಖ್ಯಮಂತ್ರಿ ನೇತೃತ್ವದ ಸಭೆಯಲ್ಲಿ ನಿರ್ಣಯ ಮಾಡಲಾಗಿದೆ. ಯೂರೋಪ್ ರಾಷ್ಟ್ರಗಳಲ್ಲಿ ಯಾವುದೇ ನಿರ್ಬಂಧಗಳಿಲ್ಲ. ಕೋವಿಡ್ ಮೂರನೇ ಅಲೆಯ ವ್ಯಾಪಕವಾಗಿ ಹರಡಿದರೂ ತೀವ್ರತೆ ಕಡಿಮೆ ಇದೆ. ಆಸ್ಪತ್ರೆಗಳಲ್ಲಿ ಎಲ್ಲಾ ರೀತಿಯ ಸಿದ್ದತೆಗಳನ್ನ ಮಾಡಿಕೊಳ್ಳೋಣ. ಒಂದು ವೇಳೆ ಆಸ್ಪತ್ರೆ ಸೇರುವವರ ಸಂಖ್ಯೆ ಹೆಚ್ಚಾದರೆ, ಮತ್ತೆ ಬಿಗಿಕ್ರಮ ಮುಂದುವರಿಸೋಣ. ಸದ್ಯ ವೀಕೆಂಡ್ ಕರ್ಫ್ಯೂ ತೆರವು ಮಾಡೋಣ ಅಂತಾ ಕೆಲ ಸಚಿವರಿಂದ ಸಲಹೆ ಬಂದಿದೆ ಎಂದು ವರದಿಯಾಗದೆ. ಆರೋಗ್ಯ ಸಚಿವರ ಸಲಹೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದಲೂ ಸಹಮತ ವ್ಯಕ್ತವಾಗಿದೆ.
 

The weekend curfew will be lifted with immediate effect. If the number of cases (hospital admission ) increases, we will bring back the weekend curfew: R Ashok, Karnataka Revenue Minister

(File photo) pic.twitter.com/P6PgqUDTFB

— ANI (@ANI)


ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಆರೋಗ್ಯ ಸಚಿವ ಕೆ. ಸುಧಾಕರ್ ಹಾಗೂ ತಜ್ಞರು ಭಾಗವಹಿಸಿದ್ದ ಸಭೆಯಲ್ಲಿ ಕೋವಿಡ್ ನಿಯಮಾವಳಿಗಳ ಕುರಿತಾಗಿ ಚರ್ಚೆ ಮಾಡಲಾಯಿತು. ಈ ವೇಳೆ ತಜ್ಞರಿಂದ ಕೇಸ್ ಹೆಚ್ಚಳದ ಬಗ್ಗೆ ಮುಖ್ಯಮಂತ್ರಿ ಸಂಪೂರ್ಣ ಮಾಹಿತಿ ಪಡೆದುಕೊಂಡರು. ಫೆಬ್ರವರಿ ಮೊದಲ ವಾರದಲ್ಲಿ ಕೋವಿಡ್ ಕೇಸ್ ಗಳ ಸಂಖ್ಯೆ ಪೀಕ್ ಗೆ ಹೋಗುವ ಸಾಧ್ಯತೆ ಇದೆ. ಇದಕ್ಕೂ ಮುನ್ನ ಜನವರಿ 4ನೇ ವಾರದಲ್ಲಿ ಕೇಸ್ ಹೆಚ್ಚಳ ಲೆಕ್ಕಾಚಾರ ಹಾಕಲಾಗಿತ್ತು. ಫೆಬ್ರವರಿ 3-4 ನೇ ವಾರದಿಂದ ರಾಜ್ಯದಲ್ಲಿ ಕೇಸ್ ಗಣನೀಯವಾಗಿ ಕಡಿಮೆ ಆಗುತ್ತೆ. ಅಲ್ಲಿಯವರೆಗೂ ಕಠಿಣ ನಿಯಮ ಮುಂದುವರಿಸಿ, ಸದ್ಯಕ್ಕೆ ಬೇಕಾಗಿರುವುದು ಕಠಿಣ ನಿಯಮಗಳು ಎಂದು ತಜ್ಞರು ಮುಖ್ಯಮಂತ್ರಿಗೆ ಮನವರಿಕೆ ಮಾಡಿಕೊಟ್ಟಿದ್ದರು.

