ಅಸಮರ್ಥ, ದುರ್ಬಲ ಪ್ರಧಾನಿ ಮೋದಿ : ಉಗ್ರಪ್ಪ ಅಸಮಾಧಾನ

By Asianet KannadaFirst Published May 24, 2021, 4:15 PM IST
Highlights
  • ಪ್ರಧಾನಿ ನರೇಂದ್ರ ಮೋದಿ ವಿರುದ್ದ ಕಾಂಗ್ರೆಸ್ ನಾಯಕರ ವಾಗ್ದಾಳಿ
  • ಕೋವಿಡ್ ಬಂದ ನಂತರ ದೆಹಲಿ ಬಿಟ್ಟು ಬರುತ್ತಿಲ್ಲ ಮೋದಿ
  • ಅಸಮರ್ಥ  ಪ್ರಧಾನಿ ಮೊದ ನಿರ್ವಹಣೆ ಮಾಡುತ್ತಿಲ್ಲವೆಂದು ಅಸಮಾಧಾನ

ಬೆಂಗಳೂರು (ಮೇ.24) ದೇಶದಲ್ಲಿ ಕೊರೋನಾ ಮಹಾಮಾರಿ ಹೆಚ್ಚಾಗಿದೆ. ಆದರೆ ಅಸಮರ್ಥ, ದುರ್ಬಲ ಪ್ರಧಾನಿ  ಮೋದಿ ಕೋವಿಡ್ ಬಂದ ನಂತರ ದೆಹಲಿ ಬಿಟ್ಟು ಹೊರಬರುತ್ತಿಲ್ಲ. ಯಾವುದೆ ರಾಜ್ಯಕ್ಕೂ ಭೇಟಿ ಕೊಟ್ಟಿಲ್ಲ. ಜನರಲ್ಲಿ ಆತ್ಮವಿಶ್ವಾಸ ತುಂಬುವ ಪ್ರಯತ್ನ ಮಾಡಿಲ್ಲ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ವಾಗ್ದಾಳಿ ನಡೆಸಿದರು.

ಕೆಪಿಸಿಸಿ ಕಚೇರಿಯಲ್ಲಿಂದು ನಡೆದ ಕಾಂಗ್ರೆಸ್ ನಾಯಕರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಗ್ರಪ್ಪ  ಅಸಮರ್ಥ, ದುರ್ಬಲ ಪ್ರಧಾನಿ ಎಂದರೆ ಮೋದಿ.  ಜನರಲ್ಲಿ ಆತ್ಮವಿಶ್ವಾಸ ತುಂಬುವ ಪ್ರಯತ್ನ ಮಾಡಿಲ್ಲ. ಔಷಧಿ,ಇನ್ನಿತರ ಸೌಲಭ್ಯವನ್ನೂ ಒದಗಿಸುತ್ತಿಲ್ಲ. ಮೋದಿ ದೆಹಲಿಯಲ್ಲೇ ಠಿಕಾಣಿ ಹೂಡಿದ್ದಾರೆ.  ಕೋವಿಡ್ ಗೂ ಮುನ್ನ 108 ದೇಶಗಳಿಗೆ ಭೇಟಿ ಕೊಟ್ಟಿದ್ದರು. 37 ಅಫಿಶಿಯಲ್ ಭೇಟಿಯನ್ನ ಕೊಟ್ಟಿದ್ದರು. ಆದರೆ ಕೋವಿಡ್ ಬಂದ ನಂತರ ಅವರು ಹೊರಬರುತ್ತಿಲ್ಲವೆಂದು ವಾಗ್ದಾಳಿ ನಡೆಸಿದರು.

 ಪ್ರಧಾನಿ‌ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. 66 ರು.ಗೆ ಪೆಟ್ರೋಲ್,ಡಿಸೇಲ್ ಸಿಗುತ್ತಿತ್ತು. ಜನವರಿಯವರೆಗೆ ಕಡಿಮೆ ಬೆಲೆ ಇತ್ತು. ಅಲ್ಲಿಂದ ನಿರಂತರವಾಗಿ ಏರಿಕೆಯಾಗುತ್ತಲೇ ಇದೆ. ಇಂದು ಪ್ರತಿ ಬ್ಯಾರಲ್ ಬೆಲೆ 69 ಡಾಲರ್ ಇದೆ. ವಿದೇಶಿ ಮಾರುಕಟ್ಟೆಯಲ್ಲಿ ಪೆಟ್ರೋಲ್ ಬೆಲೆ ಇದೆ. ಇಂದು 96 ರು. ಪೆಟ್ರೋಲ್ ಲೀಟರ್ ಗಿದೆ. ಕೆಲವು ರಾಜ್ಯಗಳಲ್ಲಿ 100 ದಾಟಿದೆ ಎಂದರು. 

