ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ ಆರೋಪದಡಿ ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಶಿವಮೊಗ್ಗದ ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಹಿನ್ನೆಲೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ ಪೊಲೀಸರು.
ಶಿವಮೊಗ್ಗ (ಆ.30) : ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ ಆರೋಪದಡಿ ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಶಿವಮೊಗ್ಗದ ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಹಿನ್ನೆಲೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ ಪೊಲೀಸರು.
ಕಳೆದ ಮೂರು ದಿನಗಳಿಂದ ಶಿವಮೊಗ್ಗದ ಕರ್ನಾಟಕ ಸಂಘ ಭವನದಲ್ಲಿ ಚಕ್ರವರ್ತಿ ಸೂಲಿಬೆಲೆ ಉಪನ್ಯಾಸ ಕಾರ್ಯಕ್ರಮವಿತ್ತು. "ಇನ್ನು ಮಲಗಿದರೆ ಏಳುವಾಗ ಭಾರತ ಇರುವುದಿಲ್ಲ' ಎಂಬ ವಿಷಯ ಕುರಿತು ಉಪನ್ಯಾಸ ನಡೆಯುತ್ತಿತ್ತು. ಇಂದು ಉಪನ್ಯಾಸ ಮುಗಿಸುತ್ತಿದ್ದಂತೆ ನೋಟಿಸ್ ಮಾಹಿತಿ ನೀಡಿ ಠಾಣೆಗೆ ಬರುವಂತೆ ಸೂಚನೆ ನೀಡಿದ ಪೊಲೀಸರು. ವಿನೋಬನಗರ ಠಾಣೆಯ ಪ್ರೊಬೇಶನರಿ ಐಪಿಎಸ್ ಅಧಿಕಾರಿ ಬಿಂದುಮಣಿ ಅವರಿಂದ ಸೂಲಿಬೆಲೆ ವಿಚಾರಣೆ.
ಸರ್ಕಾರವನ್ನು ಟೀಕಿಸಿದರೆ ಕೇಸ್ ಹಾಕುತ್ತಿದ್ದಾರೆ: ಸೂಲಿಬೆಲೆ ಟೀಕೆ
ಕಾಂಗ್ರೆಸ್ ರಾಜ್ಯ ಸಾಮಾಜಿಕ ಜಾಲತಾಣದ ರಾಜ್ಯ ಉಪಾಧ್ಯಕ್ಷೆ ಸೌಗಂಧಿಕಾ ರಘುನಾಥ್(Saugandhika Raghunath) ರನ್ನು ಫೇಸ್ಬುಕ್ ನಲ್ಲಿ ಅವಾಚ್ಯ ಶಬ್ದದಿಂದ ನಿಂದಿಸಿದ ಆರೋಪದ ಹಿನ್ನೆಲೆ ಚಕ್ರವರ್ತಿ ಸೂಲಿಬೆಲೆ ವಿರುದ್ಧ IPC ಸೆಕ್ಷನ್ 504,509 ರ ಅಡಿಯಲ್ಲಿ FIR ದಾಖಲಾಗಿತ್ತು. ಫೇಸ್ಬುಕ್ ನಲ್ಲಿ ಚಕ್ರವರ್ತಿ ಸೂಲಿಬೆಲೆಯವರು ಅಪಮಾನ ಮಾಡಿದ್ದಾರೆ ಎಂದು ಸೌಗಂಧಿಕಾ ರಘುನಾಥ್ ದೂರು ದಾಖಲಿಸಿದ್ದರು. ಈ ಹಿನ್ನೆಲೆ ಇಂದು ಕಾರ್ಯಕ್ರಮ ಮುಗಿಯುತ್ತಿದ್ದಂತೆ ನೋಟಿಸ್ ನೀಡಿ ವಿಚಾರಣೆಗೊಳಪಡಿಸಿದ ಐಪಿಎಸ್ ಅಧಿಕಾರಿ ಬಿಂದುಮಣಿ. ಈ ವಿಚಾರ ತಿಳಿಯುತ್ತಿದ್ದಂತೆ ಠಾಣೆ ಎದುರು ಜಮಾಯಿಸಿ ಚಕ್ರವರ್ತಿ ಸೂಲಿಬೆಲೆ ಅವರ ಅಭಿಮಾನಿಗಳು ಭಾರೀ ಪ್ರತಿಭಟನೆ ನಡೆಸಿದರು..
ಇಂಥ ಬೆದರಿಕೆಗಳಿಗೆ ಬಗ್ಗುವುದಿಲ್ಲ: ಚಕ್ರವರ್ತಿ ಸೂಲಿಬೆಲೆ
ಠಾಣೆಗೆ ಲಿಖಿತ ಹೇಳಿಕೆ ನೀಡಿ ವಾಪಸಾದ ಬಳಿಕ ಮಾತನಾಡಿದ ಚಕ್ರವರ್ತಿ ಸೂಲಿಬೆಲೆ ಅವರು, ಸುಳ್ಳು ದೂರು ನೀಡಿದ ವಿಷಯಕ್ಕೆ ಉತ್ತರಿಸಲು ಬಂದಿದ್ದೇನೆ. ಪೊಲೀಸರು ಪ್ರೀತಿಯಿಂದ ಕರೆದುಕೊಂಡು ಬಂದರು. ಕಾರ್ಯಕ್ರಮ ಮುಗಿದ ಬಳಿಕ ನೋಟಿಸ್ ಕೊಟ್ಟು ಕರೆಯಲು ಬಂದಿದ್ರು. ಕಾಂಗ್ರೆಸ್ ಸರ್ಕಾರದ ಇಂಥ ಬೆದರಿಕೆಗಳಿಗೆ ಬಗ್ಗುವುದಿಲ್ಲ ಎಂದರು.
