ಚಿಲುಮೆ ಸಂಸ್ಥೆಯ 500 ಜನರಿಂದ ನಿರಂತರ ಮತದಾರರ ಮಾಹಿತಿ ಸಂಗ್ರಹ: ಸ್ಪೋಟಕ ಮಾಹಿತಿ ಬಹಿರಂಗ

By Sathish Kumar KHFirst Published Nov 26, 2022, 1:00 PM IST
Highlights

ಚಿಲುಮೆ ಸಂಸ್ಥೆಯಲ್ಲಿ ಕೆಲಸ ಮಾಡಿದ 500 ಮಂದಿಗೂ ಸಂಕಷ್ಟ
ಮುಂಬರುವ ಚುನಾವಣೆಯಲ್ಲಿ ದೊಡ್ಡ ಅಸ್ತ್ರವಾಗಲಿದೆಯೇ ಚಿಲುಮೆ ಸಂಸ್ಥೆ ಹಗರಣ
ರಾಜಕೀಯ ಕಾರ್ಯಕ್ರಮಗಳಿಗೆ ಡಿಜಿಟಲ್‌ ದತ್ತಾಂಶದ ಆಧಾರಲ್ಲಿ ಜನರ ಪೂರೈಕೆ
ರಾಜಕಾರಣಿಗಳಿಂದ ಕೋಟ್ಯಂತರ ರೂ. ಹಣ ಸಂಗ್ರಹ ಮಾಡಿದ ಚಿಲುಮೆ ಸಂಸ್ಥೆ
 

ಬೆಂಗಳೂರು (ನ.26): ಚಿಲುಮೆ ಸಂಸ್ಥೆಯ ಮತದಾರರ ಮಾಹಿತಿಯನ್ನು ಅಕ್ರಮವಾಗಿ ಸಂಗ್ರಹಣೆ ಮಾಡಿದ ವಿಚಾರಕ್ಕೆ ಸಂಬಂಧಿಸದಂತೆ ಪೊಲೀಸರ ವಿಚಾರಣೆಯಲ್ಲಿ ಸ್ಪೋಟಕ ವಿಚಾರ ಬಯಲಿಗೆ ಬಂದಿದೆ. ಮತದಾರರ ದತ್ತಾಂಶ ಶೇಖರಣೆಗೆ ಬರೋಬ್ಬರಿ 500 ಮಂದಿಯನ್ನು ಚಿಲುಮೆ ಸಂಸ್ಥೆಯು ಕೆಲಸಕ್ಕೆ ನೇಮಿಸಿಕೊಂಡಿದೆ. ಇವರಿಗೆ ಡಿಜಿಟಲ್‌ ಸಮೀಕ್ಷೆಯ ತರಬೇತಿ ನೀಡಿ ಕೆಲಸ ಮಾಡಿಸಲಾಗುತ್ತಿತ್ತು. ಈಗ ಎಲ್ಲ 500 ಸಿಬ್ಬಂದಿಗೂ ನೋಟಿಸ್‌ ನೀಡಿ ವಿಚಾರಣೆಗೆ ಒಳಪಡಿಸಲು ಪೊಲೀಸ್‌ ಇಲಾಖೆ ಮುಂದಾಗಿದೆ. ಆದರೆ, ಆರೋಪಿಗಳು ಬಾಯಿಬಿಟ್ಟ ವಿಚಾರಗಳು ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಲಿವೆ.

