Koppal: ರಾಜ್ಯಪಾಲರ ಆಗಮನದ ವೇಳೆ ಅಂಜನಾದ್ರಿಯಲ್ಲಿ ಪೂಜೆಗೆ ಪಟ್ಟು ಹಿಡಿದ ಅರ್ಚಕ ವಿದ್ಯಾದಾಸ ಬಾಬಾ

By Govindaraj SFirst Published Dec 9, 2022, 10:55 AM IST
Highlights

ಅಂಜನಾದ್ರಿಯಲ್ಲಿ ಆಂಜನೇಯ ಪೂಜೆಗಾಗಿ ಇಂದು ಹೈಡ್ರಾಮಾ ನಡೆಯಿತು. ರಾಜ್ಯಪಾಲರು ಇಂದು ಅಂಜನಾದ್ರಿಗೆ ಬರಯವಾಗ ನನಗೆ ಪೂಜೆಗೆ ಅವಕಾಶ ನೀಡಿ ಎಂದು ಅರ್ಚಕ ವಿದ್ಯಾದಾಸ ಬಾಬಾ ಪಟ್ಟು ಹಿಡಿದಿದ್ದರು. 

ಕೊಪ್ಪಳ (ಡಿ.09): ಅಂಜನಾದ್ರಿಯಲ್ಲಿ ಆಂಜನೇಯ ಪೂಜೆಗಾಗಿ ಇಂದು ಹೈಡ್ರಾಮಾ ನಡೆಯಿತು. ರಾಜ್ಯಪಾಲರು ಇಂದು ಅಂಜನಾದ್ರಿಗೆ ಬರಯವಾಗ ನನಗೆ ಪೂಜೆಗೆ ಅವಕಾಶ ನೀಡಿ ಎಂದು ಅರ್ಚಕ ವಿದ್ಯಾದಾಸ ಬಾಬಾ ಪಟ್ಟು ಹಿಡಿದಿದ್ದರು. ಈ ಸಂದರ್ಭದಲ್ಲಿ ಜಿಲ್ಲಾಡಳಿತ ಅಧಿಕಾರಿಗಳು ಒತ್ತಾಯಪೂರ್ವಕವಾಗಿ ಮೇಲೆ ಕಳುಹಿಸಿದರು. ವಿಶ್ವವಿಖ್ಯಾತವಾಗಿರುವ ಅಂಜನಾದ್ರಿಯಲ್ಲಿ ಈಗ ಪೂಜಾ ವಿವಾದ ಉಂಟಾಗಿದೆ. 

ಇಲ್ಲಿ ಪೂಜೆ ಸಲ್ಲಿಸುತ್ತಿದ್ದ ವಿದ್ಯಾದಾಸ ಬಾಬಾ ಎಂಬುವವರು ಕಳೆದ ಮೂರು ವರ್ಷಗಳ ಹಿಂದೆ ಲೈಂಗಿಕ ದೌರ್ಜನ್ಯದ ಹಿನ್ನೆಲೆಯಲ್ಲಿ ಹನುಮನ ಪೂಜೆಯಿಂದ ಬಿಡಿಸಿದ್ದರು. ಈ ಕುರಿತು ವಿದ್ಯಾದಾಸ ಬಾಬಾ ಹೈಕೋರ್ಟ್‌ಗೆ ಮೋರೆ ಹೋಗಿದ್ದು. ಈ ಕುರಿತು ಹೈಕೋರ್ಟ್ ಇಡೀ ದಿನ ಪೂಜೆ ಹಾಗು ಇಲ್ಲಿ ವಾಸವಾಗಿರಲು ಅವಕಾಶ ನೀಡಿದೆ. ಈ ಮಧ್ಯೆ ಇಂದು ಅಂಜನಾದ್ರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಬರುವ ಹಿನ್ನೆಲೆಯಲ್ಲಿ ಅವರಿಗೆ ಬೆಟ್ಟದ ಕೆಳಭಾಗದಲ್ಲಿಯೇ ಪೂಜೆ ಸಿದ್ದತೆ ಮಾಡಿಕೊಂಡಿದ್ದರು.  ಈ ಮಧ್ಯೆ ಸ್ಥಳಕ್ಕೆ ಆಗಮಿಸಿದ ವಿದ್ಯಾದಾಸ ಬಾಬ ತಮಗೆ ಇಲ್ಲಿಯೂ ಪೂಜೆಗೆ ಅವಕಾಶ ನೀಡಬೇಕೆಂದು ಪಟ್ಟು ಹಿಡಿದರು. 

