ಸಚಿವ ಶ್ರೀರಾಮುಲು ತಾಯಿ, ಸೋದರನಿಗೂ ಕೊರೋನಾ ಪಾಸಿಟಿವ್‌

By Kannadaprabha News  |  First Published Aug 13, 2020, 10:21 AM IST

ಸಚಿವರ ತಾಯಿ ಹೊನ್ನೂರಮ್ಮ (80) ಮತ್ತು ಸಹೋದರ ಶ್ರೀನಿವಾಸಲು (42) ಅವರಿಗೆ ಕೊರೋನಾ ದೃಢ| ತಕ್ಷಣ ಅವರನ್ನು ಬಳ್ಳಾರಿಯಿಂದ ಬೆಂಗಳೂರಿಗೆ ಕರೆತಂದು ಸಚಿವ ಶ್ರೀರಾಮುಲು ದಾಖಲಾಗಿರುವ ಬೌರಿಂಗ್‌ ಆಸ್ಪತ್ರೆಯಲ್ಲಿ ದಾಖಲು| ಇಬ್ಬರ ಆರೋಗ್ಯ ಸ್ಥಿರ|


ಬೆಂಗಳೂರು(ಆ.13):  ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರಿಗೆ ಕೊರೋನಾ ಸೋಂಕು ಪತ್ತೆಯಾದ ಬೆನ್ನಲ್ಲೇ ಅವರ ತಾಯಿ ಮತ್ತು ಸಹೋದರರೊಬ್ಬರಿಗೂ ಸೋಂಕು ದೃಢಪಟ್ಟಿದ್ದು ಅವರನ್ನು ಚಿಕಿತ್ಸೆಗಾಗಿ ಬುಧವಾರ ನಗರದ ಬೌರಿಂಗ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಬಳ್ಳಾರಿಯಲ್ಲಿದ್ದ ಸಚಿವರ ತಾಯಿ ಹೊನ್ನೂರಮ್ಮ (80) ಮತ್ತು ಸಹೋದರ ಶ್ರೀನಿವಾಸಲು (42) ಅವರಿಗೆ ಕೋವಿಡ್‌ ಪರೀಕ್ಷಾ ವರದಿಯಲ್ಲಿ ಬುಧವಾರ ಪಾಸಿಟಿವ್‌ ಬಂದಿದೆ. ತಕ್ಷಣ ಅವರನ್ನು ಬಳ್ಳಾರಿಯಿಂದ ಬೆಂಗಳೂರಿಗೆ ಕರೆತಂದು ಸಚಿವ ಶ್ರೀರಾಮುಲು ಅವರು ದಾಖಲಾಗಿರುವ ಬೌರಿಂಗ್‌ ಆಸ್ಪತ್ರೆಯಲ್ಲೇ ಚಿಕಿತ್ಸೆಗೆ ದಾಖಲಿಸಲಾಗಿದೆ. ಇಬ್ಬರ ಆರೋಗ್ಯ ಸ್ಥಿರವಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಖಚಿತಪಡಿಸಿದ್ದಾರೆ.

Tap to resize

Latest Videos

ಸಿಎಂ ಮಾರ್ಗವನ್ನು ಅನುಸರಿಸಿದ ಸಚಿವ ಶ್ರೀರಾಮುಲು

ಇನ್ನು, ಸಚಿವ ಶ್ರೀರಾಮುಲು ಅವರ ಆರೋಗ್ಯ ಸ್ಥಿರವಾಗಿದೆ. ಅವರಿಗೆ ಯಾವುದೇ ಲಕ್ಷಣಗಳಿಲ್ಲ ಆರೋಗ್ಯವಾಗಿದ್ದಾರೆ. ಆದರೂ ಮುಂಜಾಗ್ರತಾ ಕ್ರಮವಾಗಿ ವಿಶೇಷ ವೈದ್ಯರ ತಂಡ ಅವರ ಆರೋಗ್ಯದ ಮೇಲೆ ನಿಗಾ ವಹಿಸಿದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
 

click me!