Corona Update ಕರ್ನಾಟಕದಲ್ಲಿ ಕೊರೋನಾ ಭಾರಿ ಹೆಚ್ಚಳ, ಹೀಗೆ ಮುಂದುವರಿದ್ರೆ ಲಾಕ್‌ ಫಿಕ್ಸ್!

By Suvarna News  |  First Published Jan 3, 2022, 8:37 PM IST

* ಕರ್ನಾಟಕದಲ್ಲಿ ಕೊರೋನಾ ಭಾರಿ ಹೆಚ್ಚಳ
* ಕೊರೋನಾ ಪಾಸಿಟಿವಿಟ್ ದರ ಬರೊಬ್ಬರಿ ಶೇ 1.60ಕ್ಕೆ ಏರಿಕೆ
* ರಾಜ್ಯದಲ್ಲಿ ಶುರುವಾಯ್ತು ಲಾಕ್‌ಡೌನ್ ಆತಂಕ


ಬೆಂಗಳೂರು, (ಜ.03): ರೂಪಾಂತರಿ ಒಮಿಕ್ರಾನ್ (Omicron) ವೈರಸ್ ನಡುವೆಯೇ ಕರ್ನಾಟಕದಲ್ಲಿ ಕೊರೋನಾ ಸೋಂಕು (Coronavirus) ಮತ್ತೆ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ಆತಂಕಕ್ಕೆ ಕಾರಣವಾಗಿದೆ.

ಹೌದು....ಕಳೆದ 24 ಗಂಟೆಯಲ್ಲಿ(ಸೋಮವಾರ) ರಾಜ್ಯದಲ್ಲಿ 1290 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಇದರಿಂದ ಕೊರೋನಾ ಪಾಸಿಟಿವಿಟ್ ದರ ಬರೊಬ್ಬರಿ ಶೇ 1.60ಕ್ಕೆ ಏರಿಕೆಯಾಗಿದೆ. ಹಲವು ತಿಂಗಳು 200ರಿಂದ 300ರ ವರೆಗೆ ಇರುತ್ತಿದ್ದ ಕೇಸ್ ಇದೀಗ ದಿಢೀರ್ ಅಂತ ಸಾವಿರ ಮೇಲೆ ಕೇಸ್‌ಗಳು ಪತ್ತೆಯಾಗುತ್ತಿರುವುದು ಬೆಚ್ಚಿಬೀಳಿಸಿದೆ.

Tap to resize

Latest Videos

Coronavirus Update: ಕೊರೋನಾ ಹೆಚ್ಚಳ, ಕಠಿಣ ಕ್ರಮದ ಎಚ್ಚರಿಕೆ ಕೊಟ್ಟ ಸಿಎಂ ಬೊಮ್ಮಾಯಿ

ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3010847ಕ್ಕೆ ಏರಿಕೆಯಾಗಿದ್ರೆ, 38351ಕ್ಕೇರಿದೆ. ಇನ್ನು ಈವರೆಗೆ ಕೊರೋನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದವರ ಸಂಖ್ಯೆ 2961122. ಇದರೊಂದಿಗೆ ಸದ್ಯ ರಾಜ್ಯದಲ್ಲಿ 11345 ಸಕ್ರಿಯ ಪ್ರಕರಣಗಲಿವೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಜಿಲ್ಲಾವಾರು ಕೊರೋನಾ ಪ್ರಕರಣಗಳ ಸಂಖ್ಯೆ
ಬಾಗಲಕೋಟೆ 0, ಬಳ್ಳಾರಿ 11, ಬೆಳಗಾವಿ 14, ಬೆಂಗಳೂರು ಗ್ರಾಮಾಂತರ 8, ಬೆಂಗಳೂರು ನಗರ 1041, ಬೀದರ್ 1, ಚಾಮರಾಜನಗರ 0, ಚಿಕ್ಕಬಳ್ಳಾಪುರ 2, ಚಿಕ್ಕಮಗಳೂರು 2, ಚಿತ್ರದುರ್ಗ 1, ದಕ್ಷಿಣ ಕನ್ನಡ 52, ದಾವಣಗೆರೆ 2, ಧಾರವಾಡ 19, ಗದಗ 1, ಹಾಸನ 11, ಹಾವೇರಿ 0, ಕಲಬುರಗಿ 9, ಕೊಡಗು 10, ಕೋಲಾರ 6, ಕೊಪ್ಪಳ 1, ಮಂಡ್ಯ 13, ಮೈಸೂರು 14, ರಾಯಚೂರು 2, ರಾಮನಗರ 0, ಶಿವಮೊಗ್ಗ 13, ತುಮಕೂರು 6, ಉಡುಪಿ 43, ಉತ್ತರ ಕನ್ನಡ 2, ವಿಜಯಪುರ 5, ಯಾದಗಿರಿ ಜಿಲ್ಲೆಯಲ್ಲಿ 1 ಕೊವಿಡ್ 19 ಪ್ರಕರಣಗಳು ದಾಖಲಾಗಿವೆ