ವೈದ್ಯರ ಜೊತೆ ಮೋದಿ ಸಂವಾದ: ಸಾವು ನೆನೆದು ಪ್ರಧಾನಿ ಗದ್ಗದಿತ! ..

ಇನ್ನು ಅಗತ್ಯ ಪದಾರ್ಥಗಳ ಬೆಲೆ ಗಗನಕ್ಕೆ ಹೋಗಿವೆ. ಜನವರಿಯಿಂದ ಇಲ್ಲಿವರೆಗೆ 40 ಬಾರಿ ಬೆಲೆ ಏರಿಸಿದ್ದಾರೆ. ಗುಜರಾತ್ ಗೆ 19 ಭಾರಿ ಭೇಟಿ ನೀಡಿದ್ದಾರೆ. ರಾಜ್ಯಕ್ಕೆ 7 ಭಾರಿ ಮಾತ್ರ ಭೇಟಿ ಕೊಟ್ಟಿದ್ದಾರೆ.  

ಗುಜರಾತ್ ನಲ್ಲಿ ಸೈಕ್ಲೋನ್ ಬಂದಿದೆ. ಇದರ ಎಫೆಕ್ಟ್ ರಾಜ್ಯ ಸೇರಿ ಹಲವು ಕಡೆ ಆಗಿದೆ. ಆದರೆ ಪ್ರಧಾನಿ ಕಾಲ್ ಮಾಡಿದ್ದು ಗುಜರಾತ್ ಸಿಎಂಗೆ ಮಾತ್ರ. ಗುಜರಾತ್ ಗೆ 1 ಸಾವಿರ ಕೋಟಿ ನೆರವು ನೀಡಿದ್ದಾರೆ. ಪಿಎಂಕೇರ್ಸ್ ನಿಂದ 2 ಸಾವಿರ ಕೋಟಿ ಕೊಟ್ಟಿದ್ದಾರೆ. ಜಲಜೀವನ್ ಮಿಷನ್ ನಲ್ಲಿ 883 ಕೋಟಿ ಒದಗಿಸಿದ್ದಾರೆ. ಪ್ರಧಾನಿ ಮಂತ್ರಿ ಅವಾಸ್ ನಲ್ಲೂ ಹೆಚ್ಚು ಅನುದಾನ ಕೊಡಲಾಗಿದೆ. 900 ಮೆಟ್ರಿಕ್ ಟನ್ ಆಕ್ಸಿಜನ್ ಗುಜರಾತ್ ಗೆ ಪ್ರತಿದಿನ ಕೊಡುತ್ತಿದ್ದಾರೆ.  ಕರ್ನಾಟಕಕ್ಕೆ 1200 ಮೆಟ್ರಿಕ್ ಟನ್ ಕೊಡಬೇಕು ಎಂದು ಕೋರ್ಟ್ ಹೇಳಿದೆ. ಆದರೆ ಕೊಡುತ್ತಿರುವುದು 867 ಮೆಟ್ರಿಕ್ ಟನ್ ಮಾತ್ರ ಎಂದರು.

 ಗುಜರಾತ್ ಗೆ  5.16 ಲಕ್ಷ ವಯಲ್ಸ್ ರೆಮ್ಡೆಸಿವಿರ್  ನೀಡಿದ್ದಾರೆ. ಇಲ್ಲಿಯವರೆಗೆ ರಾಜ್ಯಕ್ಕೆ ಕೊಟ್ಟಿದ್ದು 2.17 ಲಕ್ಷ ಮಾತ್ರ. ಇದು ಪ್ರಧಾನಿ ಮೋದಿ ಮಲತಾಯಿ ಧೋರಣೆ ಎಂದು ಉಗ್ರಪ್ಪ ಅಸಮಾಧಾನ ವ್ಯಕ್ತಪಡಿಸಿದರು.
 
