ಕೊರೋನಾ ಕಾಟ: ಡೆಡ್ಲಿ ವೈರಸ್‌ ಬಗ್ಗೆ ಆಘಾತಕಾರಿ ಸುದ್ದಿ..!

By Kannadaprabha News  |  First Published Apr 13, 2021, 8:01 AM IST

ಒಬ್ಬರಿಂದ ಇಡೀ ಕುಟುಂಬಕ್ಕೇ ಸೋಂಕು, ಕೇಸ್‌ ಹೆಚ್ಚಳ| 15ರಿಂದ 45 ವರ್ಷದವರ ಹೊರಗಿನ ಸುತ್ತಾಟ ಹೆಚ್ಚು| ಈ ವಯಸ್ಸಿನವರಲ್ಲೇ ಶೇ.47 ರಷ್ಟು ಸೋಂಕು| ಇಂಥವರಿಂದ ಮನೆಯ ಇತರರಿಗೂ ವೈರಸ್‌| ಕೊರೋನಾ ಬಗ್ಗೆ ಎಚ್ಚರಿಕೆ ವಹಿಸಿ| ತಜ್ಞರ ಕಳಕಳಿಯ ಎಚ್ಚರಿಕೆ| 


ಬೆಂಗಳೂರು(ಏ.13): ಹೊರಗಡೆ ಹೆಚ್ಚಾಗಿ ಓಡಾಡುವ 15 ರಿಂದ 45 ವರ್ಷ ವಯಸ್ಸಿನವರಲ್ಲಿ ಕೊರೋನಾ ಸೋಂಕು ತೀವ್ರವಾಗಿ ಹೆಚ್ಚಾಗುತ್ತಿದ್ದು, ಸೂಕ್ತ ಮುನ್ನೆಚ್ಚರಿಕೆ ಕೊರತೆ ಹಾಗೂ ನಿರ್ಲಕ್ಷ್ಯದ ಫಲವಾಗಿ ಇಡೀ ಕುಟುಂಬ ಸದಸ್ಯರಿಗೆ ಸೋಂಕು ಹರಡುತ್ತಿದೆ.

ಒಬ್ಬ ಸೋಂಕಿತರಿಂದ ಇಡೀ ಕುಟುಂಬದ ಸದಸ್ಯರಿಗೆಲ್ಲರಿಗೂ ಸೋಂಕು ಹರಡುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಒಂದೇ ಸಲ ಕುಟುಂಬದ ಸದಸ್ಯರೆಲ್ಲರಿಗೂ ಸೋಂಕು ಹರಡಿದರೆ ಚಿಕಿತ್ಸೆ ಕೊಡಿಸಲೂ ಸಹ ಸಾಧ್ಯವಾಗದಂತಹ ಪರಿಸ್ಥಿತಿ ಎದುರಾಗಬಹುದು. ಈ ಬಗ್ಗೆ ಎಚ್ಚರ ವಹಿಸದಿದ್ದರೆ ಮಾನಸಿಕ, ಇಡೀ ಕುಟುಂಬಕ್ಕೆ ಆರ್ಥಿಕವಾಗಿಯೇ ಅಲ್ಲದೇ ಭೌತಿಕ ನಷ್ಟವೂ ಎದುರಾಗಬಹುದು. ಹೀಗಾಗಿ ಕೊರೋನಾ ಎರಡನೇ ಅಲೆಯ ತೀವ್ರತೆ ಕಡಿಮೆಯಾಗುವವರೆಗೂ ಸಾರ್ವಜನಿಕರು ತೀವ್ರ ಮುನ್ನೆಚ್ಚರಿಕೆ ವಹಿಸಬೇಕು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

Latest Videos

undefined

ಶಾಕಿಂಗ್: ಲಾಕ್ ಡೌನ್ ಸುಳಿವು ನೀಡಿದ ಸಚಿವ ಸುಧಾಕರ್!

15-45 ವರ್ಷದವರಲ್ಲೇ ಶೇ.47 ರಷ್ಟು ಸೋಂಕು:

ಭಾನುವಾರವಷ್ಟೇ ರಾಜ್ಯದಲ್ಲಿ ದಿನದ ಸೋಂಕು 10 ಸಾವಿರ ಗಡಿ ದಾಟಿದೆ. ಮಾ.5 ರಿಂದ ಏ.5 ರವರೆಗೆ ವರದಿಯಾಗಿರುವ ಒಟ್ಟು ಸೋಂಕಿನಲ್ಲಿ ಶೇ.47 ರಷ್ಟು ಸೋಂಕು 15 ರಿಂದ 45 ವರ್ಷ ವಯಸ್ಸಿನರಲ್ಲೇ ಹರಡುತ್ತಿದೆ. ಮಾ.5 ರಿಂದ ಏ.5 ರವರೆಗೆ ಒಟ್ಟು 67,298 ಪ್ರಕರಣ ವರದಿಯಾಗಿದ್ದರೆ 15 ರಿಂದ 45 ವರ್ಷದೊಳಗಿನ ವಯಸ್ಕರಲ್ಲೇ ಹೆಚ್ಚು ಸೋಂಕು ವರದಿಯಾಗಿದೆ.