Weekend Curfew:ಎಲ್ಲಾ ಆಯಾಮಗಳನ್ನು ಗಮನದಲ್ಲಿಟ್ಟುಕೊಂಡು ಕ್ರಮ: ಸಿಎಂ ಭರವಸೆ
ಬೆಂಗಳೂರಿನಲ್ಲಿ ಕಠಿಣ ನಿಯಮ: ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ನಿರ್ಧಾರವನ್ನು ತೆರವು ಮಾಡಿದ್ದರೂ, ಬೆಂಗಳೂರಿನಲ್ಲಿ ಕಠಿಣ ನಿಯಮ ಜಾರಿಯಲ್ಲಿರದೆ. ಫಿಫ್ಟಿ-ಫಿಫ್ಟಿ ನಿಯಮವನ್ನ ಇನ್ನಷ್ಟು ಕಡ್ಡಾಯ ಹಾಗೂ ಕಠಿಣವಾಗಿ ಮಾಡಬೇಕು ಎಂದು ಸರ್ಕಾರ ಹೇಳಿದೆ.  ಸಿನಿಮಾ ಥಿಯೇಟರ್, ಹೋಟೆಲ್, ಬಾರ್, ರೆಸ್ಟೋರೆಂಟ್ ಗಳಲ್ಲಿ 50-50 ರೂಲ್ ಗಳು ಜಾರಿಯಲ್ಲಿರಲಿದೆ. ಮಾರುಕಟ್ಟೆಗಳಲ್ಲಿ ಜನಸಂದಣಿ ಇರುವ ಜಾಗದಲ್ಲಿ ಕಟ್ಟುನಿಟ್ಟಿನ ಮಾಸ್ಕ್ ಅಭಿಯಾನ‌ ಇರಲಿದೆ ಎಂದು ಸರ್ಕಾರ ತಿಳಿಸಿದೆ.

Weekend Curfew: ಜೀವ, ಜೀವನ ಎರಡೂ ಮುಖ್ಯ, ನೋಡಿಕೊಂಡು ನಿರ್ಧಾರ: ಡಾ. ಸುಧಾಕರ್
ಶಾಲೆಗಳ ಪ್ರಾರಂಭಕ್ಕೆ ಸರ್ಕಾರದ ಗ್ರೀನ್ ಸಿಗ್ನಲ್: ಇದೇ ವೇಳೆ ಸಭೆಯಲ್ಲಿ ಭಾಗವಹಿಸಿದ್ದ ಶಿಕ್ಷಣ ಸಚಿವ ಬಿಸಿ ನಾಗೇಶ್, ರಾಜ್ಯದಲ್ಲಿ ಶಾಲೆಗಳನ್ನು ಪ್ರಾರಂಭಿಸಲು ಅನುಮತಿ ನೀಡುವಂತೆ ಮನವಿ ಮಾಡಿದ್ದರು. ಇದಕ್ಕೆ ಷರತ್ತಿನ ಅನುಮತಿ ಸಿಕ್ಕಿದೆ. ಬೆಂಗಳೂರಿನಲ್ಲಿ ಸದ್ಯಕ್ಕೆ ಶಾಲೆಗಳು ತೆರೆಯುವುದಿಲ್ಲ. ಯಾವ ಶಾಲೆಯಲ್ಲಿ ಅತಿಹೆಚ್ಚು ಪಾಸಿಟಿವ್ ಆದಲ್ಲಿ 7 ದಿನ, ಕಡಿಮೆ ಇದ್ದಲ್ಲಿ 3 ದಿನ ಶಾಲೆ ಮುಚ್ಚುವಂತೆ ತೀರ್ಮಾನ ಮಾಡಲಾಗಿದೆ. ಇದರ ನಿರ್ಧಾರವನ್ನು ಆಯಾ ಜಿಲ್ಲೆಯ ಅಧಿಕಾರಿಗಳು ತೆಗೆದುಕೊಳ್ಳಲಿದ್ದಾರೆ ಎಂದು ಸಚಿವ ಬಿಸಿ ನಾಗೇಶ್ ತಿಳಿಸಿದ್ದಾರೆ. ಜನವರಿ 29ರವರೆಗೂ ಬೆಂಗಳೂರಿನಲ್ಲಿ ಶಾಲೆಗಳು ಬಂದ ಆಗಲಿವೆ.

