ಮತ್ತೊಂದು ಬೆಲೆ ಏರಿಕೆ ಶಾಕ್, ನಾಳೆಯಿಂದ ಬೆಂಗಳೂರು ವಿಮಾನ ನಿಲ್ದಾಣದತ್ತ ಪ್ರಯಾಣ ದುಬಾರಿ

Published : Apr 02, 2025, 03:05 PM ISTUpdated : Apr 02, 2025, 03:15 PM IST
ಮತ್ತೊಂದು ಬೆಲೆ ಏರಿಕೆ ಶಾಕ್, ನಾಳೆಯಿಂದ ಬೆಂಗಳೂರು ವಿಮಾನ ನಿಲ್ದಾಣದತ್ತ ಪ್ರಯಾಣ ದುಬಾರಿ

ಸಾರಾಂಶ

ಹಾಲು, ವಿದ್ಯುತ್, ಪಾರ್ಕಿಂಗ್ ಸೇರಿದಂತೆ ಒಂದರ ಮೇಲೊಂದರಂತೆ ಬೆಲೆ ಏರಿಕೆಯಾಗುತ್ತಿದೆ. ಇದರ ಬೆನ್ನಲ್ಲೇ ಇದೀಗ ಬೆಂಗಳೂರು ವಿಮಾನ ನಿಲ್ದಾಣದತ್ತ ಪ್ರಯಾಣವೂ ದುಬಾರಿಯಾಗಿದೆ. 

ಬೆಂಗಳೂರು(ಏ.02) ಕರ್ನಾಟಕ ಜನತೆ ಬೆಲೆ ಏರಿಕೆಯಿಂದ ಕಂಗಾಲಾಗಿದ್ದಾರೆ. ಏಪ್ರಿಲ್ ತಿಂಗಳ ಆರಂಭದಿಂದಲೇ ಒಂದಲ್ಲ ಒಂದು ಬೆಲೆ ಏರಿಕೆಯಾಗುತ್ತಿದೆ. ಹಾಲಿನ ದರ, ವಿದ್ಯುತ್ ದರ, ಡೀಸೆಲ್ ಬೆಲೆ, ಕಸದ ಮೇಲೆ ಸೆಸ್, ಪಾರ್ಕಿಂಗ್ ಶುಲ್ಕ ಹೆಚ್ಚಳ, ಹೀಗೆ ಪ್ರತಿಯೊಂದರ ಬೆಲೆ ಏರಿಕೆಯಾಗುತ್ತಿದೆ. ಕರ್ನಾಟಕ ಇದೀಗ ದುಬಾರಿಯಾಗಿದೆ. ಈ ಎಲ್ಲಾ ಬೆಲೆಗಳ ನಡುವೆ ಇದೀಗ ಮತ್ತೊಂದು ಬರೆ ಎಳೆಯಲಾಗಿದೆ. ನಾಳೆಯಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ತೆರಳವುದು ದುಬಾರಿ. ಕಾರಣ ಇಂದು ಮಧ್ಯರಾತ್ರಿಯಿಂದ ವಿಮಾನ ನಿಲ್ದಾಣ ದಾರಿಯ ಟೋಲ್ ಶುಲ್ಕ ಹೆಚ್ಚಳವಾಗುತ್ತಿದೆ. ಹೀಗಾಗಿ ನಾಳೆಯಿಂದ ಬೆಂಗಳೂರು ಕೇಂಪೇಗೌಡ ವಿಮಾನ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರು ದುಪ್ಪಟ್ಟು ಟೋಲ್ ಶುಲ್ಕ ನೀಡಬೇಕು.