15 ರಿಂದ 29 ವರ್ಷದ ನಡುವಿನ 19,378 ಮಂದಿಗೆ ಸೋಂಕು ಉಂಟಾಗಿದ್ದರೆ 30 ರಿಂದ 44 ವರ್ಷದ 18,853 ಮಂದಿಗೆ ಸೋಂಕು ಉಂಟಾಗಿದೆ. 14 ವರ್ಷದೊಳಗಿನ 4,172 ಮಂದಿ ಕಂದಮ್ಮಗಳಿಗೆ ಸೋಂಕು ಹರಡಿದೆ. ಇನ್ನು 45 ರಿಂದ 59 ವರ್ಷದೊಳಗಿನ 14,978 ಮಂದಿಗೆ ಸೋಂಕು ಉಂಟಾಗಿದೆ. ಇವರ ನಿರ್ಲಕ್ಷ್ಯದಿಂದಾಗಿ ಹೆಚ್ಚಾಗಿ ಹೊರಗಡೆ ಹೋಗದ 60 ವರ್ಷ ಮೇಲ್ಪಟ್ಟಹಿರಿಯ ನಾಗರೀಕರಿಗೂ 9,917 ಮಂದಿಗೆ ಸೋಂಕು ತಗುಲಿದೆ.

ಒಂದೇ ಆಸ್ಪತ್ರೆಯ 37 ವೈದ್ಯರಿಗೆ ಕೊರೋನಾ ಪಾಸಿಟಿವ್ ದೃಢ..!

ಈ ಅಂಕಿ-ಅಂಶಗಳಿಂದಾಗಿ ಉದ್ಯೋಗ ಮತ್ತಿತರ ಕಾರಣಗಳಿಗೆ ಹೊರಗಡೆ ಓಡಾಡುವವರಲ್ಲೇ ಸೋಂಕು ಹೆಚ್ಚಾಗಿ ವರದಿಯಾಗುತ್ತಿದೆ. ಪ್ರಸ್ತುತ ವೈರಲ್‌ ಲೋಡ್‌ ಹೆಚ್ಚಾಗಿರುವುದರಿಂದ ಒಬ್ಬರು ಸೋಂಕಿತರಾದರೆ ಇಡೀ ಕುಟುಂಬ ಸೋಂಕಿಗೆ ತುತ್ತಾಗುತ್ತಿದೆ. ಮನೆಗೆ ವಾಪಸಾದ ಬಳಿಕ ಸದಸ್ಯರು ಮುಕ್ತವಾಗಿ ಬೆರೆಯುತ್ತಿರುವುದರಿಂದ ಎಲ್ಲರಿಗೂ ಅಪಾಯ ಉಂಟಾಗುತ್ತಿದೆ.

ಸದಸ್ಯರು ಹೇಗೆ ಎಚ್ಚರ ವಹಿಸಬೇಕು?

- ಹೀಗಾಗಿ ಹೊರಗೆ ಹೋಗಿ ಬರುವವರು ಆದಷ್ಟೂಕೈ ಕಾಲು ಸ್ವಚ್ಛವಾಗಿ ತೊಳೆದುಕೊಂಡ ಬಳಿಕವಷ್ಟೇ ಮನೆಗೆ ಪ್ರವೇಶಿಸಬೇಕು.
- ಕುಟುಂಬ ಸದಸ್ಯರೊಂದಿಗೆ ಒಡನಾಡುವ ವೇಳೆಯೂ ದೈಹಿಕ ಅಂತರ ಕಾಪಾಡಿಕೊಳ್ಳಬೇಕು.
- ಸಣ್ಣ ಪ್ರಮಾಣದ ಸೋಂಕು ಲಕ್ಷಣಗಳು ಕಾಣಿಸಿಕೊಂಡರೂ ಕೂಡಲೇ ಪರೀಕ್ಷೆಗೆ ಒಳಪಡಬೇಕು.
- ಸೋಂಕು ದೃಢಪಟ್ಟರೆ ಮನೆಯಲ್ಲೇ ಪ್ರತ್ಯೇಕವಾಗಿದ್ದು ಚಿಕಿತ್ಸೆ ಪಡೆಯಬೇಕು.
- ಸೋಂಕು ಲಕ್ಷಣಗಳು ಹೆಚ್ಚಾಗಿದ್ದರೆ ಆಸ್ಪತ್ರೆ ಅಥವಾ ಕೊರೋನಾ ಕೇರ್‌ ಸೆಂಟರ್‌ಗೆ ದಾಖಲಾಗಬೇಕು.
- ವೃದ್ಧರು ಹಾಗೂ ಮಕ್ಕಳಿರುವ ಮನೆಯಲ್ಲಿ ವಿಶೇಷ ಕಾಳಜಿ ವಹಿಸಬೇಕು.
 

click me!