ನಂದಿ ಬೆಟ್ಟಕ್ಕೆ ಶೀಘ್ರದಲ್ಲೇ ರೋಪ್ ವೇ ನಿರ್ಮಾಣ: ಸಚಿವ ಸುಧಾಕರ್

Published : Oct 03, 2023, 03:40 AM IST
ನಂದಿ ಬೆಟ್ಟಕ್ಕೆ ಶೀಘ್ರದಲ್ಲೇ ರೋಪ್ ವೇ ನಿರ್ಮಾಣ: ಸಚಿವ ಸುಧಾಕರ್

ಸಾರಾಂಶ

ನಂದಿ ಗಿರಿಧಾಮಕ್ಕೆ ಸಂಬಂಧಪಟ್ಟಂತೆ ಎಸಿಎಸ್ ಅವರ ಸಮ್ಮುಖದಲ್ಲಿ ಈಗಾಗಲೇ ಸಮಿತಿ ರೋಪ್‌ ವೇ ಸಂಬಂಧ ಇರುವ ಸಮಸ್ಯೆಗಳನ್ನು ಪರಿಹರಿಸಲು ನಮ್ಮ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು. 

ಚಿಕ್ಕಬಳ್ಳಾಪುರ (ಅ.03): ನಂದಿ ಗಿರಿಧಾಮಕ್ಕೆ ಸಂಬಂಧಪಟ್ಟಂತೆ ಎಸಿಎಸ್ ಅವರ ಸಮ್ಮುಖದಲ್ಲಿ ಈಗಾಗಲೇ ಸಮಿತಿ ರೋಪ್‌ ವೇ ಸಂಬಂಧ ಇರುವ ಸಮಸ್ಯೆಗಳನ್ನು ಪರಿಹರಿಸಲು ನಮ್ಮ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು. 

ಸೋಮವಾರ ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಡೆದ 154ನೇ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಕಡತ ತೋಟಗಾರಿಕೆ ಇಲಾಖೆ ಬಳಿಯಿದೆ. ಸಂಬಂದಪಟ್ಟ ಮಂತ್ರಿಗಳ ಜತೆ ಮಾತನಾಡಿದ್ದೇನೆ. ಭೂಮಿ ಹಸ್ತಾಂತರ, ಬೆಟ್ಟದ ಬುಡದಲ್ಲಿ ರೋಪ್ ವೇ ಗೆ ಬೇಕಾದ ಕಾಮಗಾರಿಯ 17ರಿಂದ 18 ಸ್ತಂಭಗಳ ನಿರ್ಮಾಣ ಅರಣ್ಯ ಇಲಾಖೆಯ ಅನುಮತಿ ಬೇಕಿದ್ದು, ಅದನ್ನು ಪಡೆಯಲು ಸೂಚನೆ ನೀಡಲಾಗಿದೆ ಎಂದು ಸಚಿವರು ಹೇಳಿದರು.

ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯವಾಗಲು ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ

ಪ್ರವಾಸಿ ತಾಣವಾಗಿ ಜಿಲ್ಲೆ ಅಭಿವೃದ್ಧಿ: ಟೂರಿಸಂ ಸರ್ಕೀಟ್ ಮಾಡುವ ಯೋಜನೆಯಿದ್ದು, ಭೋಗನಂಧೀಶ್ವರ ದೇವಾಲಯದ ಆವರಣದಲ್ಲಿಯೇ ಪಾರ್ಕಿಂಗ್ ವ್ಯವಸ್ಥೆ ಮಾಡಿ,ಇಲ್ಲಿಂದಲೇ ಎಲೆಕ್ಟ್ರಿಕ್‌ ಬಸ್‌ಗಳ ಮೂಲಕ ನಂದಿಬೆಟ್ಟಕ್ಕೆ ಪ್ರವಾಸಿಗರನ್ನು ಕೊಂಡೊಯ್ಯುವ ಬಗ್ಗೆಯೂ ಚರ್ಚೆಗಳು ನಡೆದಿವೆ. ಜಿಲ್ಲೆಯ ಪ್ರವಾಸಿ ತಾಣಗಳಿಗೂ ಇದೇ ವ್ಯವಸ್ಥೆ ಮಾಡುವ ಬಗ್ಗೆಯೂ ಚಿಂತನೆಯಿದೆ. ನಂದಿ ಗಿರಿಧಾಮ, ಭೋಗನಂದೀಶ್ವರ ದೇವಾಲಯಕ್ಕೆ ಲೈಟಿಂಗ್ ವ್ಯವಸ್ಥೆ ಮಾಡಬೇಕಿದೆ. 5 ವರ್ಷಗಳಲ್ಲಿ ಇವೆಲ್ಲಾ ಯೋಜನೆ ಕಾರ್ಯರೂಪಕ್ಕೆ ತರಲಾಗುವುದು ಎಂದರು.