ಬೆಂಗಳೂರು ವಿಮಾನ ನಿಲ್ದಾಣ ದಾರಿಯಲ್ಲಿನ ಟೋಲ್ ಶುಲ್ಕಾ ಈಗಾಲೇ ದುಬಾರಿಯಾಗಿದೆ.ಇದೀಗ ದುಪ್ಪಟ್ಟಾಗಿದೆ. ಬೆಂಗಳೂರು ವಿಮಾನ ನಿಲ್ದಾಣ ಕನೆಕ್ಟ್ ಆಗುವು  ರಸ್ತೆಗಳ ಟೋಲ್ ಪ್ಲಾಜಾ ಬೆಲೆ ಹೆಚ್ಚಳ ಮಾಡಲಾಗಿದೆ. ಸಾದಹಳ್ಳಿ ಟೋಲ್ ಪ್ಲಾಜಾ , ಹುಲಿಕುಂಟೆ ಟೋಲ್ ಪ್ಲಾಜಾ ಹಾಗೂ ನಲ್ಲರೂ ದೇವನಹಳ್ಳಿ ಟೋಲ್ ಪ್ಲಾಜಾ ಬೆಲೆ ಏರಿಕೆ ಮಾಡಲಾಗಿದೆ. ಕೇಂದ್ರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೋಲ್ ದರ ಹೆಚ್ಚಳದ ಅಧಿಸೂಚನೆ ಹೊರಡಿಸಿದೆ. ಇಂದು ಮಧ್ಯರಾತ್ರಿಯಿಂದಲೇ ಹೊಸ ದರ ಜಾರಿಯಾಗುತ್ತಿದೆ.

Breaking ರಾಜ್ಯದಲ್ಲಿ ಮತ್ತೊಂದು ಬೆಲೆ ಏರಿಕೆ ಶಾಕ್; ಇಂದಿನಿಂದಲೇ ಡೀಸೆಲ್ ದರ ಹೆಚ್ಚಳ

ಕಾರು, ಜೀಪ್, ವ್ಯಾನ್(ಲೈಟ್ ಮೋಟಾರ್ ವೆಹಿಕಲ್) ಟೋಲ್ ಶುಲ್ಕವನ್ನು 115 ರೂಪಾಯಿಯಿಂದ 120 ರೂಪಾಯಿಗೆ ಏರಿಕೆ ಮಾಡಲಾಗಿದೆ. ಇದು ಸಿಂಗಲ್ ಜರ್ನಿಗೆ ಅನ್ವಯವಾಗಲಿದೆ. ಇನ್ನು 24 ಗಂಟೆಯಲ್ಲಿ ರಿಟರ್ನ್ ಟ್ರಿಪ್‌ಗೂ ಶುಲ್ಕ ಪಾವತಿಸುವುದಾದರೆ 180 ರೂಪಾಯಿ ಪಾವತಿಸಬೇಕು. ಪರಿಷ್ಕರಣೆಗೂ ಮೊದಲು ಈ ಬೆಲೆ 170 ರೂಪಾಯಿ ಆಗಿತ್ತು.

ಸಾದಹಳ್ಳಿ ಟೋಲ್ ಪ್ಲಾಜಾ ಬೆಲೆ 
ಕಾರು, ಜೀಪ್, ವ್ಯಾನ್ ಹಾಗೂ ಲೈಟ್ ಮೋಟಾರ್ ವೆಹಿಕಲ್
ಸಿಂಗಲ್ ಜರ್ನಿ: 120 ರೂಪಾಯಿ(ಮೊದಲಿನ ದರ 115 ರೂಪಾಯಿ)
ರಿಟರ್ನ್ ಜರ್ನಿ: 180 ರೂಪಾಯಿ( ಮೊದಲಿನ ದರ 170 ರೂಪಾಯಿ)
ತಿಂಗಳ ಪಾಸ್ : 50 ಟ್ರಿಪ್‌ಗೆ 3,970 ರೂಪಾಯಿ ( ಮೊದಲಿನ ದರ 3,835 ರೂಪಾಯಿ)