ಬೆಂಗಳೂರಿನಲ್ಲಿ ಕೋವಿಡ್ ಕಡಿಮೆಯಾಗಿಲ್ಲ
: ಬೆಂಗಳೂರಿನಲ್ಲಿ ಸೋಂಕು ಕಡಿಮೆಯಾಗಿದೆ ಅನ್ನೋದು ಸುಳ್ಳು ಎಂದು ಇದೇ ವೇಳೆ ಶಾಸಕ ಹ್ಯಾರಿಸ್ ಹೇಳಿದರು.  ಕಡಿಮೆಯಾಗಿದ್ದರೆ ಹಾಸಿಗೆ ಸಿಗಬೇಕಿತ್ತು. ಇವತ್ತಿಗೂ ಹಾಸಿಗೆಗಳು ಸಿಗುತ್ತಿಲ್ಲ. ಟೆಸ್ಟ್ ರಿಸಲ್ಟ್ ಕಡಿಮೆ ಮಾಡ್ತಿದ್ದಾರೆ. ವ್ಯಾಕ್ಸಿನ್ ಸೆಕೆಂಡ್ ಡೋಸ್ ಸಿಗ್ತಿಲ್ಲ.  
 
ಕಳೆದ ಬಾರಿ ಪ್ಯಾಕೇಜ್ ಘೋಷಣೆ ಮಾಡಿದ್ದರು. ಆದರೆ 2 ಪರ್ಸೆಂಟ್ ಮಾತ್ರ ಆಗ ಸಿಕ್ಕಿದ್ದು ಈಗ ಮತ್ತೆ 1250 ಕೋಟಿ ಘೋಷಣೆ ಮಾಡಿದ್ದಾರೆ. ಅದು ಯಾವಾಗ ತಲುಪುತ್ತೋ ಗೊತ್ತಿಲ್ಲ ಎಂದರು. 

ವರ್ಲ್ಡ್ ಬ್ಯಾಂಕ್ ಮೋದಿ ದಿಕ್ಕು ತಪ್ಪಿಸುತ್ತಿದ್ದಾರೆ ಎಂದಿದೆ.  ಆರ್ಥಿಕವಾಗಿ ದೇಶ ಅದೋಗತಿಯತ್ತ ಸಾಗುತ್ತಿದೆ. ಲಾಕ್ ಡೌನ್ ಮಾಡಿ ಒಂದು ತಿಂಗಳಲಾಯ್ತು.  ಆದರೆ ಅವರು ಜೀವನ ಮಾಡೋಕೆ ಏನೂ ಕೊಟ್ಟಿಲ್ಲ. ಇತ್ತ ಕೆಲಸ ಇಲ್ಲ,ಹಣ ಇಲ್ಲ, ಎಲ್ಲಿಂದ ಜೀವನ ಮಾಡುತ್ತಾರೆ ಎಂದರು. 

ತಮಿಳುನಾಡಿನಲ್ಲಿ ದ್ವೇಷದ ರಾಜಕಾರಣವಿದೆ.  ಆದರೆ ಕಮಿಟಿ ಮಾಡಿ ಎಲ್ಲ ಪಕ್ಷ ಸೇರಿಸಿದ್ದಾರೆ. ಮೂರು ಕೋಟಿ ಕುಟುಂಬಕ್ಕೆ 2 ಸಾವಿರ ಕೊಟ್ಟಿದ್ದಾರೆ. 

ಬ್ಲಾಕ್ ಫಂಗಸ್ ಗೆ ಔಷಧಿಯೇ ಸಿಗ್ತಿಲ್ಲ. ರಾಜ್ಯದಲ್ಲಿ 500 ಕೇಸ್ ದಾಖಲಾಗಿದೆ. ಮೆಡಿಕಲ್ ಆಕ್ಸಿಜನ್ ಪೂರೈಕೆಯಾಗುತ್ತಿಲ್ಲ.ಸರ್ಕಾರ ಬೇಕಾಗಿರುವುದನ್ನು ಕೊಡುತ್ತಿಲ್ಲವೆಂದು ವಾಗ್ದಾಳಿ ನಡೆಸಿದರು. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!