ರಾಜ್ಯ ವಿಧಾನಸಭಾ ಚುನಾವಣೆಗೂ ಮುನ್ನ ಬಿಬಿಎಂಪಿ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿಯಲ್ಲಿಯೇ ಹಗರಣ ನಡೆದಿರುವುದು ಬೆಳಕಿಗೆ ಬಂದಿದೆ. ಇದಕ್ಕೆಲ್ಲ ಕಾರಣವಾಗಿದ್ದ ಚಿಲುಮೆ ಸಂಸ್ಥೆಯ ಮುಖ್ಯಸ್ಥ ರವಿಕುಮಾರ್‍‌ ಮತ್ತು ಕೆಂಪೇಗೌಡ ಅವರನ್ನು ಬಂಧಿಸಲಾಗಿದೆ. ಇದಕ್ಕೆ ಸಹಕರಿಸಿದರೆನ್ನಲಾದ ಆರೋಪದ ಮೇಲೆ ಚುನಾವಣಾ ಅಧಿಕಾರಿಗಳಾಗಿದ್ದ ಬಿಬಿಎಂಪಿ ಆಡಳಿತ ವಿಭಾಗದ ವಿಶೇಷ ಆಯುಕ್ತ ಮತ್ತು ಬೆಂಗಳೂರು ನಗರ ಜಿಲ್ಲಾಧಿಕಾರಿ ಅವರನ್ನು ಕೇಂದ್ರ ಚುನಾವಣಾ ಆಯೋಗದಿಂದ ಅಮಾನತುಗೊಳಿಸಲಾಗಿದೆ. ಜೊತೆಗೆ ಕೆಲವು ಐಎಎಸ್‌ ಅಧಿಕಾರಿಗಳನ್ನು ಕೂಡ ನಿಯೋಜನೆ ಮಾಡಲಾಗಿದೆ. ಈಬಂಧನವಾಗಿರುವ ಚಿಲುಮೆ ಸಂಸ್ಥೆಯ ಮುಖ್ಯಸ್ಥರು ಸ್ಪೋಟಕ ಮಾಹಿತಿಯನ್ನು ಹೊರ ಹಾಕಿದ್ದಾರೆ. ಈ ವಿಚಾರ ರಾಜ್ಯ ರಾಜಕಾರಣದಲ್ಲಿ ದೊಡ್ಡ ಚುನಾವಣಾ ಅಸ್ತ್ರವಾಗುವುದಂತೂ ಖಚಿತವಾಗಿದೆ.

ಮತದಾರರ ಮಾಹಿತಿ ಕಳವು: ಚಿಲುಮೆ ಸಂಸ್ಥೆಯ ಮುಖ್ಯಸ್ಥನ ಮನೆ ಮೇಲೆ ಪೊಲೀಸರ ದಾಳಿ

500 ಮಂದಿಗೆ ಡಿಜಿಟಲ್‌ ತರಬೇತಿ: ಚಿಲುಮೆ ಸಂಸ್ಥೆ ಅಕ್ರಮ ಮತದಾರ ಮಾಹಿತಿ ಸಂಹ್ರಹಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ರವಿಕುಮಾರ್ ಹಾಗೂ ಕೆಂಪೇಗೌಡ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಈ ವೇಳೆ ಮತದಾರರ ದತ್ತಾಂಶ ಶೇಖರಣೆಗೆ 500 ಮಂದಿಯನ್ನು ಕೆಲಸಕ್ಕೆ ನೇಮಿಸಿಕೊಳ್ಳಲಾಗಿದೆ ಎಂದು ಮಾಹತಿ ನೀಡಿದೆ. ಜತೆಗೆ, ಈ 500  ಮಂದಿಗೂ ಡಿಜಿಟಲ್ ಸಮೀಕ್ಷೆ ಆಪ್ ಬಗ್ಗೆ ತರಬೇತಿ ನೀಡಲಾಗಿತ್ತು. ಈ ಎಲ್ಲ ಸದಸ್ಯರು ಮನೆ ಮನೆಗೂ ತೆರಳಿ ದತ್ತಾಂಶ ಶೇಖರಣೆ ಮಾಡಲು ಸೂಚಿಸಲಾಗಿತ್ತು. ಅಷ್ಟೇ ಅಲ್ಲದೇ ಮತದಾರರ ಮಾಹಿತಿ ಕಲೆಗೆ ಸಿಬ್ಬಂದಿ ಬೇಕು ಎಂದು ಆರೋಪಿಗಳು ಜಾಹೀರಾತು ಸಹ ನೀಡಿದ್ದರು. ಈ ರೀತಿ ನೇಮಕ ಮಾಡಿಕೊಂಡ ಎಲ್ಲ ಕೆಲಸಗಾರರಿಗೆ ದಿನದ ಲೆಕ್ಕದಲ್ಲಿ ಹಣ ನೀಡಲಾಗುತ್ತಿತ್ತು ಎಂದು ಬಾಯ್ಬಿಟ್ಟಿದ್ದಾರೆ.

