ಮೈಸೂರು ದಸರಾ ವಿವಾದ, ಬಾನು ಮುಷ್ತಾಕ್ ವಿರುದ್ಧ ಮುಸ್ಲಿಂ ಮೌಲ್ವಿಗಳಿಂದ ಫತ್ವಾ? ಕಾಂಗ್ರೆಸ್ ವಿರುದ್ಧ ಮುಖಂಡರು ಗಂಭೀರ ಆರೋಪ!

Published : Aug 28, 2025, 12:38 PM IST
Mysuru dasara 2025 banu mustaq row

ಸಾರಾಂಶ

ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ ವಿವಾದಕ್ಕೆ ಕಾರಣವಾಗಿದ್ದು, ಮುಸ್ಲಿಂ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಫತ್ವಾ ಬೆದರಿಕೆ ಹಾಗೂ ಸರ್ಕಾರದ ಒತ್ತಡದ ಬಗ್ಗೆಯೂ ಗಂಭೀರ ಆರೋಪ ಕೇಳಿಬಂದಿದೆ.

ಬೆಂಗಳೂರು (ಆ.28): ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರದ ನಿರ್ಧಾರವು ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ಆಯ್ಕೆಯ ವಿರುದ್ಧ ಮುಸ್ಲಿಂ ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಕೆಲವು ಮೌಲ್ವಿಗಳು ಬಾನು ಮುಷ್ತಾಕ್ ವಿರುದ್ಧ ಫತ್ವಾ ಹೊರಡಿಸಲು ಮುಂದಾಗಿದ್ದರು ಎಂಬ ವಿಚಾರ ಬಹಿರಂಗವಾಗಿದೆ. ಆದರೆ ಸಚಿವ ಜಮೀರ್ ಅಹ್ಮದ್, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೌಲ್ವಿಗಳ ಮೇಲೆ ಒತ್ತಡ ಹೇರಿ, ಫತ್ವಾ ಹೊರಡಿಸಿದಂತೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದ ಮುಸ್ಲಿಂ ಮುಖಂಡ:

ಈ ಬಗ್ಗೆ ಮುಸ್ಲಿಂ ಮುಖಂಡ ಸಾದಿಕ್ ಪಾಷಾ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಕಾಂಗ್ರೆಸ್ ಸರ್ಕಾರ 85% ಮುಸ್ಲಿಂ ಒಟ್‌ಗಳಿಂದ ಅಧಿಕಾರಕ್ಕೆ ಬಂದಿದೆ. ಆದರೆ, ಮುಸ್ಲಿಂ ಸಮುದಾಯಕ್ಕೆ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಶೈಕ್ಷಣಿಕವಾಗಿ, ಉದ್ಯೋಗದಲ್ಲಿ ಮುಸ್ಲಿಂ ಯುವಕ-ಯುವತಿಯರಿಗೆ ಅವಕಾಶ ಕೊಡಬೇಕಿತ್ತು. ಬದಲಿಗೆ, ನಮ್ಮನ್ನು ಖುಷಿಪಡಿಸಲು ಈ ರೀತಿಯ ನಾಟಕ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಬಾನು ಮುಷ್ತಾಕ್ ಮುಸ್ಲಿಂರಂತಿಲ್ಲ:

ನಮಗೆ ಅಲ್ಲಾ ಒಬ್ಬರೇ ದೇವರು. ಕುಂಕುಮ, ಆರತಿ ಬೆಳಗಿದರೆ ಮುಸ್ಲಿಂ ಧರ್ಮವೇ ಹಾಳಾಗುತ್ತದೆ. ಬಾನು ಮುಷ್ತಾಕ್ ಅವರ ನಡವಳಿಕೆ, ಆಚರಣೆ ಮುಸ್ಲಿಮರಂತಿಲ್ಲ. ಆಗಾಗ ಮುಸ್ಲಿಮರಂತೆ ಕಾಣಿಸುತ್ತಾರೆ, ಹೆಸರು ಮಾತ್ರ ಮುಸ್ಲಿಂರದ್ದಿದೆ ಆದರೆ ಅವರ ನಡೆಯಿಂದ ಮುಸ್ಲಿಂರಂತೆ ಕಾಣುವುದಿಲ್ಲ,  ಧಾರ್ಮಿಕ ಆಚರಣೆಗಳಿಲ್ಲ ಎನ್ನುವ ಮೂಲಕ ದಸರಾ ಉದ್ಘಾಟನೆ, ಪೂಜೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಬಾನು ಮುಷ್ತಾಕ್ ಆಯ್ಕೆಯಿಂದ ಹಿಂದೂ ಸಮುದಾಯದ ಭಾವನೆಗಳಿಗೂ ಧಕ್ಕೆಯಾಗುತ್ತದೆ. ಇದು ಕೋಮು ಗಲಭೆಗೆ ಕಾರಣವಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

ಬಾನು ಮುಷ್ತಾಕ್ ವಿರುದ್ಧ ಫತ್ವಾ?