ನಂದಿಬೆಟ್ಟದಲ್ಲಿ ಸಭೆ: ನಂದಿಬೆಟ್ಟದಲ್ಲಿ ಶೀಘ್ರವೇ ಪ್ರವಾಸೋಧ್ಯಮ ಸಚಿವರ ಸಮ್ಮುಖದಲ್ಲಿ ಸಭೆ ನಡೆಸಲಾಗುವುದು.ಅಲ್ಲಿ ಅಭಿವೃದ್ದಿ, ಆಗಬೇಕಾದ ಕಾರ್ಯ, ಸಂಚಾರಿ ದಟ್ಟಣೆ, ಇದರ ಪರಿಹಾರೋಪಾಯಗಳು ಎಲ್ಲಾ ವಿಚಾರಗಳ ಬಗ್ಗೆ ಸಮಗ್ರವಾಗಿ ಚರ್ಚಿಸಿ ಪರಿಹಾರೋಪಾಯಗಳನ್ನು ಕೈಗೊಳ್ಳಲಾಗುವುದು ಎಂದರು. ಶ್ಯಾಮನೂರು ಶಿವಶಂಕರಪ್ಪ ನಮ್ಮ ಪಕ್ಷದ ಹಿರಿಯ ನಾಯಕರು.ಇವರು ಯಾಕೆ ಹಾಗೆ ಹೇಳಿದ್ದಾರೋ ನನಗೆ ತಿಳಿಯದು. ಹಿರಿಯರ ಬಗ್ಗೆ ಹಿರಿಯರೇ ಮಾತನಾಡುತ್ತಾರೆ. ನನಗೆ ಆ ಬಗ್ಗೆ ಮಾಹಿತಿಯಿಲ್ಲ ಎಂದರು.

ಶಿವಮೊಗ್ಗ ಗಲಭೆ ಬಗ್ಗೆ ಮಾತನಾಡಿ, ಚುನಾವಣೆ ಸಮಯದಲ್ಲಿ ಮಾತ್ರ ಹೀಗೆ ಸಮಾಜದಲ್ಲಿ ಕೋಮುಗಲಭೆ ಸೃಷ್ಟಿಸಿ ಅಶಾಂತಿ ಉಂಟು ಮಾಡಿ ರಾಜಕೀಯ ಲಾಭ ಪಡೆದುಕೊಳ್ಳಲು ಯತ್ನಿಸಿರುವುದು ಕಂಡು ಬಂದಿದೆ. ಈ ಬಗ್ಗೆ ಮುಖ್ಯಮಂತ್ರಿ ಗೃಹಮಂತ್ರಿಗಳು ಕಠಿಣವಾದ ತೀರ್ಮಾನಗಳನ್ನು ತೆಗೆದುಕೊಂಡು ಮಟ್ಟಹಾಕುವ ಕೆಲಸ ಮಾಡುತ್ತಾರೆ. ರಾಜ್ಯದ ಜನತೆಗೆ ವಿನಂತಿ ಮಾಡುವುದೇನೆಂದರೆ ಅಭಿವೃದ್ದಿ ಕಡೆ ಗಮನ ಹರಿಸಿ, ಇಂತಹ ವಿಚಾರಗಳನ್ನು ಗೌಣವಾಗಿಸಿ ಎಂದು ಮನವಿ ಮಾಡಿದರು.