ಲೈಟ್ ಕಮರ್ಷಿಯಲ್ ವೆಹಿಕಲ್ ಹಾಗೂ ಮಿನಿ ಬಸ್
ಸಿಂಗಲ್ ಜರ್ನಿ: 185 ರೂಪಾಯಿ( ಮೊದಲಿನ ದರ 175 ರೂಪಾಯಿ)
ರಿಟರ್ನ್ ಜರ್ನಿ: 275 ರೂಪಾಯಿ( ಮೊದಲಿನ ದರ 265 ರೂಪಾಯಿ)
ತಿಂಗಳ ಪಾಸ್: 6,100 ರೂಪಾಯಿ( ಮೊದಲಿನ ದರ 5,890 ರೂಪಾಯಿ)

ಟ್ರಕ್ ಹಾಗೂ ಬಸ್ ದರ
ಸಿಂಗಲ್ ಜರ್ನಿ: 370 ರೂಪಾಯಿ( ಮೊದಲಿನ ದರ 355 ರೂಪಾಯಿ)
ರಿಟರ್ನ್ ಜರ್ನ: 550 ರೂಪಾಯಿ( ಮೊದಲಿನ ದರ  535 ರೂಪಾಯಿ)
ತಿಂಗಳ ಪಾಸ್: 12,265 ರೂಪಾಯಿ( ಮೊದಲಿನ ದರ 11,845 ರೂಪಾಯಿ)

ಹುಲಿಕುಂಟೆ ಟೋಲ್ ಪ್ಲಾಜಾ ದರ(ದಾಬಸಪೇಟೆ-ದೊಡ್ಡಬಳ್ಳಾಪುರ ಮಾರ್ಗ)
ಸಿಂಗಲ್ ಜರ್ನಿ: 110 ರೂಪಾಯಿ( ಮೊದಲಿನ ದರ 105 ರೂಪಾಯಿ)
ರಿಟರ್ನ್ ಜರ್ನಿ: 165 ರೂಪಾಯಿ(ಮೊದಲಿನ ದರ 155 ರೂಪಾಯಿ)
ತಿಂಗಳ ಪಾಸ್: 3615 ರೂಪಾಯಿ( ಮೊದಲಿನ ದರ 3,490 ರೂಪಾಯಿ)

ನಲ್ಲೂರು ದೇವನಹಳ್ಳಿ ಟೋಲ್ ಪ್ಲಾಜಾ
ಸಿಂಗಲ್ ಜರ್ನಿ : 85 ರೂಪಾಯಿ(ಮೊದಲಿನ ದರ 70 ರೂಪಾಯಿ)
ರಿಟರ್ನ್ ಜರ್ನಿ: 125 ರೂಪಾಯಿ( ಮೊದಲಿನ ದರ 105 ರೂಪಾಯಿ)
ತಿಂಗಳ ಪಾಸ್: 3490 ರೂಪಾಯಿ( ದರ ಪರಿಷ್ಕರಣೆ ಮಾಡಿಲ್ಲ) 

Breaking ಹಾಲಿನ ಬೆನ್ನಲ್ಲೇ ರಾಜ್ಯದ ಜನತಗೆ ಮತ್ತೊಂದು ಬೆಲೆ ಏರಿಕೆ ಶಾಕ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೇಂದ್ರದ ಒಪ್ಪಿಗೆ ಸಿಕ್ರೆ ಕೃಷ್ಣ ಮೇಲ್ದಂಡೆ 3ನೇ ಹಂತದ ಪೂರ್ಣಕ್ಕೆ ಬದ್ಧ: ಡಿ.ಕೆ.ಶಿವಕುಮಾರ್‌
ಗ್ರೇಟರ್‌ ಬೆಂಗಳೂರು.. ವೈಜ್ಞಾನಿಕವಾಗಿ ಕಸ ಸಂಸ್ಕರಣೆ, ಆತಂಕ ಬೇಡ: ಡಿ.ಕೆ.ಶಿವಕುಮಾರ್‌