ಕೊರೋನಾ ಬಗ್ಗೆ ಆಘಾತಕಾರಿ ಸುದ್ದಿ: ಎಚ್ಚೆತ್ತುಕೊಳ್ಳದಿದ್ರೆ ಕಾದಿದೆ ಗಂಡಾಂತರ..!

Kannadaprabha News   | Asianet News
Published : Apr 04, 2021, 11:05 AM ISTUpdated : Apr 04, 2021, 11:15 AM IST
ಕೊರೋನಾ ಬಗ್ಗೆ ಆಘಾತಕಾರಿ ಸುದ್ದಿ: ಎಚ್ಚೆತ್ತುಕೊಳ್ಳದಿದ್ರೆ ಕಾದಿದೆ ಗಂಡಾಂತರ..!

ಸಾರಾಂಶ

ಕೋವಿಡ್‌ 2ನೇ ಅಲೆ ವೇಗ ಭಾರಿ ಹೆಚ್ಚು| ಜನರು ಸರ್ಕಾರದ ಮಾರ್ಗಸೂಚಿ ಪಾಲಿಸಿ| ಕೊರೋನಾ ಎರಡನೇ ಅಲೆಯನ್ನು ಗೆಲ್ಲಲು ಸಾರ್ವಜನಿಕರ ಸಹಕಾರ ಮುಖ್ಯ| 45 ವರ್ಷಕ್ಕೆ ಮೇಲ್ಪಟ್ಟು ಎಲ್ಲರಿಗೂ ಲಸಿಕೆ ನೀಡುತ್ತಿದ್ದು ಆದಷ್ಟು ಬೇಗ ಲಸಿಕೆ ಪಡೆಯಬೇಕು| ನಮ್ಮ ಸುರಕ್ಷತೆಗೆ ನಾವೇ ಜವಾಬ್ದಾರಿ: ತಜ್ಞರು| 

ಬೆಂಗಳೂರು(ಏ.04): ಕೊರೋನಾ ಮೊದಲ ಅಲೆ ವೇಳೆ ಎಂಟು ವಾರಗಳಲ್ಲಿ ವರದಿಯಾಗಿದ್ದಷ್ಟು ಸೋಂಕು ಪ್ರಕರಣ ಈಗ ನಾಲ್ಕೇ ವಾರಗಳಲ್ಲಿ ವರದಿಯಾಗಿವೆ. ಇದರಿಂದ ಸೋಂಕಿನ ಪ್ರಭಾವ ಎಷ್ಟಿದೆ ಎಂಬುದನ್ನು ಅರ್ಥೈಸಿ ಸರ್ಕಾರ ಸೂಚಿಸಿರುವ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಿ ಎಂದು ಕೊರೋನಾ ತಾಂತ್ರಿಕ ಸಲಹಾ ಸಮಿತಿ ಸದಸ್ಯ ಹಾಗೂ ವೈರಾಣು ತಜ್ಞ ಡಾ.ವಿ. ರವಿ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಅವರು, ತಾಂತ್ರಿಕ ಸಲಹಾ ಸಮಿತಿಗೆ ದೊರೆತಿರುವ ಮಾಹಿತಿ ಪ್ರಕಾರ ಕೊರೋನಾ ಸೋಂಕು ವೇಗವಾಗಿ ಹಬ್ಬುತ್ತಿದೆ. ಮೊದಲ ಅಲೆಯ ವೇಳೆ 6-8 ವಾರದಲ್ಲೇ ವರದಿಯಾಗಿದ್ದಷ್ಟು ಪ್ರಕರಣ ಇದೀಗ 4 ವಾರದಲ್ಲೇ ದೃಢಪಟ್ಟಿವೆ. ಇದರಿಂದ ಸೋಂಕಿನ ಪ್ರಭಾವ ಹೆಚ್ಚಿರುವುದು ಸ್ಪಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲೇ ಸರ್ಕಾರ ಕೆಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಯುಗಾದಿಗೆ ಊರಿಗೆ ಹೋಗುವ ಪ್ಲ್ಯಾನ್ ಇದ್ದರೆ ಬಿಟ್ಹಾಕಿ, ನಿಮ್ಮಿಂದ ಹಳ್ಳಿಗಳಿಗೂ ಹರಡಬಹುದು ವೈರಸ್!

ಸಾರ್ವಜನಿಕರು ಕೊರೋನಾ ಮಾರ್ಗಸೂಚಿಯನ್ನು ನಿರ್ಬಂಧಗಳು ಎಂದು ಭಾವಿಸದೆ ತಮ್ಮ ಸುರಕ್ಷಿತೆಗಾಗಿ ತೆಗೆದುಕೊಂಡಿರುವ ಕ್ರಮಗಳು ಎಂದು ಭಾವಿಸಬೇಕು. ಕೊರೋನಾ ಎರಡನೇ ಅಲೆಯನ್ನು ಗೆಲ್ಲಲು ಸಾರ್ವಜನಿಕರ ಸಹಕಾರ ಮುಖ್ಯ. 45 ವರ್ಷಕ್ಕೆ ಮೇಲ್ಪಟ್ಟು ಎಲ್ಲರಿಗೂ ಲಸಿಕೆ ನೀಡುತ್ತಿದ್ದು ಆದಷ್ಟು ಬೇಗ ಲಸಿಕೆ ಪಡೆಯಬೇಕು. ನಮ್ಮ ಸುರಕ್ಷತೆಗೆ ನಾವೇ ಜವಾಬ್ದಾರಿ ಎಂದು ಹೇಳಿದ್ದಾರೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಡಿಕೆಶಿ ಸಿಎಂ ಆದ್ರೆ ಅವರ ಸಂಪುಟದಲ್ಲಿ ನಾನು ಸಚಿವ ಆಗೋಲ್ಲ: ಕೆಎನ್ ರಾಜಣ್ಣ ದೊಡ್ಡ ನಿರ್ಧಾರ!
'ಅಫಿಡವಿಟ್‌ನಲ್ಲಿ ಡಿಕ್ಲೇರ್ ಮಾಡಿದ್ದರೂ ಟೀಕೆ 'ಚಿಲ್ಲರ್ ಕೆಲಸ': ಸಿಎಂ ಡಿಸಿಎಂ ದುಬಾರಿ ವಾಚ್ ಬಗ್ಗೆ ಬಿಜೆಪಿ ಹೇಳಿಕೆಗೆ ಕಾಶೆಪ್ಪನವರು ಕಿಡಿ