ಬಾನು ಮುಷ್ತಾಕ್ ವಿರುದ್ಧ ಮೌಲ್ವಿಗಳು ಫತ್ವಾ ಹೊರಡಿಸಲು ಸಿದ್ಧರಿದ್ದರೂ, ಸರ್ಕಾರದ ಒತ್ತಡ ಮತ್ತು ಬೆದರಿಕೆಯಿಂದ ತಡೆದಿದ್ದಾರೆ. ಸಚಿವ ಜಮೀರ್, ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಸಿಎಂ ಸಿದ್ದರಾಮಯ್ಯ ಅವರಿಂದ ಭಯದ ವಾತಾವರಣ ಸೃಷ್ಟಿಯಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಡಿಕೆ ಶಿವಕುಮಾರ 'ಚಡ್ಡಿ'(RSS) ಎಂದು ಗೊತ್ತಿರಲಿಲ್ಲ:

ಸಾದಿಕ್ ಪಾಷಾ ಅವರು ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ತೀವ್ರವಾಗಿ ಟೀಕಿಸಿದ್ದು, ನಮ್ಮನ್ನ ಬಳಸಿಕೊಂಡು ಸರ್ಕಾರ ಕಾಂಟ್ರವರ್ಸಿ ಮಾಡುತ್ತಿದೆ. ಕೆಜೆ-ಡಿಜೆ ಹಳ್ಖಿ ಕೇಸ್ ನಲ್ಲಿ ಸಿಲುಕಿದ ಅಮಾಯಕರು ಒಳಗೆ ಹೋಗಿದ್ದಾರೆ. ಈ‌ ಬಾರಿ ನಮ್ಮನ್ನು ಗೆಲ್ಲಿಸಿ ಇನ್ನೋಸೆಂಟ್ ಇರೋರನ್ನ ಬಿಡಿಸುತ್ತೇವೆ ಅಂತ ಡಿಸಿಎಂ ಅವರು ಹೇಳಿದ್ದರು. ಕಳದೆ ಈ ಬಾರಿ ಎಲೆಕ್ಷನ್‌ನಲ್ಲಿ ಸಿದ್ದರಾಮಯ್ಯರನ್ನ ಸ್ವಲ್ಪ ಸೈಡಿಗಿಟ್ಟು. ಡಿಕೆ ಶಿವಕುಮಾರ್ ಅವ್ರ ಮಾತಿನ ಮೇಲೆ ಎಲೆಕ್ಷನ್ ಮಾಡಿದ್ದು ನಾವು. ಕುಮಾರಸ್ವಾಮಿ ಚಡ್ಡಿ ಅಂತಾ ಗೊತ್ತಿತ್ತು. ಆದ್ರೆ ಡಿಕೆ ಶಿವಕುಮಾರ್ ಕೂಡ ಚಡ್ಡಿ(RSS) ಅಂತ ಮುಂಚೆ ಗೊತ್ತಿದ್ರೆ ವೋಟು ಹಾಕೋಕೆ ಯೋಚನೆ ಮಾಡ್ತಿದ್ವಿ ನಾವು. ಅದು ತಡವಾಗಿ ಗೊತ್ತಾಗಿ ನಮಗೆ ತುಂಬಾ ಬೇಜಾರಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಂದಿನ ಚುನಾವಣೆಯಲ್ಲಿ ತಕ್ಕ ಉತ್ತರ

ಕಾಂಗ್ರೆಸ್ ಸರ್ಕಾರ ಮುಸ್ಲಿಂ ಸಮುದಾಯಕ್ಕೆ ದ್ರೋಹ ಬಗೆದಿದೆ. ಇದೇ ರೀತಿಯಾಗಿ ಮುಂದುವರಿದರೆ, ಮುಂದಿನ ಚುನಾವಣೆಯಲ್ಲಿ ತಕ್ಕ ಉತ್ತರ ಕೊಡುತ್ತೇವೆ ಎಂದು ಸಾದಿಕ್ ಪಾಷಾ ಎಚ್ಚರಿಕೆ ನೀಡಿದ್ದಾರೆ.

ಮೈಸೂರು ದಸರಾ ವಿವಾದಕ್ಕೆ ಹೊಸ ತಿರುವು

ಈ ಘಟನೆಯಿಂದ ಮೈಸೂರು ದಸರಾ ಆಚರಣೆಯ ಸಂದರ್ಭದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆಯಾಗುವ ಭೀತಿ ಎದುರಾಗಿದೆ. ಸರ್ಕಾರ ಈ ವಿವಾದವನ್ನು ಹೇಗೆ ನಿಭಾಯಿಸಲಿದೆ ಎಂಬುದು ಕಾದು ನೋಡಬೇಕಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸ್ತ್ರಿರೋಗ ತಜ್ಞೆ, ಪುತ್ರನ ದುರಂತ ಅಂತ್ಯ, ರಾತ್ರಿ ಜಗಳವಾಡಿದ ಇಬ್ಬರು ಬೆಳಗ್ಗೆ ಶವವಾಗಿ ಪತ್ತೆ
ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!