ಎರಡು ವರ್ಷದಲ್ಲಿ ನೀವು, ನಿಮ್ಮ ಪಟಾಲಂ ಲೂಟಿ ಹೊಡೆದಿದ್ದು ಬಿಟ್ಟರೆ ಏನ್ ಸಾಧನೆ ನಿಮ್ದು? ಸಿಎಂ ವಿರುದ್ಧ ವಿಶ್ವನಾಥ ಗರಂ

Published : May 19, 2025, 01:02 PM IST
ಎರಡು ವರ್ಷದಲ್ಲಿ ನೀವು, ನಿಮ್ಮ ಪಟಾಲಂ ಲೂಟಿ ಹೊಡೆದಿದ್ದು ಬಿಟ್ಟರೆ ಏನ್ ಸಾಧನೆ ನಿಮ್ದು? ಸಿಎಂ ವಿರುದ್ಧ ವಿಶ್ವನಾಥ ಗರಂ

ಸಾರಾಂಶ

ಏನ್ ಸಾಧನೆ ಮಾಡಿದ್ದಾರೆ ಎಂದು ಸರ್ಕಾರ ಸಾಧನ ಸಮಾವೇಶ ಮಾಡುತ್ತಿದೆ. ರಾಜ್ಯಕ್ಕೆ ಬಿಡಿ, ಮೈಸೂರಿಗೆ ಏನ್ ಕೊಡುಗೆ ಕೊಟ್ಟಿದ್ದಿರಿ ಹೇಳಿ ಎಂದು ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಅವರು ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶವನ್ನು ತೀವ್ರವಾಗಿ ಟೀಕಿಸಿದರು.

ಮೈಸೂರು (ಮೇ.19): ಏನ್ ಸಾಧನೆ ಮಾಡಿದ್ದಾರೆ ಎಂದು ಸರ್ಕಾರ ಸಾಧನ ಸಮಾವೇಶ ಮಾಡುತ್ತಿದೆ. ರಾಜ್ಯಕ್ಕೆ ಬಿಡಿ, ಮೈಸೂರಿಗೆ ಏನ್ ಕೊಡುಗೆ ಕೊಟ್ಟಿದ್ದಿರಿ ಹೇಳಿ ಎಂದು ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಅವರು ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶವನ್ನು ತೀವ್ರವಾಗಿ ಟೀಕಿಸಿದರು.

ಇಂದು ಮೈಸೂರಿನಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಹೆಲಿಕಾಪ್ಟರ್ ನಲ್ಲಿ ಬರೋದು ಹೆಲಿಕಾಪ್ಟರ್ ನಲ್ಲಿ ಹೋಗೋದು ಇದೇ ಸಾಧನೆನಾ? ಎರಡು ವರ್ಷಗಳಲ್ಲಿ ಹೆಲಿಕಾಪ್ಟರ್ ಓಡಾಟಕ್ಕೆ ವೆಚ್ಚವಾದ ಹಣವೆಷ್ಟು ಹೇಳಿ? ಮುಡಾದಲ್ಲಿ ನೀವು ನಿಮ್ಮ ಪಟಾಲಂ ಮಾಡಿದ ಲೂಟಿ ಎಷ್ಟು ಹೇಳಿ? ಜನರಿಗೆ ಟೋಪಿ ಹಾಕಲು ಸಾಧನಾ ಸಮಾವೇಶ ಮಾಡುತ್ತಿದ್ದಿರಿ ಎಂದು ವಾಗ್ದಾಳಿ ನಡೆಸಿದ ಅವರು, 'ಮೈಸೂರಲ್ಲಿ ನಾವೇ ಒಂದು ಸಮಾವೇಶ ಮಾಡಿ ನಿಮ್ಮ ಬಣ್ಣ ಬಯಲು ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ಡಿಕೆ ಶಿವಕುಮಾರ ವಿಶೇಷ ಅಂಕಣ | ಕಾಂಗ್ರೆಸ್‌ನ ಪಂಚ ಗ್ಯಾರಂಟಿಗಳು: ಜನಸಾಮಾನ್ಯರಿಗೆ ನಿಜವಾದ ಅಚ್ಛೆ ದಿನ್!

ಮುಡಾ ಮತ್ತು ಭ್ರಷ್ಟಾಚಾರ ಆರೋಪ
 ಮೈಸೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ ಅವರು, 'ಮುಡಾದಲ್ಲಿ ನೀವು ಮತ್ತು ನಿಮ್ಮ ಪಟಾಲಂ ಲೂಟಿ ಮಾಡಿದ್ದೆಷ್ಟು? ಸಮಾವೇಶದಲ್ಲಿ ಜನರಿಗೆ ತಿಳಿಸಿ ಎಂದು ಸವಾಲು ಹಾಕಿದರು. ಸಾಧನಾ ಸಮಾವೇಶವನ್ನು ಕೇವಲ ಜನರಿಗೆ ಟೋಪಿ ಹಾಕಲು ಆಯೋಜಿಸಲಾಗಿದೆ ಕಿಡಿಕಾರಿದರು. 