ನೇಮಕ: ಎಂಸಿಹೆಚ್(ಮೆಡಿಕಲ್‌ಕಾಲೇಜು ಆಸ್ಪತ್ರೆ) ಆಸ್ಪತ್ರೆಗೆ ಬೇಕಾದ ಸಿಬ್ಬಂದಿ ನೇಮಕಕ್ಕೆ ಸರಕಾರ ಅವಕಾಶ ಮಾಡಿದೆ.ಜಿಲ್ಲಾಸ್ಪತ್ರೆಯನ್ನು ನಗರದಿಂದ ಪೆರೇಸಂದ್ರದ ಬಳಿಯ ಕಟ್ಟಡಕ್ಕೆ ವರ್ಗಾಯಿಸಲು ಆದಷ್ಟು ಬೇಗ ಕ್ರಮವಹಿಸಲಾಗುವುದು.ಏನೇನು ಸೌಲಭ್ಯ ಬೇಕೋ ಅದನ್ನೆಲ್ಲಾ ಕೊಡುವ ಬಗ್ಗೆ ವೈಧ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಭರವಸೆ ನೀಡಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಎಂಆರ್‌ಐ ಸ್ಯಾನ್ ಅಳವಡಿಸಲು ರಾಜೀವ್‌ಗಾಂಧಿ ವಿಶ್ವವಿದ್ಯಾಲಯದ ಮೂಲಕ ಹಣ ಒದಗಿಸಲು ಕ್ರಮವಹಿಸಿದ್ದಾರೆ ಎಂದರು.

Siddaramaiah ಮೊದಲ ಅವಧಿಯಲ್ಲಿ ಟಿಪ್ಪು, ಇವಾಗ ಔರಂಗಜೇಬ್‌ನನ್ನು ಮರೆಸಲಾಗುತ್ತಿದೆ: ಪ್ರಲ್ಹಾದ್‌ ಜೋಶಿ

ರಕ್ತಪರೀಕ್ಷಾ ಕೇಂದ್ರ ಸ್ಥಾಪನೆ: ರೋಗ ಪತ್ತೆ ಹಚ್ಚುವ ರಕ್ತದ ಮಾದರಿ ಸಂಗ್ರಹ ಪ್ರಯೋಗಾಲಯ ನಿರ್ಮಾಣಕ್ಕೆ 1.20 ಕೋಟಿ ಅನುದಾನ ಮಂಜೂರಾಗಿದೆ.ಇದರಲ್ಲಿ ನೂತನ ಡಯಾಗ್ನೋಸ್ಟಿಕ್ ಬ್ಲಾಕ್ ನಿರ್ಮಾಣಕ್ಕೆ ಸೂಚನೆ ನೀಡಲಾಗಿದೆ.ಇಲ್ಲಿ ಸಿಟಿ ಸ್ಕ್ಯಾನ್, ಎಂಆರ್‌ಐ,ಅನ್ಟ್ರಾ ಸೌಂಡ್ ಸೇರಿ ಬೇರೆ ಬೇರೆ ಪರೀಕ್ಷೆ ಮಾಡಲು ಅವಕಾಶ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು. ಮಾಧ್ಯಮದವರು ಕೆ.ಸಿ ವ್ಯಾಲಿಯಿಂದ ಕಲುಷಿತಗೊಂಡಿದ್ದು, ಜನ ಜಾನುವಾರುಗಳು ಪರಿತಪಿಸುತ್ತಿವೆ ಎಂದು ಬರೆಯುತ್ತೀರಿ, ಸತ್ಯ ಏನೆಂದರೆ ಕಂದವಾರ ಕೆರೆಗೆ ಯುಜಿಡಿ ನೀರು ಹರಿಯುತ್ತಿದೆ, ಇದಕ್ಕೆ ಕಾರಣ ಹಿಂದಿನ ಬಿಜೆಪಿ ಸರ್ಕಾರದ ಆರ್ಥಿಕ ಅಶಿಸ್ತು ಮತ್ತು ಅವೈಜ್ಞಾನಿಕ ಕಾಮಗಾರಿ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮಹಾಮೇಳಾವ್ ಅನುಮತಿ ನಿರಾಕರಣೆ: ನಾಡದ್ರೋಹಿ ಎಂಇಎಸ್ ‌ಪುಂಡರಿಗೆ ಶಾಕ್ ಕೊಟ್ಟ ಬೆಳಗಾವಿ ಜಿಲ್ಲಾಡಳಿತ
ಸಮಾಜ ಕಲ್ಯಾಣ ಸಚಿವರೇ ಇಲ್ಲಿ ನೋಡಿ, ಅಂಬೇಡ್ಕರ್ ವಸತಿ ಶಾಲೆಯಲ್ಲಿ ಮಕ್ಕಳಿಗೆ ನಿತ್ಯ ಟಾರ್ಚರ್!, ಪೆನ್ನು ಪುಸ್ತಕ ಕೇಳಿದ್ರೆ ಏಟು!