ಜಿಪಂ ಸಭೆಯಲ್ಲಿ ಅಧಿಕಾರಿಯ ಲಂಚದ ಆಡಿಯೋ ರಿಲೀಸ್!

By Web Desk  |  First Published Jan 31, 2019, 7:30 PM IST

ಬಾಗಲಕೋಟೆ ಜಿಪಂ ಸಾಮಾನ್ಯ ಸಭೆಯಲ್ಲಿ ಲಂಚದ ಆಡಿಯೋ ರಿಲೀಸ್| ಆಯುಷ್ ಇಲಾಖೆಯಲ್ಲಿ ನಡೆದ‌ ಲಂಚಾವತಾರ ಬಯಲು ಮಾಡಿದ ಜಿಪಂ ಸದಸ್ಯ ಪುಂಡಲೀಕ ಪಾಲಬಾವಿ| ಡಿ ದರ್ಜೆ ನೌಕರರ ಸಂಬಳ ನೀಡಲು ಲಂಚ ಕೇಳಿದ್ದ ಅಧಿಕಾರಿ| ಜಿಲ್ಲಾ ಅಯುಷ್ ಅಧಿಕಾರಿ ಶಿವಾನಂದ ವಿರುದ್ದ ಆರೋಪ| ಹೊರಗುತ್ತಿಗೆ ಡಿ ದರ್ಜೆ ನೌಕರರಿಂದ ಲಂಚ ಕೇಳಿದ್ದ ಅಧಿಕಾರಿ| ಅಧಿಕಾರಿ ಶಿವಾನಂದ ವಿರುದ್ದ ಸೂಕ್ತ ಕ್ರಮಕ್ಕೆ ಪಟ್ಟು ಹಿಡಿದ ಜಿಪಂ ಸದಸ್ಯರು


ಮಲ್ಲಿಕಾರ್ಜುನ ಹೊಸಮನಿ

ಬಾಗಲಕೋಟೆ(ಜ.31): ಇಲ್ಲಿನ  ಜಿಪಂ ಸಾಮಾನ್ಯ ಸಭೆಯಲ್ಲಿ ಲಂಚದ ಆಡಿಯೋ ರಿಲೀಸ್ ಆಗಿದ್ದು, ಜಿಪಂ ಸದಸ್ಯ ಪುಂಡಲೀಕ ಪಾಲಬಾವಿ, ಆಯುಷ್ ಇಲಾಖೆಯಲ್ಲಿ ನಡೆದ‌ ಲಂಚಾವತಾರ ಬಯಲು ಮಾಡಿದ್ದಾರೆ.

Tap to resize

Latest Videos

ಡಿ ದಜೆ೯ ನೌಕರರ ಸಂಬಳ ನೀಡಲು  ಶಿವಾನಂದ ಎಂಬ ಜಿಲ್ಲಾ ಅಯುಷ್ ಅಧಿಕಾರಿ ಲಂಚ ಕೇಳಿದ ಆಡಿಯೋ ರಿಲೀಸ್ ಮಾಡಲಾಯಿತು.

ಕೆಳಗಿನ ಹಂತದ ಸಿಬ್ಬಂದಿ ಕಳಿಸಿ ಸಾಮಾನ್ಯ ಸಭೆಗೆ ಗೈರು ಉಳಿದುಕೊಂಡಿದ್ದ ಅಧಿಕಾರಿ ಶಿವಾನಂದ ವಿರುದ್ದ ಸೂಕ್ತ ಕ್ರಮಕ್ಕೆ ಜಿಪಂ ಸದಸ್ಯರು ಪಟ್ಟು ಹಿಡಿದರು.

"

ಈ ವೇಳೆ ಸಭೆಗೆ ಅಧಿಕಾರಿ ಕರೆಯಿಸುವಂತೆ ಜಿಪಂ ಅದ್ಯಕ್ಷೆ ವೀಣಾ ಕಾಶಪ್ಪನವರ್ ಮತ್ತು ಮತ್ತು ಸಿಇಓ ಗಂಗೂಬಾಯಿ ಮಾನಕರ್ ಸೂಚನೆ ನೀಡಿದ್ದಾರೆ.
 

click me!