KSRTCಯಲ್ಲಿ ಬರುವ ಪ್ರಯಾಣಿಕರಿಗೆ ಕೋವಿಡ್ ರಿಪೋರ್ಟ್ ಕಡ್ಡಾಯ

By Kannadaprabha News  |  First Published Jun 29, 2021, 9:20 AM IST
  • ಮಹಾರಾಷ್ಟ್ರದಿಂದ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ರಾಜ್ಯಕ್ಕೆ ಬರುವ ಪ್ರಯಾಣಿಕರಿಗೆ ಕೋವಿಡ್ ರಿಪೋರ್ಟ್ ಕಡ್ಡಾಯ
  • ದಟ್ಟಣೆಗೆ ಅನುಗುಣವಾಗಿ ನಾಲ್ಕೈದು ಬಸ್‌ಗಳು ಮಹಾರಾಷ್ಟಕ್ಕೆ ಸಂಚಾರ
  • ಮಹಾರಾಷ್ಟದಲ್ಲಿ ಹೆಚ್ಚಾಗಿರುವ ಸೋಂಕಿನ ಪ್ರಮಾಣ

ಬೆಂಗಳೂರು (ಜೂ.29) :  ಮಹಾರಾಷ್ಟ್ರದಿಂದ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ರಾಜ್ಯಕ್ಕೆ ಬರುವ ಪ್ರಯಾಣಿಕರು ಕಡ್ಡಾಯವಾಗಿ ಕೋವಿಡ್‌ ವರದಿ ತರಬೇಕು. ಇಲ್ಲವಾದರೆ, ಬಸ್‌ಗಳಲ್ಲಿ ಪ್ರಯಾಣಿಸಲು ಅವಕಾಶ ನೀಡದಂತೆ ಕೆಎಸ್‌ಆರ್‌ಟಿಸಿ ತನ್ನ ಚಾಲನಾ ಸಿಬ್ಬಂದಿಗೆ ಸೂಚನೆ ನೀಡಿದೆ.

ಅನ್‌ಲಾಕ್‌ ಬಳಿಕ ಬೆಂಗಳೂರು ಸೇರಿದಂತೆ ನಿಗಮದ ವ್ಯಾಪ್ತಿಯಲ್ಲಿ ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ನಾಲ್ಕೈದು ಬಸ್‌ಗಳು ಮಹಾರಾಷ್ಟಕ್ಕೆ ಸಂಚರಿಸುತ್ತಿವೆ. ಮಹಾರಾಷ್ಟದಲ್ಲಿ ಸೋಂಕಿನ ಪ್ರಮಾಣ ಹೆಚ್ಚಿದೆ, ಅಲ್ಲದೇ ಡೆಲ್ಟಾಪ್ಲಸ್‌ ಪ್ರಕರಣ ಕೂಡಾ ಜಾಸ್ತಿ ಇದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಸೂಚನೆ ಮೇರೆಗೆ ಮಹಾರಾಷ್ಟ್ರದಿಂದ ನಿಗಮದ ಬಸ್‌ಗಳಲ್ಲಿ ರಾಜ್ಯಕ್ಕೆ ಬರುವ ಪ್ರಯಾಣಿಕರು ಕೋವಿಡ್‌ ವರದಿ ತರುವುದನ್ನು ಕಡ್ಡಾಯಗೊಳಿಸಲಾಗಿದೆ.

Latest Videos

undefined

ಡೆಲ್ಟಾ ಭೀತಿ: ರಾಜ್ಯದ ಗಡಿಭಾಗದಲ್ಲಿ ಕಟ್ಟೆಚ್ಚರ, ಪ್ರಯಾಣಿಕರ ಮೇಲೆ ನಿಗಾ: ಡಾ. ಸುಧಾಕರ್ ...

 ಈ ನಡುವೆ ರಾಜ್ಯ ಸರ್ಕಾರ ಕೊರೋನಾ ಲಸಿಕೆ ಮೊದಲ ಡೋಸ್‌ ಪಡೆದ ಪ್ರಯಾಣಿಕರಿಗೂ ಬಸ್‌ಗಳಲ್ಲಿ ಪ್ರಯಾಣಕ್ಕೆ ಅವಕಾಶ ನೀಡುವ ಬಗ್ಗೆ ಚರ್ಚಿಸುತ್ತಿದೆ. ಸದ್ಯಕ್ಕೆ ಕೋವಿಡ್‌ ವರದಿ ತರುವ ಪ್ರಯಾಣಿಕರಿಗಷ್ಟೇ ಪ್ರಯಾಣಕ್ಕೆ ಅವಕಾಶ ನೀಡುವುದಾಗಿ ಕೆಎಸ್‌ಆರ್‌ಟಿಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

click me!