ರಾಜ್ಯದಲ್ಲಿ 8000 ಗಡಿ ದಾಟಿದ ಕೊರೋನಾ; ಮತ್ತೆ 10 ಬಲಿ

By Kannadaprabha NewsFirst Published Jun 20, 2020, 7:19 AM IST
Highlights

8000 ಗಡಿ ದಾಟಿದ ಕೊರೋನಾ; ಮತ್ತೆ 10 ಬಲಿ| ಒಂದೇ ದಿನ 337 ಮಂದಿಗೆ ವೈರಸ್‌| ರಾಜಧಾನಿಯಲ್ಲಿ ದಾಖಲೆಯ 138 ಮಂದಿಗೆ ಸೋಂಕು| ಹೊರಗಿನ ಸೋಂಕು 104, ಸ್ಥಳೀಯ ಸೋಂಕು 233

ಬೆಂಗಳೂರು(ಜೂ.20): ರಾಜ್ಯದಲ್ಲಿ ಶುಕ್ರವಾರ ಮತ್ತೆ 337 ಮಂದಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 8 ಸಾವಿರ ಗಡಿ ದಾಟಿ 8281ಕ್ಕೆ ಏರಿಕೆಯಾಗಿದೆ. ಜತೆಗೆ ಸಾವಿನ ಸರಣಿ ಮುಂದುವರೆದಿದ್ದು ಶುಕ್ರವಾರವೂ 10 ಮಂದಿ ಮೃತಪಟ್ಟಿದ್ದಾರೆ.

ಈ ಮೂಲಕ ಒಟ್ಟು ಸೋಂಕಿತರ ಸಾವಿನ ಸಂಖ್ಯೆ 124ಕ್ಕೆ ಏರಿಕೆಯಾಗಿದೆ. ಅಲ್ಲದೆ ಕಳೆದ 19 ದಿನದಲ್ಲೇ 72 ಮಂದಿ ಮೃತಪಟ್ಟಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಆತ್ಮಹತ್ಯೆ ಸೇರಿ 4 ಅನ್ಯ ಕಾರಣದ ಸಾವು ಸೇರಿ ಒಟ್ಟು ಸೋಂಕಿತರ ಸಾವಿನ ಸಂಖ್ಯೆ 128ರಷ್ಟಾಗಿದೆ.

ಗಡಿನಾಡ ಶಾಲಾ ಮಕ್ಕಳಿಗೆ ಆನ್‌ಲೈನ್‌ ಕ್ಲಾಸ್: ಶಿಕ್ಷಣದಲ್ಲೂ ಕೇರಳ ಮಾಡೆಲ್‌ ಯತ್ನ!

ಶುಕ್ರವಾರ ಬೆಂಗಳೂರು ನಗರದಲ್ಲಿ ಒಂದು ದಿನದ ದಾಖಲೆಯ 138 ಮಂದಿಗೆ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕು ಸಾವಿರದ ಗಡಿಯತ್ತ (982) ಸಾಗಿದೆ. ಇನ್ನು 7 ಮಂದಿ ಸಾವನ್ನಪ್ಪುವ ಮೂಲಕ ರಾಜಧಾನಿ ಸಾವಿನ ಸಂಖ್ಯೆ 58ಕ್ಕೆ ಏರಿಕೆಯಾಗಿದೆ. ಉಳಿದಂತೆ ಬೀದರ್‌ನಲ್ಲಿ ಇಬ್ಬರು, ವಿಜಯಪುರದಲ್ಲಿ ಒಬ್ಬರು ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.