ಇದು ದೂರು ದಾಖಲು ಮಾಡಿಕೊಳ್ಳುವ ಸಂಗತಿಯೇ ಅಲ್ಲ. ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಹ್ಯಾಂಡ್ಲರ್ ಮೋದಿ ಮೋರಿ ಅಂತ ಟ್ವೀಟ್ ಮಾಡಿದ್ರು. ಅದಕ್ಕೆ 'ನಿನಗ್ಯಾಕೆ ಉರಿ' ಎಂದು ಅದಕ್ಕೆ ಪ್ರತ್ಯುತ್ತರ ನೀಡಲಾಗಿತ್ತು.ಪ್ರಿಯಾಂಕ್ ಖರ್ಗೆ ನನ್ನನ್ನು ಪೊಲೀಸ್ ಮೆಟ್ಟಿಲು ಹತ್ತಿಸುವುದಾಗಿ ಹೇಳಿದ್ರು. ಆದ್ರೆ ಈ ಥರ ಮೆಟ್ಟಿಲು ಹತ್ತಿಸ್ತಾರಂತ ತಿಳ್ಕೊಂಡಿರಲಿಲ್ಲ ತಿರುಗೇಟು ನೀಡಿದರು.
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗ ಇಂತಹ ಘಟನೆಗಳು ನಡೆಯುತ್ತವೆ. ದಮನಿಸುವ ಕೆಲಸ ನಡೆಯುತ್ತಲೇ ಇರುತ್ತೆ. ಸರ್ಕಾರ ಇಡೀ ಪೊಲೀಸ್ ಫೋರ್ಸ್ ಬಳಸಿಕೊಂಡಿದೆ. ಪೊಲೀಸರು ಮೂರು ದಿನಗಳಿಂದ ಸರ್ಕಾರದ ಪ್ರೆಶರ್ ಕಾದು ಕೊಂಡಿದ್ದಾರೆ. ಸರ್ಕಾರ ಸಣ್ಣ ದೂರು ಇಟ್ಟುಕೊಂಡು ದೊಡ್ಡ ಹೆಜ್ಜೆ ಇಟ್ಟಿದೆ. ದೂರಿನ ಆಧಾರದ ಮೇಲೆ ಹೇಳಿಕೆ ನೀಡಿದ್ದೇನೆ. ನಾನು ಕೋರ್ಟ್ ನಲ್ಲಿ ಸಬ್ಮಿಟ್ ಮಾಡ್ತೀನಂತ ಹೇಳಿದ್ದೆ. ಆ ಪ್ರಕ್ರಿಯೆ ಕೂಡ ನಡೀತಿದೆ ಎಂದರು
.ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಹಿಂದುಗಳ ಮೇಲೆ ದೌರ್ಜನ್ಯ ಹೆಚ್ಚಳ : ಚಕ್ರವರ್ತಿ ಸೂಲಿಬೆಲೆ
ನಾನು ವಿಚಾರಣೆಗೆ ಪೊಲೀಸ್ ಠಾಣೆಗೆ ಬಂದಿದ್ದಕ್ಕೆ ಠಾಣೆ ಎದುರು ಇಷ್ಟೊಂದು ಜನ ಸೇರಿದ್ದಕ್ಕೆ ಪ್ರೀತಿಪೂರ್ವಕ ನಮಿಸುತ್ತೇನೆ ಎಂದರು. ಕಾಂಗ್ರೆಸ್‌ನವರು ಕಪೋಲಕಲ್ಪಿತ, ಅವಮಾನಿಸುವ ಹೇಳಿಕೆ ನೀಡ್ತಾನೆ ಬಂದಿದ್ದಾರೆ. ಶೋಬಕ್ಕ ಬದಲು ಚೊಂಬಕ್ಕ, ಮೋದಿ ಬದಲು ಮೋರಿ ಅಂತೆಲ್ಲ ಟ್ವೀಟ್ ಮಾಡ್ತಾರೆ. ಕಾಂಗ್ರೆಸ್ ನ ಸೋಷಿಯಲ್ ಮೀಡಿಯಾ ಹ್ಯಾಂಡ್ಲರ್ ಪ್ಯಾಕ್ಟ್ ಚೆಕ್ ಮಾಡುವುದರಲ್ಲಿ ತಪ್ಪೇನಿಲ್ಲ. ಈ ಪ್ರಕರಣದ ಫ್ಯಾಕ್ಟ್ ಚೆಕ್ ಕೂಡ ಮಾಡಲಿ ಎಂದರು.