ಶಿವಮೊಗ್ಗ ಜಿಲ್ಲೆಯಲ್ಲಿ ಶನಿವಾರ 49 ಮಂದಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 800ರ ಗಡಿ ದಾಟಿದೆ.
ಶಿವಮೊಗ್ಗ (ಜು. 19): ಜಿಲ್ಲೆಯಲ್ಲಿ ಶನಿವಾರ 49 ಮಂದಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 800ರ ಗಡಿ ದಾಟಿದೆ.
ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಒಟ್ಟು 811ಕ್ಕೆ ಏರಿಕೆಯಾಗಿದ್ದರೆ, ಶನಿವಾರ 83 ಗುಣಮುಖರಾಗಿದ್ದು, ಇಲ್ಲಿಯವರೆಗೆ ಒಟ್ಟು 400 ಮಂದಿ ಗುಣಮುಖರಾಗಿದ್ದಾರೆ.
ಶನಿವಾರ ಪತ್ತೆಯಾದ ಪ್ರಕರಣಗಳಲ್ಲಿ ಶಿವಮೊಗ್ಗ- 19, ಭದ್ರಾವತಿ- 1, ಶಿಕಾರಿಪುರ -16, ತೀರ್ಥಹಳ್ಳಿ -7, ಚಿಕ್ಕಮಗಳೂರು ಹಾಗೂ ಚಿತ್ರದುರ್ಗದಿಂದ ಜಿಲ್ಲೆಗೆ ಬಂದಿದ್ದ ತಲಾ ಓರ್ವರಲ್ಲಿ ಸೋಂಕು ಕಾಣಿಸಿಕೊಂಡಿದೆ.
ಕೋವಿಡ್-19 ನಿಗದಿತ ಆಸ್ಪತ್ರೆಯಲ್ಲಿ 177 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 199 ಮಂದಿ ಕೋವಿಡ್ ಕೇರ್ ಸೆಂಟರ್‌ನಲ್ಲಿ ಹಾಗೂ 16 ಮಂದಿ ಖಾಸಗಿ ಆಸ್ಪತ್ರೆಯಲ್ಲಿ, ಐದು ಮಂದಿ ಮನೆಯಲ್ಲಿಯೇ ಐಸೋಲೇಷನ್‌ಗೆ ಒಳಗಾಗಿದ್ದಾರೆ.
ಶಿವಮೊಗ್ಗದಲ್ಲಿ 4 ಲಕ್ಷ ಜನರಿಗೆ ಉಚಿತ ಆಯುರ್ವೇದ ಕಿಟ್
ಆರ್‌ಎಂಎಲ್ ನಗರದ 9ನೇ ಅಡ್ಡರಸ್ತೆಯಲ್ಲಿನ ವ್ಯಕ್ತಿಯೊಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಜಯನಗರ 2 ನೇ ತಿರುವಿನಲ್ಲಿ ಮಹಿಳೆಯೋರ್ವರಿಗೆ ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗುಲಿದೆ. ಶರಾವತಿ ನಗರದ 4ನೇ ಮುಖ್ಯರಸ್ತೆ 3ನೇ ಅಡ್ಡರಸ್ತೆಯ ನಿವಾಸಿಯೊಬ್ಬರಲ್ಲಿ ಸೋಂಕುಪತ್ತೆಯಾಗಿರುವುದಾಗಿ ತಿಳಿದುಬಂದಿದೆ.
