ಕೊರೋನಾ ಟಫ್ ರೂಲ್ಸ್ ಅತ್ಯಗತ್ಯ : ರಾಜ್ಯದಲ್ಲಿ ಸಖತ್ ಸ್ಟ್ರಿಕ್ಸ್

By Kannadaprabha NewsFirst Published Apr 3, 2021, 12:15 PM IST
Highlights

ರಾಜ್ಯದಲ್ಲಿ ಕೊರೋನಾ ಮಹಾಮಾರಿ ಮತ್ತೆ ತನ್ನ ಅಟ್ಟಹಾಸ ಮೆರೆಯಲಾರಂಭಿಸಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಕಠಿಣ ಕ್ರಮಗಳನ್ನು ಇಂದಿನಿಂದಲೇ ಜಾರಿ ಮಾಡಲಾಗಿದೆ. ಈ ರೂಲ್ಸ್‌ನಲ್ಲಿ ಯಾವುದೇ ಬದಲಾವಣೆ ಇಲ್ಲವೆಂದು  ಸಚಿವರು ಮಾಹಿತಿ ನೀಡಿದ್ದಾರೆ. 

ಬೆಂಗಳೂರು (ಏ.03):  ರಾಜ್ಯದಲ್ಲಿ ಕೊರೋನಾ ಪ್ರಕರಣ ಹೆಚ್ಚಾದ ಹಿನ್ನೆಲೆ ಆರಂಭವಾದ ಟಫ್ ರೂಲ್ಸ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು  ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ. 

ಸರ್ಕಾರಕ್ಕೆ ಯಾವ ಚಟುವಟಿಕೆಗಳನ್ನೂ ನಿಷೇಧ ಮಾಡಬೇಕು ಎನ್ನುವ ಮನಸಿಲ್ಲ. ಆದರೆ ಅನಿವಾರ್ಯ ಪರಿಸ್ಥಿತಿಯಲ್ಲಿ ನಾವು ಇದ್ದೇವೆ. ಎರಡನೇ ಅಲೆ ಹೊಸ್ತಿಲಲ್ಲಿ ಇದ್ದೇವೆ.  ಕೋವಿಡ್ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳದಿದ್ದರೆ ನಮಗೆ ಬೇರೆ ದಾರಿ ಇಲ್ಲ ಎಂದು ಸಚಿವರು ಹೇಳಿದರು.

ದಯವಿಟ್ಟು 45 ವರ್ಷ ಮೇಲ್ಪಟ್ಟವರು ಲಸಿಕೆ ಪಡೆಯಿರಿ. ಗುಂಪು ಸೇರುವುದು ಕಡಿಮೆ ಮಾಡಿ, ಮಾಸ್ಕ್ ಬಳಸಿ. ಹಿಂದೆ ಕೊರೋನ ಕೇಸ್ ಅತಿ ಹೆಚ್ಚು ಇದ್ದಾಗಲೂ  ಕರ್ನಾಟಕದಲ್ಲಿ ಮಾತ್ರ ಕೇಸ್ ಗಳು ಕಡಿಮೆ ಇತ್ತು. ಆದರೀಗ ಆದ್ರೀಗ ಐದು ಸಾವಿರ ಕೇಸ್ ಬರುತ್ತಿದೆ. ಬೆಂಗಳೂರಲ್ಲಿ ಮಾತ್ರವೇ ಮೂರು ಸಾವಿರ ಕೇಸ್ ದಾಖಲಾಗಿದೆ ಎಂದರು.

ನಾವು ಕಳೆದ ಬಾರಿ ಪೀಕ್ ಇದ್ದಾಗ ಒಟ್ಟಾರೆ ನಾಲ್ಕುವರೆ ಸಾವಿರ ಕೇಸ್ ಇತ್ತು. ಈಗ ತಾಂತ್ರಿಕ ಸಲಹಾ ಸಮಿತಿ ಜೂನ್ ಎಂಡ್ ವರೆಗೂ ಇರಲಿದೆ ಅಂತ ಹೇಳಿದೆ. ಈಗ ಕಠಿಣ ಕ್ರಮ ಕೈಗೊಳ್ಳದಿದ್ದಲ್ಲಿ ಪರಿಣಾಮ ಗಂಭೀರವಾಗಲಿದೆ.  ತಾಂತ್ರಿಕ ಸಲಹಾ ಸಮಿತಿ ವರದಿ ತರಿಸಿಕೊಂಡು, ಮಂತ್ರಿಗಳ ಜೊತೆ ಚರ್ಚೆ ಮಾಡಿ ನಿರ್ಧಾರ ಮಾಡಿದ್ದು , ಕೆಲವು ಪ್ರಸ್ತಾವನೆ ತಂದಿದ್ದು, ಅದನ್ನ ಅಳವಡಿಸಿದ್ದೇವೆ ಎಂದು ಸುಧಾಕರ್ ಹೇಳಿದರು. 

