ಕೊರೋನಾಗೆ ಇಂದಿಗೆ 1 ತಿಂಗಳು: ದೇಶದಲ್ಲೇ ನಂ.3 ಆಗಿದ್ದ ರಾಜ್ಯ ಈಗ ನಂ.11!

By Kannadaprabha NewsFirst Published Apr 9, 2020, 7:30 AM IST
Highlights

ರಾಜ್ಯದಲ್ಲಿ ಕೊರೋನಾಗೆ ಇಂದಿಗೆ 1 ತಿಂಗಳು| ಮೊದಲ 15 ದಿನ ಕೇವಲ 41 ಕೇಸು ದಾಖಲು| ನಂತರದ 15 ದಿನದಲ್ಲಿ 140 ಪ್ರಕರಣ: ಆತಂಕ| ಒಂದು ಹಂತದಲ್ಲಿ ದೇಶದಲ್ಲೇ ನಂ.3 ಆಗಿದ್ದ ರಾಜ್ಯ ಈಗ ನಂ.11

ಬೆಂಗಳೂರು(ಏ.09): ರಾಜ್ಯದಲ್ಲಿ ಕೊರೋನಾ ಸೋಂಕು ವರದಿಯಾಗಿ ಗುರುವಾರಕ್ಕೆ (ಏ.9ಕ್ಕೆ) 1 ತಿಂಗಳು ಪೂರ್ಣಗೊಳ್ಳಲಿದೆ. ಇತರೆ ರಾಜ್ಯಗಳಿಗೆ ಹೋಲಿಸಿಕೊಂಡರೆ ಕಡಿಮೆ ಪ್ರಕರಣ ವರದಿಯಾಗುತ್ತಿದೆ. ಆದರೆ, ಆರಂಭದ ದಿನಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಈ ಮಾರಕದ ರೋಗ ಹಬ್ಬುವಿಕೆ ವೇಗ ಹಲವು ಪಟ್ಟು ಹೆಚ್ಚಾಗಿರುವುದು ಆತಂಕ ಮೂಡಿಸಿದೆ.

ಕೊರೋನಾ ರಾಜ್ಯದಲ್ಲಿ ಕಾಣಿಸಿಕೊಂಡ ಮೊದಲ ಹದಿನೈದು ದಿನ ಕೇವಲ 41ರಷ್ಟಿದ್ದ ಪ್ರಕರಣಗಳು ಬಳಿಕದ 15 ದಿನಗಳಲ್ಲಿ ಬರೋಬ್ಬರಿ 140ರಷ್ಟಾಗಿದ್ದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.

ಕರೋನಾ ಸೋಂಕಿನ ಪ್ರಕರಣಗಳು ವಾರದಿಂದ ವಾರಕ್ಕೆ ಗಂಭೀರ ಪ್ರಮಾಣದಲ್ಲಿ ಹೆಚ್ಚಾಗುತ್ತಿವೆ. ಅಲ್ಲದೆ, ಈವರೆಗೆ ಒಟ್ಟು 5 ಮಂದಿ ಮೃತಪಟ್ಟಿದ್ದು, 25 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ರಾಜ್ಯಾ​ದಂತ ಲಾಕ್‌ಡೌನ್‌ ಮುಂದುವರಿಸಿ: ದೇವಿ​ಶೆಟ್ಟಿ ನೇತೃ​ತ್ವದ ಸಮಿತಿ ಶಿಫಾ​ರಸು!

ನ್ಯೂಯಾರ್ಕ್ನಿಂದ ದುಬೈ ಮೂಲಕ ಫೆ.28 ರಂದು ಬೆಂಗಳೂರಿಗೆ ವಾಪಸಾಗಿದ್ದ ವ್ಯಕ್ತಿಗೆ ಮಾ.9ರಂದು ಸೋಂಕು ಖಚಿತಪಟ್ಟಿತ್ತು. ಇದೇ ರಾಜ್ಯದಲ್ಲಿ ವರದಿಯಾದ ಮೊದಲ ಪ್ರಕರಣ. ಬಳಿಕ ಮಾ.10ರಂದು ಮತ್ತೊಬ್ಬ ಸಾಫ್ಟ್‌ವೇರ್‌ ಇಂಜಿನಿಯರ್‌ಗೆ ಸೋಂಕು ತಗುಲಿ ಬಳಿಕ ಪತ್ನಿ ಹಾಗೂ ಮಗಳಿಗೂ ಸೋಂಕು ಹರಡಿತ್ತು. ಹೀಗೆ ಮೊದಲ ವಾರ ಒಟ್ಟು ಆರು ಪ್ರಕರಣ ವರದಿಯಾಗಿದ್ದು, ಈ ಪೈಕಿ ಕಲಬುರಗಿಯಲ್ಲಿ ದೇಶದಲ್ಲೇ ಮೊದಲ ಕೊರೋನಾ ಸಾವು ವರದಿಯಾಗಿತ್ತು. ಈ ಮೂಲಕ ಕೊರೋನಾ ಸೋಂಕು ಹರಡುವಿಕೆಯಲ್ಲಿ ರಾಜ್ಯವು ದೇಶದಲ್ಲೇ 3ನೇ ಸ್ಥಾನಕ್ಕೆ ಏರಿತ್ತು. ಬಳಿಕ ಸೋಂಕು ಹತೋಟಿಗೆ ತರುವ ಮೂಲಕ ಪ್ರಸ್ತುತ 11ನೇ ಸ್ಥಾನದಲ್ಲಿದೆ.