ಶುಕ್ರವಾರ ಕಲಬುರಗಿಯಲ್ಲಿ 52, ಬಳ್ಳಾರಿ 37, ಹಾಸನ 18, ದಕ್ಷಿಣ ಕನ್ನಡ 13, ದಾವಣಗೆರೆ 12, ಉಡುಪಿ 11, ಬೀದರ್‌ 10, ಮೈಸೂರು, ಕೊಪ್ಪಳ ತಲಾ 6 ಯಾದಗಿರಿ, ಕೋಲಾರ, ಬೆಂಗಳೂರು ಗ್ರಾಮಾಂತರ ತಲಾ 4, ಮಂಡ್ಯ, ಧಾರವಾಡ, ಚಿಕ್ಕಬಳ್ಳಾಪುರ, ಬಾಗಲಕೋಟೆ, ರಾಮನಗರದಲ್ಲಿ ತಲಾ 3, ತುಮಕೂರು, ಚಿಕ್ಕಮಗಳೂರು ತಲಾ 2 ಬೆಳಗಾವಿ, ಉತ್ತರ ಕನ್ನಡ, ಶಿವಮೊಗ್ಗದಲ್ಲಿ ತಲಾ ಒಂದು ಪ್ರಕರಣ ವರದಿಯಾಗಿದೆ.

ಕೂಲರ್‌ಗಾಗಿ ವೆಂಟಿಲೇಟರ್ ಆಫ್ ಮಾಡಿದ್ರು, ಕುಟುಂಬದ ತಪ್ಪಿಗೆ ಕೊರೋನಾ ಸೋಂಕಿತ ಸಾವು!

ಹೆಚ್ಚಾಯ್ತು ಸ್ಥಳೀಯ ಸೋಂಕು:

337 ಪ್ರಕರಣಗಳಲ್ಲಿ ಅಂತರ್‌ರಾಜ್ಯ ಪ್ರಯಾಣ ಹಿನ್ನೆಲೆ ಹೊಂದಿದ್ದ 93, ವಿದೇಶ ಪ್ರಯಾಣ ಹಿನ್ನೆಲೆ ಹೊಂದಿರುವ 11 ಮಂದಿಯಲ್ಲಿ ಸೋಂಕು ಹರಡಿದೆ. ಉಳಿದಂತೆ 233 ಮಂದಿಗೆ ಸ್ಥಳೀಯವಾಗಿಯೇ ಸೋಂಕು ಹರಡಿದೆ.

ಅಂತರ್‌ರಾಜ್ಯ ಪ್ರಯಾಣಿಕರ ಪೈಕಿ ಮಹಾರಾಷ್ಟ್ರದಿಂದ 73, ಗುಜರಾತ್‌, ತೆಲಂಗಾಣ ತಲಾ 3, ತಮಿಳುನಾಡು 6, ಆಂಧ್ರಪ್ರದೇಶ 5, ಕೇರಳ, ಪಶ್ಚಿಮ ಬಂಗಾಳ, ದೆಹಲಿಯಲ್ಲಿ ತಲಾ 1 ಪ್ರಕರಣ ವರದಿಯಾಗಿದೆ. ಉಳಿದಂತೆ 4 ಮಂದಿ ಸೌದಿ, 7 ಮಂದಿ ಶಾರ್ಜಾದಿಂಂದ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದ್ದಾರೆ.

5 ಸಾವಿರ ಗಡಿದ ದಾಟಿದ ಚೇತರಿಕೆ:

ಉಳಿದಂತೆಒಟ್ಟು 8281 ಸೋಂಕಿತರಲ್ಲಿ ಶುಕ್ರವಾರ 230 ಮಂದಿ ಗುಣಮುಖರಾಗಿದ್ದು ಒಟ್ಟು 5,210 ಮಂದಿ ಚೇತರಿಸಿಕೊಂಡು ಮನೆಗೆ ತೆರಳಿದ್ದಾರೆ. ಉಳಿದಂತೆ 2,943 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 79 ಮಂದಿ ಐಸಿಯುನಲ್ಲಿದ್ದಾರೆ.

ಕೊರೋನಾ ಸೋಂಕಿತ ದೆಹಲಿ ಆರೋಗ್ಯ ಸಚಿವರ ಸ್ಥಿತಿ ಗಂಭೀರ; ಪ್ಲಾಸ್ಮಾ ಥೆರಪಿಗೆ ಮ್ಯಾಕ್ಸ್ ಆಸ್ಪತ್ರೆಗೆ ಶಿಫ್ಟ್!