ಬರೀ ಚಮಚಗಳ ಕೈಯಲ್ಲಿ ಹೊಗಳಿಸಿಕೊಳ್ಳುವುದೇ ಸಿದ್ದರಾಮಯ್ಯರ ಕೆಲಸ ಆಗಿದೆ. ಸಾಧನಾ ಸಮಾವೇಶದಲ್ಲಿ ನಿಮ್ಮ ಹಾಗೂ ನಿಮ್ಮ ಸಚಿವರ ಆಸ್ತಿ ಘೋಷಣೆ ಮಾಡಬೇಕು ಒತ್ತಾಯಿಸಿದರು, ಕಾಂಗ್ರೆಸ್ ಇದು ಪಬ್ಲಿಸಿಟಿ ಸರ್ಕಾರ. ಈ ಸರ್ಕಾರದಲ್ಲಿ ಎಲ್ಲಾ ಜಿಲ್ಲಾ ಮಂತ್ರಿಗಳು ಕಂಟ್ರ್ಯಾಕ್ಟ್, ವರ್ಗಾವಣೆ, ಕಮೀಷನ್ ನಲ್ಲಿ ಮುಳುಗಿದ್ದಾರೆ. ಹಾಗಾದರೆ ಹಿಂದೆ ಬಿಜೆಪಿ ಸರ್ಕಾರದ ವಿರುದ್ಧ ಕಮಿಷನ್ ಆರೋಪ ಮಾಡಿ ಸಾಚಾಗಳ ರೀತಿ ಪ್ರತಿಭಟನೆ ಮಾಡಿದ್ರಲ್ಲ? ಈಗ ನೀವು ಮಾಡುತ್ತಿರುವದೇನು? ನಿಮಗೂ -ಬಿಜೆಪಿ ಗೂ ವ್ಯತ್ಯಾಸ ಇದೆ? ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. 

ಇದನ್ನೂ ಓದಿ: ನಾಳೆ ಸಿದ್ದು ಸರ್ಕಾರಕ್ಕೆ 2 ವರ್ಷ: 1,11,111 ಮಂದಿಗೆ ಹಕ್ಕುಪತ್ರ ವಿತರಣೆ; ಕಾರ್ಯಕ್ರಮದ ವಿವರ ಇಲ್ಲಿದೆ

ಜಿಂದಾಲ್ ಗಣಿ ಭೂಮಿ ಮಾರಾಟದಲ್ಲಿ ಭಾರೀ ಕಿಕ್ ಬ್ಯಾಕ್!

3,600 ಏಕರೆ ಜಿಂದಾಲ್ ನ ಗಣಿ ಭೂಮಿಯನ್ನು ಪ್ರತಿ ಏಕರೆಗೆ 25 ಲಕ್ಷ ಕಿಕ್ ಬ್ಯಾಕ್ ತೆಗೆದು ಕೊಂಡು ಮಾರಿದ್ದಾರೆ ಎಂದು ಆರೋಪಿಸಿದ ಅವರು, ಬಿಜೆಪಿ ಅವರು ಹಿಂದೆ ಸುಳ್ಳು ಹೇಳಿ ಮನೆಗೆ ಹೋದ್ರು.ೀಗ ಕಾಂಗ್ರೆಸ್ ಕೂಡ ಸುಳ್ಳು ಹೇಳಿ ಮನೆಗೆ ಹೋಗುತ್ತದೆ. ಗ್ರೇಟರ್ ಮೈಸೂರು ಮಾಡಲು ಹೊರಟ್ಟಿದ್ದರು. ಇಲ್ಲಿ ಅವರಿಗೆ ವ್ಯಾಪಾರ ಸರಿ ಆಗಲಿಲ್ಲ. ಹೀಗಾಗಿ ಇದು ಮುಂದೂಡಲಾಗಿದೆ. ಸಿಎಂ ಸಿದ್ದರಾಮಯ್ಯ ಕುರುಬರಿಗೆ, ಹಿಂದೂಳಿದವರಿಗೆ ಏನು ಮಾಡಿದ್ದಾರೆ ಹೇಳಲಿ? ಇದೊಂದು ರೀತಿ ಹುಚ್ಚರ ಸರ್ಕಾರ. ಗ್ಯಾರಂಟಿ ಯೋಜನೆಗಳನ್ನು ಹುಚ್ಚರು ಮಾತ್ರ ಮಾಡ್ಬೇಕು ಅಷ್ಟೇ. ನೀರಾವರಿ ಇಲಾಖೆಯಲ್ಲಿ ಒಂದಾದರೂ ಕೆಲಸ ಆಗಿದೆಯಾ? ಈ ಇಲಾಖೆಯನಾ ಕಿಕ್ ಬ್ಯಾಕ್ ಇಟ್ಟುಕೊಳ್ಳಲಾಗಿದೆ ಎಂದು ಗಂಭೀರ ಆರೋಪ ಮಾಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವರುಣಾ ಜನತೆಯ ಋಣ ತೀರಿಸಲು ಸಾಧ್ಯವಿಲ್ಲ, ಆದರೂ ಶ್ರಮಿಸುವೆ: ಯತೀಂದ್ರ ಸಿದ್ದರಾಮಯ್ಯ
ಮಹಾಮೇಳಾವ್ ಅನುಮತಿ ನಿರಾಕರಣೆ: ನಾಡದ್ರೋಹಿ ಎಂಇಎಸ್ ‌ಪುಂಡರಿಗೆ ಶಾಕ್ ಕೊಟ್ಟ ಬೆಳಗಾವಿ ಜಿಲ್ಲಾಡಳಿತ