"

ವಿದೇಶ ಸಂಪರ್ಕದಿಂದ 96 ಮಂದಿಗೆ ಸೋಂಕು:

ಈವರೆಗೆ 67 ಮಂದಿ ವಿದೇಶದಿಂದ ಆಗಮಿಸಿರುವ ಪ್ರಯಾಣಿಕರಿಗೆ ಸೋಂಕು ದೃಢಪಟ್ಟಿದೆ. ಇವರಿಂದ 25 ಮಂದಿ ಪ್ರಾಥಮಿಕ ಸಂಪರ್ಕ ಹಾಗೂ 4 ಮಂದಿ ದ್ವಿತೀಯ ಸಂಪರ್ಕ ಸೇರಿ ಒಟ್ಟು 96 ಮಂದಿಗೆ ಸೋಂಕು ದೃಢಪಟ್ಟಿದೆ.

ಇನ್ನು ನಿಜಾಮುದ್ದೀನ್‌ ತಬ್ಲೀಘಿ ಜಮಾತ್‌ ಹಿನ್ನೆಲೆ ಹೊಂದಿರುವ 28 ಮಂದಿಗೆ ಸೋಂಕು ತಗುಲಿದೆ. ಇವರ ಪ್ರಾಥಮಿಕ ಸಂಪರ್ಕ ಒಬ್ಬರು ಹಾಗೂ ದ್ವಿತೀಯ ಹಂತದ ಸಂಪರ್ಕದಿಂದ ಇಬ್ಬರಿಗೆ ಸೇರಿ ಒಟ್ಟು ಘಟನೆ ಹಿನ್ನೆಲೆಯಲ್ಲೇ 31 ಪ್ರಕರಣ ವರದಿಯಾಗಿವೆ. ಮತ್ತೊಂದು ಕ್ಲಸ್ಟರ್‌ ಆಗಿರುವ ನಂಜನಗೂಡು ಔಷಧ ತಯಾರಿಕೆ ಕಂಪನಿಯಲ್ಲಿ 23 ಪ್ರಕರಣ ವರದಿಯಾಗಿದೆ.

ಇತರೆ ರಾಜ್ಯಗಳಿಂದ ಆಗಮಿಸಿರುವ 8 ಮಂದಿ ಹಾಗೂ ಸಂಪರ್ಕಿತರು ಸೇರಿ 12 ಮಂದಿಗೆ ಸೋಂಕು ತಗುಲಿದ್ದು, ಒಟ್ಟು 18 ಮಂದಿಯ ಸೋಂಕು ಹಿನ್ನೆಲೆ ಈವರೆಗೆ ಪತ್ತೆಯಾಗಿಲ್ಲ.

ಕೊರೋ​ನಾಗೆ ರಾಜ್ಯ​ದಲ್ಲಿ ಮತ್ತೊಂದು ಬಲಿ, 65 ವರ್ಷದ ವೃದ್ಧ ಸಾವು!

ಒಟ್ಟು ಸೋಂಕು: 181

ಸಾವು: 5

ಆಸ್ಪತ್ರೆಯಿಂದ ಬಿಡುಗಡೆ: 28

ಪ್ರತಿ ವಾರದ ಅಂಕಿ-ಅಂಶ

ಮೊದಲ ವಾರ (ಮಾ.9 ರಿಂದ ಮಾ.15)| 6 ಸೋಂಕು ಪ್ರಕರಣ, 1 ಸಾವು

2ನೇ ವಾರ (ಮಾ.15 ರಿಂದ ಮಾ.22)| 19 ಸೋಂಕು ಪ್ರಕರಣ

3ನೇ ವಾರ (ಮಾ.23 ರಿಂದ ಮಾ.29)| 47 ಸೋಂಕು ಪ್ರಕರಣ, 2 ಸಾವು

4ನೇ ವಾರ (ಮಾ.30 ರಿಂದ ಏ.5)| 51 ಪ್ರಕರಣ, 1 ಸಾವು

5ನೇ ವಾರ (ಏ.6 ರಿಂದ 8)| 28 ಪ್ರಕರಣ, 1 ಸಾವು

"

click me!