
ಬೆಂಗಳೂರು (ನ. 05) ಕೊರೋನಾ ಪರಿಸ್ಥಿತಿ ನಿಯಂತ್ರಣದಲ್ಲಿ ಇರುವುದರಿಂದ ಕೊನೆಯದಾಗಿ ಬಾಕಿ ಉಳಿಸಿಕೊಂಡಿದ್ದ ನೈಟ್ ಕರ್ಪ್ಯೂ ವನ್ನು ರಾಜ್ಯ ಸರ್ಕಾರ ಹಿಂದಕ್ಕೆ ಪಡೆದುಕೊಂಡಿದೆ. ಈ ಮೂಲಕ ಈಜುಕೋಳ ಒಂದನ್ನು ಹೊರತುಪಡಿಸಿ ಎಲ್ಲ ಚಟುವಟಿಕೆಗೆ ಅವಕಾಶ ಮಾಡಿಕೊಟ್ಟಂತೆ ಆಗಿದೆ.
"
ರಾತ್ರಿ 10ರಿಂದ ಬೆಳಿಗ್ಗೆ 5 ರವರೆಗೆ ಇದ್ದ ನೈಟ್ ಕರ್ಪ್ಯೂ ಹಿಂದಕ್ಕೆ ಪಡೆದಿರುವುದರಿಂದ ವಾಣಿಜ್ಯ ಚಟುವಟಿಕೆಗಳಿಗೆ ಮತ್ತಷ್ಟು ಅನುಕೂಲವಾಗಲಿದೆ. ಕೊರೋನಾ ಕಾಡುತ್ತಿದ್ದ ಕಾರಣರಾತ್ರಿ ವೇಳೆ ನಿಷೇಧಾಜ್ಞೆ ಮುಂದುವರಿಸಿಕೊಂಡು ಬರಲಾಗಿತ್ತು. ಗಡಿ ಭಾಗದಲ್ಲಿ ತಪಾಸಣೆ ಕಟ್ಟು ನಿಟ್ಟಾಗಿ ಪಾಲಿಸಿಕೊಂಡು ಬರಲಾಗಿತ್ತು.
ಮಕ್ಕಳ ವ್ಯಾಕ್ಸಿನ್ ಗೂ ತ್ವರಿತ ಅನುಮತಿ
ಕುದುರೆ ರೇಸ್ಗೆ ಅನುಮತಿ ; ಕುದುರೆ ರೇಸ್ಗೆ ಅನುಮತಿ ನೀಡಲಾಗಿದ್ದು ಕೆಲ ಷರತ್ತು ವಿಧಿಸಲಾಗಿದೆ. ಕೊರೋನಾ ನಿಯಮಗಳ ಪಾಲನೆ ಮಾಡಬೇಕು. ರೇಸ್ ಕೋರ್ಸ್ಗೆ ಪ್ರವೇಶಿಸುವವರು ಕಡ್ಡಾಯವಾಗಿ ಲಸಿಕೆ ಪಡೆದಿರಬೇಕು. ಸ್ಥಳಾವಕಾಶದ ಸಾಮರ್ಥ್ಯ ಆಧರಿಸಿ ಜನ ಭಾಗವಹಿಸಬೇಕು ಎಂದು ತಿಳಿಸಲಾಗಿದೆ.
ಪ್ರಾಥಮಿಕ ಶಾಲೆಗಳನ್ನು ಹಂತಹಂತವಾಗಿ ಓಪನ್ ಮಾಡಿದ್ದ ಸರ್ಕಾರ ನವೆಂಬರ್ 8 ರಿಂದ ರಾಜ್ಯದಲ್ಲಿ ಎಲ್ ಕೆ ಜಿ ಹಾಗೂ ಯುಕೆಜಿ ಆರಂಭಕ್ಕೂ ಗ್ರೀನ್ ಸಿಗ್ನಲ್ ನೀಡಿದೆ. ಅರ್ಧ ದಿನ ಮಾತ್ರ ತರಗತಿಗಳನ್ನ ಪ್ರಾರಂಭ ಮಾಡಬೇಕು ಶೇ. 2 ಒಳಗೆ ಕೊರೊನಾ ಕೇಸ್ ಇರೋ ತಾಲೂಕುಗಳಲ್ಲಿ ಮಾತ್ರ LKG-UKG ಪ್ರಾರಂಭ ಮಾಡಬೇಕು. ವಿದ್ಯಾರ್ಥಿಗಳು ಪೋಷಕರ ಅನುಮತಿ ಪತ್ರ ಕಡ್ಡಾಯವಾಗಿ ತರಬೇಕು. ನಿತ್ಯ ಶಾಲಾ ಕೊಠಡಿಗಳನ್ನ ಸ್ಯಾನಿಟೈಸ್ ಮಾಡಬೇಕು ಎಲ್ಲಾ ಶಿಕ್ಷಕರು, ಸಿಬ್ಬಂದಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. 50 ವರ್ಷ ಮೇಲ್ಪಟ್ಟವರು ಫೇಸ್ ಶೀಲ್ಡ್ ಧರಿಸಬೇಕು ಎಂದು ತಿಳಿಸಿದೆ.
ಕೊರೋನಾ ನಿಯಂಯತ್ರಣ ; ರಾಜ್ಯದಲ್ಲಿ ಕೊರೋನಾ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಬಹುತೇಕ ತಾಲೂಕುಗಳಲ್ಲಿ ಸೋಂಕಿನ ಪ್ರಮಾಣ ಶೇ. 2ಕ್ಕಿಂತ ಕಡಿಮೆ ಇದೆ. ಭಾಋತದ ಅತಿದೊಡ್ಡ ಲಸಿಕಾ ಅಭಿಯಾನ ಯಶಸ್ವಿಯಾಗಿದ್ದೂ ನೂರು ಕೋಟಿ ಜನರಿಗೆ ನೀಡಿದ್ದ ದಿನ ಪ್ರಧಾನಿ ಮೋದಿ ಎಲ್ಲರನ್ನು ಅಭಿನಂದಿಸಿದ್ದರು.
ಜಿಮ್ ಮತ್ತು ಸಿನಿಮಾ ಮಂದಿರಗಳಿಗೂ ಒಂದು ತಿಂಗಳ ಹಿಂದೆ ಅವಕಾಶ ನೀಡಲಾಗಿತ್ತು. ಹಂತ ಹಂತವಾಗಿ ಎಲ್ಲವನ್ನು ಓಪನ್ ಮಾಡಿಕೊಂಡು ಬರಲಾಗಿದ್ದು ಸುಮಾರು ಎರಡು ವರ್ಷಗಳ ನಂತರ ಕೊರೋನಾ ಮುಕ್ತ ವಾತಾವರಣ ಕಂಡುಬರುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