ವಿಜಯಪುರದಲ್ಲೂ ಶುರುವಾಯ್ತು ಧರ್ಮ ಸಂಘರ್ಷ: ಧರ್ಮ ದಂಗಲ್‌ಗೆ ಸಾಕ್ಷಿಯಾಗುತ್ತಾ ಸಂಕ್ರಾಂತಿ ಜಾತ್ರೆ

ಇಲ್ಲಿ ರಾಜ್ಯಪಾಲರಿಗೆ ಭದ್ರತೆ ಇದೆ. ಇಲ್ಲಿ ಮುಜರಾಯಿ ಇಲಾಖೆಯಿಂದ ಪೂಜೆ ಸಲ್ಲಿಸಲಾಗುತ್ತಿದೆ. ನಿಮಗೆ ಬೆಟ್ಟದ ಮೇಲೆ ಪೂಜೆಗೆ ಅವಕಾಶ ನೀಡಲಾಗಿದೆ. ಈ ಕಾರಣಕ್ಕೆ ಇಲ್ಲಿ ಪೂಜೆಗೆ ಅವಕಾಶ ನೀಡುವುದಿಲ್ಲ ಎಂದರು. ಆದರೆ ಇಲ್ಲಿ ನನಗೆ ಪೂಜೆಗೆ ಅವಕಾಶ ನೀಡಬೇಕು ಇಲ್ಲಿದಿದ್ದರೆ ನ್ಯಾಯಾಲಯ ಆದೇಶ ಉಲ್ಲಂಘಿಸಿದಂತಾಗುತ್ತದೆ.  ಇಲ್ಲಿಯೇ ಪೂಜೆ ಅವಕಾಶ ನೀಡಿ ಎಂದು ಪಟ್ಟು ಹಿಡಿದರು. ಈ ಸಂದರ್ಭದಲ್ಲಿ ವಿದ್ಯಾದಾಸ ಬಾಬಾ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು. ಸ್ಥಳದಲ್ಲಿಯೇ ಧರಣಿ ಕುಳಿತುಕೊಳ್ಳಲು ಮುಂದಾದರು. 

ಟನ್‌ಗೆ 50 ಹೆಚ್ಚಳ ಆದೇಶ ಸುಟ್ಟು ಕಬ್ಬು ರೈತರ ಭಾರೀ ಪ್ರತಿಭಟನೆ

ಈ ಸಂದರ್ಭದಲ್ಲಿ ಪೊಲೀಸರು ವಿದ್ಯಾದಾಸ ಬಾಬಾರನ್ನು ವಶಕ್ಕೆ ಪಡೆದು ನಂತರ ಅವರನ್ನು ಬೆಟ್ಟದ ಮೇಲೆ ಕಳುಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ವಿದ್ಯಾದಾಸ ಬಾಬಾ ಇದು ನ್ಯಾಯಾಲಯದ ಆದೇಶ ಉಲ್ಲಂಘನೆಯಾಗುತ್ತಿದೆ ನನಗೆ ಪೂಜೆಗೆ ಅವಕಾಶ ನೀಡಬೇಕೆಂದು ಹೇಳಿದರು. ಆದರೆ ವಿದ್ಯಾರ್ಥಿ ಬಾಬಾರಿಗೆ ಮೇಲೆ ಮಾತ್ರ ಪೂಜೆಗೆ ಅವಕಾಶ ನೀಡಲಾಗಿದೆ. ಈ ಕಾರಣಕ್ಕಾಗಿ ಇಲ್ಲಿ ನ್ಯಾಯಾಂಗ ಆದೇಶ ಉಲ್ಲಂಘನೆಯಾಗುವುದಿಲ್ಲ ಎಂದು ಗಂಗಾವತಿ ತಹಸೀಲ್ದಾರ ನಾಗರಾಜ ಹೇಳಿದರು.

click me!