ಶಬರಿಮಲೆಯಲ್ಲಿ ಮಹತ್ವದ ಕಂಡೀಶನ್ಸ್ : ಯಾರೆಗೆಲ್ಲಾ ಇಲ್ಲ ಪ್ರವೇಶ

By Kannadaprabha NewsFirst Published Nov 9, 2020, 7:38 AM IST
Highlights

ಶಬರಿಮಲೆಗೆ ತೆರಳುವ ಭಕ್ತರೇ ಇಲ್ಲೊಮ್ಮೆ ಗಮನಿಸಿ.. ಇಲ್ಲಿದೆ ಕೆಲ ಮಹತ್ವದ ಸೂಚನೆ 

ಬೆಂಗಳೂರು (ನ.09):  ಈ ತಿಂಗಳ 16ರಿಂದ ಆರಂಭವಾಗಲಿರುವ ಕೇರಳದ ಶಬರಿಮಲೆ ಯಾತ್ರೆಗೆ ಹೋಗುವ ರಾಜ್ಯದ ಯಾತ್ರಾರ್ಥಿಗಳಿಗೆ ಮುಜರಾಯಿ ಇಲಾಖೆ ಮಾರ್ಗಸೂಚಿ ಹೊರಡಿಸಿದೆ. ಕೊರೋನಾ ಹಿನ್ನೆಲೆಯಲ್ಲಿ ಬಿಗಿ ನಿಯಮಗಳನ್ನು ಜಾರಿಗೊಳಿಸಲಾಗಿದೆ.

ಶಬರಿಮಲೆ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಂಡವರಿಗೆ ಮಾತ್ರ ಪ್ರವೇಶಕ್ಕೆ ಅನುಮತಿ ನೀಡಲಾಗುವುದು. ಹೀಗಾಗಿ ಯಾತ್ರೆಗೆ ತೆರಳುವ ಮುನ್ನ ನೋಂದಣಿ ಕಡ್ಡಾಯವಾಗಿದೆ. ಒಂದು ದಿನಕ್ಕೆ 1 ಸಾವಿರ ಭಕ್ತರಿಗೆ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗುವುದು. ವಾರಾಂತ್ಯಕ್ಕೆ ಅದನ್ನು 2 ಸಾವಿರಕ್ಕೆ ಹೆಚ್ಚಿಸಲಾಗುವುದು. ದೇವರ ದರ್ಶನಕ್ಕೂ 48 ಗಂಟೆಯ ಮುನ್ನ ಕೋವಿಡ್‌ ಪರೀಕ್ಷೆಯ ನೆಗೆಟಿವ್‌ ವರದಿ ಹೊಂದಿರುವುದು ಕಡ್ಡಾಯವಾಗಿದೆ.

ಶಬರಿಮಲೆ ದೇಗುಲದಿಂದ ಮಹತ್ವದ ಆದೇಶ : ಭಕ್ತರೇ ಗಮನಿಸಿ .

10 ವರ್ಷದೊಳಗಿನ ಹಾಗೂ 60 ವರ್ಷ ಮೇಲ್ಪಟ್ಟಭಕ್ತರಿಗೆ, ಪೂರ್ವಕಾಯಿಲೆಗಳನ್ನು ಹೊಂದಿದವರಿಗೆ ಅವಕಾಶ ಇರುವುದಿಲ್ಲ, ಯಾತ್ರೆಗೆ ಹೋಗುವವರು ಬಿಪಿಎಲ್‌ ಕಾರ್ಡ್‌, ಆಯುಷ್ಮಾನ್‌ ಕಾರ್ಡ್‌, ಇತ್ಯಾದಿ ಗುರುತಿನ ಕಾರ್ಡ್‌ ತೆಗೆದುಕೊಂಡು ಹೋಗಬೇಕು.

ಈ ಬಾರಿ ಪಂಪಾನದಿ ಸ್ನಾನ ಇರುವುದಿಲ್ಲ ಎಂದು ತಿಳಿಸಲಾಗಿದೆ.

click me!