ಕೆಲವರು ಈ ಚಟುವಟಿಕೆಗಳು ಇರಬೇಕು ಅಂತ ಡಿಮ್ಯಾಂಡ್ ಮಾಡಿದ್ದಾರೆ.  ಆದ್ರೆ ಕೈ ಮೀರಿ ಹೋಗಬಾರದು ಅಂತ ರೂಲ್ಸ್ ತಂದಿದ್ದೇವೆ ಎಂದರು.  

ಕೊರೋನಾ ಟಫ್ ರೂಲ್ಸ್ : 8 ಜಿಲ್ಲೆಗಳಲ್ಲಿ ಕಠಿಣ ಕ್ರಮ ..

ಪುನೀತ್ ಮನವಿ ವಿಚಾರ :  ಸಿನಿಮಾ ನೂರರಷ್ಟು ಬಿಡಬೇಕು ಎಂದು ನಟ ಪುನೀತ್ ಮನವಿ ಮಾಡಿದ ವಿಚಾರದ ಬಗ್ಗೆ ಮಾತನಾಡಿದ ಆರೋಗ್ಯ ಸಚಿವ ಸುಧಾಕರ್ ವಲಯವಾರು ಎಲ್ಲರ ಬಗ್ಗೆ ಗೌರವ, ಅಭಿಮಾನ ಇದೆ.  ಶಾಲೆ, ಜಿಮ್, ಸ್ವಿಮ್ಮಿಂಗ್ ಪೂಲ್, ಮದುವೆ, ಅಪಾರ್ಟ್‌ಮೆಂಟ್ ಎಲ್ಲವೂ ತೆಗೆದರೆ ಹೇಗೆ. ನೀವೇ ನಿರ್ಧಾರ ಮಾಡಿ.

ಗಂಭೀರವಾದ ಕ್ರಮ ಕೈಗೊಂಡಿಲ್ಲ ಅನ್ನೋ ವರದಿ ಮಾಧ್ಯಮಗಳು ಮಾಡಿದ್ದವು. ಇವತ್ತು ಕ್ರಮ ಬಿಟ್ಟರೆ ಕಷ್ಟವಾಗಲಿದೆ. ಚುನಾವಣೆಗೂ ಮಾರ್ಗಸೂಚಿ ಅನ್ವಯವಾಗಲಿದೆ. ಚುನಾವಣಾ ಆಯೋಗದಿಂದ ಮಾರ್ಗಸೂಚಿ ನೀಡಲಾಗಿದೆ ಎಂದರು. 

ಇನ್ನು ಧಾರ್ಮಿಕ ಕ್ಷೇತ್ರಗಳಿಗೂ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಇದರಲ್ಲಿ ರಾಜಕೀಯ ಬೆರೆಸುವ ಅವಶ್ಯಕತೆ ಇಲ್ಲ. ನೈಟ್ ಕರ್ಫ್ಯೂ, ವೀಕೆಂಡ್ ಲಾಕ್ ಡೌನ್ ಬಗ್ಗೆ ಗೊತ್ತಿಲ್ಲ. ನಿನ್ನೆ ತೆಗೆದುಕೊಂಡಿರೋ ನಿರ್ಧಾರ ಮಾತ್ರ ತೆಗೆದುಕೊಳ್ಳಲಾಗಿದೆ. ಸೋಂಕು ನಿಯಂತ್ರಣಕ್ಕೆ ಬಂದರೆ ಮತ್ತೆ, ಎಲ್ಲವಕ್ಕೂ ಅವಕಾಶ ಮಾಡಿಕೊಡಲಾಗುವುದು. ಸಿಎಂ ನಿನ್ನೆ ನಿರ್ಧಾರ ತೆಗೆದುಕೊಂಡಿದ್ದಾರೆ.ವೈಜ್ಞಾನಿಕ ವರದಿ ಆಧಾರದ ಮೇಲೆ ಕ್ರಮ ಕೈಗೊಂಡಿದ್ದೇವೆ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದರು. 

click me!