ಕ್ವಾರಂಟೈನ್‌ ಕೇಂದ್ರದಲ್ಲೇ ಸಾವು!:

ಬೆಂಗಳೂರಿನಲ್ಲಿ 52 ವರ್ಷದ ಹಿರಿಯ ಪತ್ರಕರ್ತ, ಮಹಾರಾಷ್ಟ್ರದಿಂದ ವಾಪಸಾಗಿ ಕ್ವಾರಂಟೈನ್‌ ಕೇಂದ್ರದಲ್ಲಿದ್ದ ವೃದ್ಧ ಸೇರಿ 7 ಮಂದಿ ಮೃತಪಟ್ಟಿದ್ದು, ರಾಜ್ಯದಲ್ಲಿ ಒಟ್ಟಾರೆ 10 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

ಮಹಾರಾಷ್ಟ್ರದಿಂದ ವಾಪಸಾಗಿ ಕ್ವಾರಂಟೈನ್‌ಗೆ ಒಳಗಾಗಿದ್ದ 69 ವರ್ಷದ ವ್ಯಕ್ತಿ ಕ್ವಾರಂಟೈನ್‌ ಕೇಂದ್ರದಲ್ಲೇ ಸಾವನ್ನಪ್ಪಿದ್ದಾರೆ. ಉಳಿದಂತೆ 50 ವರ್ಷದ ಬೆಂಗಳೂರಿನ ವ್ಯಕ್ತಿ ಜೂ.17 ರಂದು ಆಸ್ಪತ್ರೆಗೆ ದಾಖಲಾಗಿ ಅಂದೇ ಮೃತಪಟ್ಟಿದ್ದಾರೆ. 65 ವರ್ಷದ ಮಹಿಳೆ ಜ್ವರ ಹಿನ್ನೆಲೆಯಲ್ಲಿ ಜೂ.13 ರಂದು ಆಸ್ಪತ್ರೆಗೆ ದಾಖಲಾಗಿ ಜೂ.18 ರಂದು ಮೃತಪಟ್ಟಿದ್ದಾರೆ. ಇದಲ್ಲದೆ 78 ವರ್ಷದ ವೃದ್ಧ, 72 ವರ್ಷದ ವೃದ್ಧ, 58 ವರ್ಷದ ವೃದ್ಧ ಉದ್ಯಾನನಗರಿಯಲ್ಲಿ ಸೋಂಕಿಗೆ ಬಲಿಯಾಗಿದ್ದಾರೆ.

ಇನ್ನು ಬೀದರ್‌ನಲ್ಲಿ ತೀವ್ರ ಉಸಿರಾಟ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ 45 ವರ್ಷದ ವ್ಯಕ್ತಿಯು ಜೂ.18 ರಂದು ಮೃತಪಟ್ಟಿದ್ದಾರೆ. ಬೀದರ್‌ನಲ್ಲಿ ಮತ್ತೊಬ್ಬರು 70 ವರ್ಷದ ವೃದ್ಧ ಜೂ.11 ರಂದು ಆಸ್ಪತ್ರೆಗೆ ಕರೆ ತರುವ ಮೊದಲೇ ಮೃತಪಟ್ಟಿದ್ದು, ಕೊರೋನಾ ಸೋಂಕು ದೃಢಪಟ್ಟಿದೆ. ವಿಜಯಪುರದಲ್ಲಿ ತೀವ್ರ ಉಸಿರಾಟ ಹಿನ್ನೆಲೆ ಹೊಂದಿದ್ದ 66 ವರ್ಷದ ಮಹಿಳೆ ಜೂ.15 ರಂದು ಆಸ್ಪತ್ರೆಗೆ ದಾಖಲಾಗಿ ಜೂ.17 ರಂದು ಮೃತಪಟ್ಟಿದ್ದಾರೆ.

click me!