Tap to resize

Latest Videos

ಸೇರಿದಂತೆ ಕೆಲ ಮಹಾನಗರಗಳಲ್ಲಿ 1-9 ನೇ ತರಗತಿಗಳು ನಿಂತಿವೆ. ಕೊರೋನಾ ಸೋಂಕು ಮಕ್ಕಳಿಗೆ ಹೆಚ್ಚಾಗಿ ಬಾಧಿಸಿಲ್ಲ. ಜನವರಿ ಆರಂಭದಿಂದ ಇಲ್ಲಿವರೆಗೆ ಅಂದಾಜು 7 ಸಾವಿರ ಮಕ್ಕಳಲ್ಲಿ ಮಾತ್ರವೇ ಸೋಂಕು ಕಾಣಿಸಿಕೊಂಡಿದೆ ಎಂದು ಶಿಕ್ಷಣ ಇಲಾಖೆಯ ವರದಿ ತಿಳಿಸಿದೆ. ಇನ್ನು ಸೋಂಕು ಬಂದವರಲ್ಲೂ ಯಾವುದೇ ರೀತಿಯ ದೊಡ್ಡ ಆರೋಗ್ಯ ಸಮಸ್ಯೆ ಆಗಿಲ್ಲ ಹಾಗಾಗಿ ಶಾಲೆಗಳನ್ನು ಮರಳಿ ಆರಂಭಿಸಲು ಅವಕಾಶ ನೀಡುವಂತೆ ಸಚಿವರು ಮನವಿ ಮಾಡಿದ್ದರು. 1 ರಿಂದ 9ನೇ ತರಗತಿ ಆಗದಿದ್ರೂ 5 ರಿಂದ 9ನೇ ತರಗತಿಯ ಮಕ್ಕಳಿಗಾದರೂ ಶಾಲೆ ಆರಂಭಿಸಲು ಅನುಮತಿ ನೀಡಿ ಎಂದು ಮುಖ್ಯಮಂತ್ರಿಯ ಬಳಿ ಕೇಳಿಕೊಂಡಿದ್ದಾರೆ.

ತಜ್ಞರು ಕೊಟ್ಟಿರುವ ಇತರ ಸಲಹೆಗಳು
- ಮದುವೆ, ಅಂತ್ಯ ಸಂಸ್ಕಾರ, ಸಭೆ, ಸಮಾರಂಭಗಳಿಗೆ ಸಡಿಲಿಕೆ ಬೇಡ
- ಧರಣಿ, ಪ್ರತಿಭಟನೆ, ಸಮಾವೇಶಗಳಿಗೆ ನಿರ್ಬಂಧ ಮುಂದುವರೆಯಲಿ
- ಎಲ್ಲ ಕಡೆ ಶಾಲೆಗಳ ಬಂದ್ ಮಾಡುವುದು ಬೇಡ
- ಗಡಿ ಭಾಗಗಳಲ್ಲಿ ಇನ್ನಷ್ಟು ಕಟ್ಟೆಚ್ಚರ ಅಗತ್ಯ
- 50% ರೂಲ್ಸ್ ಎಲ್ಲ ಕಡೆಯೂ ಬೇಡ. ಜಿಲ್ಲಾವಾರು ಕೋವಿಡ್ ಸ್ಥಿತಿ ಆಧರಿಸಿ ಕೈಗೊಳ್ಳಿ
- ಜನಜಂಗುಳಿ ಸೇರದಂತೆ ಕಟ್ಟೆಚ್ಚರ ವಹಿಸಿ
- ಫೆಬ್ರವರಿ ಮೊದಲ ವಾರದವರೆಗೆ ಸಂಪೂರ್ಣ ರಿಲ್ಯಾಕ್ಸೇಷನ್ ಬೇಡವೇ ಬೇಡ
- ಆಸ್ಪತ್ರೆ‌ ದಾಖಲಾತಿ ಜಾಸ್ತಿಯಾದ ಸಂದರ್ಭದಲ್ಲಿ ಕಠಿಣ ನಿರ್ಬಂಧ ಅನಿವಾರ್ಯ

click me!