Covid numbers in Karnataka today. Positivity rate goes up to 1.60%:
◾New cases in State: 1290
◾New cases in B'lore: 1041
◾Positivity rate: 1.60%
◾New Omicron cases today: 00
◾Total Omicron cases in State: 77
◾Deaths:05 (B'lore- 03)
◾Tests: 80,409

— Dr Sudhakar K (@mla_sudhakar)

ಕರ್ನಾಟಕದಲ್ಲಿ ಸೋಂಕು ವೇಗ
ಕೋವಿಡ್ ಮೂರನೆ ಅಲೆಯ ಊಹಾಪೋಹಗಳ ನಡುವೆ ಕರ್ನಾಟಕದಲ್ಲಿ ಸೋಂಕಿನ ಪ್ರಮಾಣ ಶೇ.241ಪಟ್ಟು ಏರಿಕೆಯಾಗಿದ್ದು, ಮಹಾರಾಷ್ಟ್ರ, ನವದೆಹಲಿ, ಗುಜರಾತ್ ಸೇರಿ ಐದು ರಾಜ್ಯಗಳಲ್ಲಿ ಆತಂಕ ಸೃಷ್ಟಿಯಾಗಿದೆ.

ಕೇಂದ್ರ ಸರ್ಕಾರ ಮೇಲಿಂದ ಮೇಲೆ ರಾಜ್ಯ ಸರ್ಕಾರಗಳಿಗೆ ಪತ್ರಗಳನ್ನು ಬರೆದು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ ನೀಡುತ್ತಲೇ ಇದೆ. ಅದರ ನಡುವೆಯೂ ಸೋಂಕು ಅಂಕೆ ಮೀರಿ ಏರಿಕೆಯಾಗುತ್ತಿದೆ. 

ಆತಂಕಕಾರಿ ಬೆಳವಣಿಗೆಯಲ್ಲಿ ಮಹಾರಾಷ್ಟ್ರ ದಲ್ಲಿ ಕೋವಿಡ್ ಸೋಂಕಿತರಿಗೆ ಆಮ್ಲಜನಕ ಪೂರೈಕೆ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ದೇಶದ ಎಲ್ಲಾ ರಾಜ್ಯಗಳಿಗಿಂತಲೂ ಕರ್ನಾಟಕದಲ್ಲಿ ಸೋಂಕು ವೇಗವಾಗಿ ಹರಡಲಾರಂಭಿಸಿದೆ.

ಸಭೆಯಲ್ಲಿ ಮಹತ್ವದ ತೀರ್ಮಾನ ಸಾಧ್ಯತೆ
ರಾಜ್ಯ ರಾಜಧಾನಿ ಬೆಂಗಳೂರು ( Bengaluru ) ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕೊರೋನಾ ಆರ್ಭಟಿಸುತ್ತಿದೆ. ಅದರಲ್ಲೂ ಬೆಂಗಳೂರಿನಲ್ಲಿ ಕೊರೋನಾ ಮಹಾಸ್ಪೋಟವೇ ದಿನದಿಂದ ದಿನಕ್ಕೆ, ವಾರದಿಂದ ವಾರಕ್ಕೆ ಹೆಚ್ಚಳವಾಗುತ್ತಿದೆ.

ಇದೇ ಕಾರಣದಿಂದಾಗಿ ನಾಳೆ(ಮಂಗಳವಾರ) ಸಿಎಂ ನೇತೃತ್ವದಲ್ಲಿ ತಜ್ಞರ ಸಭೆ, ಈ ಬಳಿಕ ಗುರುವಾರ ರಾಜ್ಯ ಸಚಿವ ಸಂಪುಟ ಸಭೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ನಡೆಸಲಿದ್ದಾರೆ. ಈ ಸಭೆಗಳಲ್ಲಿ ಬೆಂಗಳೂರು ಸೇರಿದಂತೆ ಕೊರೋನಾ ಹೆಚ್ಚಳದ ಪಾಸಿಟಿವಿಟಿ ದರ ಹೆಚ್ಚಳವಿರುವಂತ ಜಿಲ್ಲೆಗಳಲ್ಲಿ ಕಠಿಣ ಕ್ರಮಕೈಗೊಳ್ಳವು ಸಾಧ್ಯತೆಗಳಿವೆ.

 

click me!