32,000 ಕೋಟಿ ಬಾಕಿ ಕೊಡಿ: ಸರ್ಕಾರಕ್ಕೆ 8 ದಿನ ಡೆಡ್‌ಲೈನ್‌ ಕೊಟ್ಟ ಗುತ್ತಿಗೆದಾರರು

By Kannadaprabha News  |  First Published Jan 14, 2025, 10:21 AM IST

ಸಚಿವರಿಂದ ಸ್ಪಂದನೆ ಸಿಗದಿದ್ದರೆ ಮುಖ್ಯಮಂತ್ರಿಗೆ ಪತ್ರ ಬರೆಯುತ್ತೇವೆ. ಸಿಎಂರಿಂದಲೂ ಸ್ಪಂದನೆ ಸಿಗದಿದ್ದಲ್ಲಿ ಪ್ರಧಾನಿಗೆ ಪತ್ರ ಬರೆಯುತ್ತೇವೆ. ಅವರಿಂದಲೂ ಸ್ಪಂದನ ಸಿಗದಿದ್ದರೆ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ ರಾಜ್ಯ ಗುತ್ತಿಗೆದಾರರ ಅಧ್ಯಕ್ಷ ಜಗನ್ನಾಥ ಶೇಗಜಿ 


ಕಲಬುರಗಿ(ಜ.14): ಸರ್ಕಾರದ ವಿವಿಧ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಬಾಕಿ ಬರಬೇಕಿರುವ ಸುಮಾರು 32000 ಕೋಟಿ ರು. ಗಳನ್ನು 8 ದಿನದೊಳಗೆ ಬಿಡುಗಡೆ ಮಾಡುವಂತೆ ಆಗ್ರಹಿಸಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾ‌ರ್ ಸೇರಿ 8 ಸಚಿವರಿಗೆ ಪತ್ರ ಬರೆದಿದ್ದೇವೆ ಎಂದು ರಾಜ್ಯ ಗುತ್ತಿಗೆದಾರರ ಅಧ್ಯಕ್ಷ ಜಗನ್ನಾಥ ಶೇಗಜಿ ತಿಳಿಸಿದ್ದಾರೆ. 

ಸಂಘದ ಅಲ್ಲದೆ, ಸಚಿವರಿಂದ ಸ್ಪಂದನೆ ಸಿಗದಿದ್ದರೆ ಮುಖ್ಯಮಂತ್ರಿಗೆ ಪತ್ರ ಬರೆಯುತ್ತೇವೆ. ಸಿಎಂರಿಂದಲೂ ಸ್ಪಂದನೆ ಸಿಗದಿದ್ದಲ್ಲಿ ಪ್ರಧಾನಿಗೆ ಪತ್ರ ಬರೆಯುತ್ತೇವೆ. ಅವರಿಂದಲೂ ಸ್ಪಂದನ ಸಿಗದಿದ್ದರೆ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. 

Tap to resize

Latest Videos

ರಾಜಕೀಯ ಕಾರಣಕ್ಕಾಗಿ ವಿಪಕ್ಷಗಳಿಂದ ಕಮಿಷನ್ ಆರೋಪ: ಸಚಿವ ಕೆ.ಜೆ.ಜಾರ್ಜ್

ಕಲಬುರಗಿಯಲ್ಲಿ ಸೋಮವಾರ 'ಕನ್ನಡಪ್ರಭ' ಜೊತೆ ಮಾತನಾಡಿದ ಜಗನ್ನಾಥ ಶೇಗಜಿ ಅವರು, ನಾವು ಕೆಲಸ ಮಾಡಿದ್ದೇವೆ, ಕೆಲಸ ಮಾಡಿದ್ದಕ್ಕೆ ಹಣ ಬರಬೇಕಿದೆ. ಈ ಹಣವನ್ನು ರಾಜ್ಯ ಸರ್ಕರ ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ನಾಲ್ಕು ದಿನಗಳ ಹಿಂದಷ್ಟೇ ನಾವು ಸಚಿವರಿಗೆ ಪತ್ರ ಬರೆದಿದ್ದೇವೆ ಎಂದು ತಿಳಿಸಿದರು. 

ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಪ್ರಿಯಾಂಕ್ ಖರ್ಗೆ, ಜಮೀರ್ ಅಹಮದ್ ಖಾನ್, ಬೋಸರಾಜ್, ದಿನೇಶ್ ಗುಂಡೂರಾವ್, ಎಚ್.ಸಿ. ಮಹದೇವಪ್ಪ, ರಹೀಂ ಖಾನ್‌ಗೆ ಪತ್ರ ಬರೆದಿದ್ದೇವೆ ಎಂದು ಮಾಹಿತಿ ನೀಡಿದರು. 
ನಾವು ಕೆಲಸ ಮಾಡಿ ಮುಗಿಸಿರುವ ಕಾಮಗಾರಿಗಳ ಹಣ 32 ಸಾವಿರ ಕೋಟಿ ರು. ಬಾಕಿ ಇದೆ. ಗುತ್ತಿಗೆದಾರರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಈಚೆಗೆ ಬೆಂಗಳೂರಲ್ಲಿ ಸೇರಿದ್ದ ಸಭೆಯಲ್ಲಿ ಎಲ್ಲಾ 30 ಜಿಲ್ಲೆಗಳ ಗುತ್ತಿಗೆದಾರರ ಸಂಘಗಳಿಂದ ದೂರು ಬಂದಿದೆ. ಇದನ್ನಾಧರಿಸಿಯೇ ಪತ್ರ ಬರೆದಿದ್ದೇವೆ ಎಂದರು. 

ಮನೆಹಾಳ ಸರ್ಕಾರಕ್ಕೆ 60% ಕಮಿಷನ್ ಕೊಡಲಾಗದೇ ದಯಾಮರಣಕ್ಕೆ ಗುತ್ತಿಗೆದಾರರ ಮನವಿ; ಆರ್.ಅಶೋಕ

ಕಾಮಗಾರಿ ಮಾಡಿ ಮುಗಿಸಿದ ದಿನಾಂಕ ಆಧರಿಸಿ ಹಿರಿತನದ ಆಧಾರದ ಮೇಲೆ ಬಾಕಿ ಹಣ ಬಿಡುಗಡೆ ಮಾಡುವಂತೆ ಅಧಿಕಾರಿಗಳನ್ನು ಕೇಳಿದರೆ ಅವರು ಸಚಿವರ ಕಡೆ ಬೆರಳು ಮಾಡುತ್ತಿದ್ದಾರೆ ಎಂದು ಆರೋಪಿಸಿದ ಜಗನ್ನಾಥ ಅವರು, ಅಧಿಕಾರಿಗಳು ಸಚಿವರ ಕಡೆ ಬೆರಳು ತೋರಿಸುತ್ತಿರುವುದು ಯಾಕೆ?. ಇದರ ರಹಸ್ಯವೇನು?. ಸಚಿವರು ಪ್ರಾಮಾಣಿಕರಾಗಿದ್ದರೆ ಅವರೇ ಅಧಿಕಾರಿಗಳಿಗೆ ಈ ಬಗ್ಗೆ ಕೇಳಲಿ ಎಂದರು. 

ನಾವು ಹೆಂಡತಿ, ಮಕ್ಕಳ ಮೈಮೇಲಿನ ಒಡವೆಗಳನ್ನು ಮಾರಾಟ ಮಾಡಿ ಕಾಂಟ್ರಾಕ್ಟ್ ಕೆಲಸ ಮಾಡಿದ್ದೇವೆ. ಇವರು ಹಣವನ್ನೇ ಬಿಡುಗಡೆ ಮಾಡದಿದ್ದರೆ ನಮ್ಮ ಗತಿಯೇನು?, ಸಣ್ಣ ಕುಟುಂಬದಿಂದ ಬಂದ ಅನೇಕರು ಕೂಡ ಗುತ್ತಿಗೆದಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹಣ ಬಿಡುಗಡೆಯಾಗದೆ ಬಾಕಿ ಉಳಿದರೆ ಅವರೇನು ಮಾಡಬೇಕು? ಎಂದು ಅವರು ಖಾರವಾಗಿ ಪ್ರಶ್ನಿಸಿದರು.

click me!