ಆಲ್ಕೊಳ ವೃತ್ತ ಸಮೀಪದ ನಿವಾಸಿ, ಹೊಸಮನೆ ಮೊದಲನೇ ಮುಖ್ಯರಸ್ತೆ 6 ನೇ ಅಡ್ಡ ರಸ್ತೆಯ 16 ವರ್ಷದ ಬಾಲಕನಲ್ಲಿ ಸೋಂಕು ಪತ್ತೆಯಾಗಿದ್ದು ಸದರಿ ಪ್ರದೇಶವೂ ಸೀಲ್ ಡೌನ್ ಆಗಿದೆ. ಯಲಕಪ್ಪನ ಕೇರಿಯ ನಿವಾಸಿ, ಜೆಪಿ ನಗರದ ಎರಡನೇ ತಿರುವಿನ ನಿವಾಸಿ, ವಿನೋಬನಗರದ 60 ಅಡಿ ರಸ್ತೆಯ ಮೂರನೇ ತಿರುವಿನ ವ್ಯಕ್ತಿಗೆ ಕೊರೋನಾ ಕಾಣಿಸಿಕೊಂಡಿದೆ.
ಜೈಲ್ ರಸ್ತೆಯ ಕಾಂಡಿಮೆಂಟ್ಸ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯಲ್ಲಿ ಸೋಂಕುಪತ್ತೆಯಾಗಿದ್ದು, ಈತ ವೆಂಕಟೇಶ್ವರ ನಗರದ ಮೊದಲನೇ ತಿರುವಿನಲ್ಲಿ ವಾಸಿಸುತ್ತಿರುವ ಇವರ ಮನೆಯ ರಸ್ತೆ ಸೀಲ್ ಡೌನ್ ಆಗಿದೆ. ಆರ್‌ಎಂಎಲ್ ನಗರದ 9ನೇ ಅಡ್ಡರಸ್ತೆಯಲ್ಲಿನ ವ್ಯಕ್ತಿಯೊಬ್ಬರಲ್ಲೂ ಸೋಂಕು ಪತ್ತೆಯಾಗಿದೆ.
ಜಯನಗರ 2ನೇ ತಿರುವಿನಲ್ಲಿ ಮಹಿಳೆಯೋರ್ವರಿಗೆ ಪ್ರಾಥಮಿಕ ಸಂಪರ್ಕದಿಂದ ಸೋಂಕು ಪತ್ತೆಯಾಗಿದೆ. ವಿದ್ಯಾನಗರದ 4ನೇ ತಿರುವಿನ ಇಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಇವರಿಗೆ ಬೆಂಗಳೂರಿನ ಪ್ರಯಾಣದ ನಂಟು ಇದೆ ಎಂಬ ಮಾಹಿತಿ ಲಭ್ಯವಾಗಿದೆ.
ಬೆಂಗಳೂರು: ಇನ್ನೊಂದು ವಾರದಲ್ಲಿ ಕೊರೊನಾ ನಿಯಂತ್ರಣ, ಬಿಬಿಎಂಪಿ ಆಯುಕ್ತ ಮಂಜುನಾಥ್
ಪೊಲೀಸರಿಗೆ ಕೊರೋನಾ
ದೊಡ್ಡಪೇಟೆ ಠಾಣೆಯ ಎಎಸ್‌ಐ ಹಾಗೂ ಹೆಡ್ ಕಾನ್‌ಸ್ಟೇಬಲ್ ಒಬ್ಬರಿಗೆ ಕೊರೋನಾ ಸೊಂಕು ಕಾಣಿಸಿಕೊಂಡಿದೆ ಎನ್ನಲಾಗಿದೆ. ಕೆಎಸ್‌ಆರ್‌ಪಿ ಪೊಲೀಸ್ ಓರ್ವರಲ್ಲಿ ಸೋಂಕು ಪತ್ತೆಯಾಗಿದೆ ಎನ್ನಲಾಗಿದೆ. ಮಲವಗೊಪ್ಪದ ಚನ್ನಬಸಪ್ಪ ದೇವಸ್ಥಾನದ ಬಳಿ ಇವರು ವಾಸವಾಗಿದ್ದು, ಇವರ ಮನೆಯ ಸುತ್ತಮುತ್ತಲಿನ ಪ್ರದೇಶ ಲಾಕ್‌ಡೌನ್ ಮಾಡಲಾಗಿದೆ.