ರಾಜಕೀಯ ಕಾರ್ಯಕ್ರಮಕ್ಕೆ ಜನರ ಪೂರೈಕೆ: ಚಿಲುಮೆ ಸಂಸ್ಥೆಯ ಹಗರಣಗಳು ಬಗೆದಷ್ಟೂ ಆಳಕ್ಕೆ ಹೋಗುತ್ತಿದೆ. ರಾಜಧಾನಿಯಲ್ಲಿ ನಡೆಸಲಾಗುತ್ತಿದ್ದ ಕಾರ್ಯಕ್ರಮಗಳಿಗೆ ಜನರನ್ನುಯ ಪೂರೈಸುವ ಕಾರ್ಯವನ್ನೂ ಮಾಡಲಾಗುತ್ತಿತ್ತು. ಇದಕ್ಕಾಗಿ ತಮ್ಮ ಬಳಿಯಿದ್ದ ವೈಯಕ್ತಿಕ ದತ್ತಾಂಶ ಬಳಸಿ ಜನ ಪೂರೈಕೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಹೀಗೆ ರಾಜಕಾರಣ ಕಾಯಕ್ರಮಗಳಿಗೆ ಜನರ ಪೂರೈಕೆ ಮಾಡಿದ ನಂತರವಾಗಿ ರಾಜಕೀಯ ಮುಖಂಡರಿಂದ ಹಣ ಸಂದಾಯ ಮಾಡಲಾಗುತ್ತಿತ್ತು. ಈ ರೀತಿ ಅಕ್ರಮ ದತ್ತಾಂಶ ಶೇಖರಣೆ ಮಾಡಿ ಕೋಟಿಗಟ್ಟಲೇ ಸಂಪಾದನೆ ಮಾಡಿರುವುದು ಬೆಳಕಿಗೆ ಬಂದಿದೆ.

ರಾಜ್ಯಾದ್ಯಂತ ಮತದಾರರ ವಿವರಕ್ಕೆ 'ಚಿಲುಮೆ' ಕನ್ನ!

500 ಸಿಬ್ಬಂದಿಯ ವಿಚಾರಣೆ: ಚಿಲುಮೆ ಸಂಸ್ಥೆಯಲ್ಲಿ ಕೆಲಸಕ್ಕೆ ನೇಮಕಗೊಂಡು ಈಗಾಗಲೇ ದತ್ತಾಂಶ ಸಂಗ್ರಹಣೆ ಮಾಡಿದ 500 ಮಂದಿಯನ್ನೂ ಪೊಲೀಸ್‌ ಇಲಾಖೆಗ ವೈಯಕ್ತಿವಾಗಿ ವಿಚಾರಣೆ ನಡೆಸಲಿ ಮುಂದಾಗಿದೆ. ಹೀಗಾಗಿ, ಎಲ್ಲ ಸಿಬ್ಬಂದಿಗೂ ವೈಯಕ್ತಿಕವಾಗಿ ನೋಟಿಸ್‌ ನೀಡಿ ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗುತ್ತಿದೆ. ಇದಕ್ಕಾಗಿ ಅಗತ್ಯ ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ. ಶೀಘ್ರ ೫೦೦ ಮಂದಿಯ ವಿಚಾರಣೆಯ ಅಂಶಗಳು ಹೊರ ಬೀಳಲಿದ್ದು, ಮತ್ತಷ್ಟು ಸ್ಪೋಟಕ ವಿಚಾರಗಳು ಬೆಳಕಿಗೆ ಬರುವ ಸಾಧ್ಯತೆಯಿದೆ ಎಂದು ಪೊಲೀಸ್‌ ಇಲಾಖೆ ಮೂಲಗಳು ತಿಳಿಸಿವೆ.

click me!