ಗುರುಮಠಕಲ್ ಪೊಲೀಸರ ಭ್ರಷ್ಟಾಚಾರಕ್ಕೆ ಬೇಸತ್ತು ಶಾಸಕರೇ ರಾಜೀನಾಮೆ ಎಚ್ಚರಿಕೆ!

By Ravi JanekalFirst Published Jul 4, 2024, 6:58 PM IST
Highlights

ಗುರುಮಠಕಲ್ ಕ್ಷೇತ್ರದಲ್ಲಿ ಪೊಲೀಸರ ಭ್ರಷ್ಟಚಾರ ಹೆಚ್ಚಾಗಿದೆ. ಬಡವರು ಠಾಣೆಗೆ ಹೋದ್ರೆ ನ್ಯಾಯ ಸಿಗ್ತಿಲ್ಲ. ಅದೇ ಪ್ರಭಾವಿಗಳ ಒತ್ತಡಕ್ಕೆ ಮಣಿದು ಕೇಸ್ ಹಾಕ್ತಾರೆ. ಹೀಗಾಗಿ ಪೊಲೀಸ್ ಇಲಾಖೆಯ ಭ್ರಷ್ಟಾಚಾರಕ್ಕೆ ಬೇಸತ್ತು ರಾಜೀನಾಮೆ ಕೊಡಲು ನಾನು ಸಿದ್ಧನಿದ್ದೇನೆ ಎಂದು ಪೊಲೀಸರ ನಡೆಗೆ ಶಾಸಕ ಶರಣಗೌಡ ಕಂದಕೂರು ಆಕ್ರೋಶ ವ್ಯಕ್ತಪಡಿಸಿದರು. 

ಯಾದಗಿರಿ (ಜು.4): ಗುರುಮಠಕಲ್ ಕ್ಷೇತ್ರದಲ್ಲಿ ಪೊಲೀಸರ ಭ್ರಷ್ಟಚಾರ ಹೆಚ್ಚಾಗಿದೆ. ಬಡವರು ಠಾಣೆಗೆ ಹೋದ್ರೆ ನ್ಯಾಯ ಸಿಗ್ತಿಲ್ಲ. ಅದೇ ಪ್ರಭಾವಿಗಳ ಒತ್ತಡಕ್ಕೆ ಮಣಿದು ಕೇಸ್ ಹಾಕ್ತಾರೆ. ಹೀಗಾಗಿ ಪೊಲೀಸ್ ಇಲಾಖೆಯ ಭ್ರಷ್ಟಾಚಾರಕ್ಕೆ ಬೇಸತ್ತು ರಾಜೀನಾಮೆ ಕೊಡಲು ನಾನು ಸಿದ್ಧನಿದ್ದೇನೆ ಎಂದು ಪೊಲೀಸರ ನಡೆಗೆ ಶಾಸಕ ಶರಣಗೌಡ ಕಂದಕೂರು ಆಕ್ರೋಶ ವ್ಯಕ್ತಪಡಿಸಿದರು. 

ಯಾದಗಿರಿ ಜಿಲ್ಲೆಯ ಗುರಮಠಕಲ್ ನಲ್ಲಿ ಇಂದು ನಡೆದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ, ಪೊಲೀಸರು ಬಡವರಿಗೆ ನ್ಯಾಯ ಒದಗಿಸಬೇಕು, ಬಡವರಿಗೆ ಅನ್ಯಾಯವಾದರೆ ಕ್ರಮ ಜರುಗಿಸಬಾರದಾ? ಪೊಲೀಸ್ ಇಲಾಖೆ ಇರೋದೇ ದುಡ್ಡಿದ್ದವರ, ಶ್ರೀಮಂತರ, ಪ್ರಭಾವಿಗಳ ರಕ್ಷಣೆಗಾ? ಎಂದು ಜಿಲ್ಲಾಧಿಕಾರಿ ಸುಶೀಲಾ.ಬಿ ಎದುರಲ್ಲೇ ಎಸ್‌ಪಿ ಸಂಗೀತಾ, ಡಿವೈಎಸ್‌ಪಿಗೆ ತರಾಟೆಗೆ ತೆಗೆದುಕೊಂಡರು.

ರೇಣುಕಾಸ್ವಾಮಿ ಕೊಲೆ ಪ್ರಕರಣ; ನಟ ದರ್ಶನ್‌ ಅಂಡ್ ಗ್ಯಾಂಗ್‌ ಮತ್ತೆ 14 ದಿನ ಸೆಂಟಲ್ ಜೈಲೇ ಗತಿ!

ಪೊಲೀಸರು ಇದೇ ರೀತಿ ಅನ್ಯಾಯ, ಭ್ರಷ್ಟಾಚಾರ ಮುಂದುವರಿಸಿದರೆ ನಾನು ಸೀದಾ ಯಾನಾಗುಂದಿ ಮಾಣಿಕಮ್ಮಳ ಹತ್ತಿರ ಹೋಗಿ ರಾಜೀನಾಮೆ ಕೊಡುತ್ತೇನೆ. ಪೊಲೀಸರು ಬಡವರ ಪರ, ಅನ್ಯಾಯ, ದೌರ್ಜನ್ಯಕ್ಕೊಳಗಾದವರ ಪರ ಕೆಲಸ ಮಾಡಬೇಕು. ಭ್ರಷ್ಟಾಚಾರಕ್ಕೆ ಕುಮ್ಮಕ್ಕು ಕೊಡಬಾರದು ಜನರಿಗಾಗಿ ಒಳ್ಳೆಯ ಕೆಲಸ ಮಾಡಿ ಎಂದರು.

click me!