Congress Protest March: ಸಿಎಂ ವಿರುದ್ಧ ಬಿಜೆಪಿ ಅಪಪ್ರಚಾರ ವಿರೋಧಿಸಿ ಕಟೀಲಿಗೆ ಕಾಂಗ್ರೆಸ್‌ ಧರ್ಮ ಜಾಗೃತಿ ಯಾತ್ರೆ!

Kannadaprabha News, Ravi Janekal |   | Kannada Prabha
Published : Sep 29, 2025, 12:39 PM IST
Congress protest march in Kateel

ಸಾರಾಂಶ

Congress protest march in Kateel: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಅಪಪ್ರಚಾರವನ್ನು ವಿರೋಧಿಸಿ, ಯುವ ಕಾಂಗ್ರೆಸ್ ನಾಯಕ ಮಿಥುನ್ ರೈ ಕಾಂಗ್ರೆಸ್ ಕಟೀಲಿಗೆ ಧರ್ಮ ಜಾಗೃತಿ ಪಾದಯಾತ್ರೆ ನಡೆಸಿತು.  ಅಪಪ್ರಚಾರ ಮಾಡುವವರಿಗೆ ಸದ್ಬುದ್ಧಿ ನೀಡಲೆಂದು ದುರ್ಗಾಪರಮೇಶ್ವರಿಯಲ್ಲಿ ಪ್ರಾರ್ಥಿಸಲಾಯಿತು.

ಮೂಲ್ಕಿ (ಸೆ.29): ಇತ್ತೀಚೆಗೆ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಸೇವಾದರ ಏರಿಕೆ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರನ್ನು ಗುರಿಯಾಗಿರಿಸಿ ಬಿಜೆಪಿ ನಡೆಸಿದೆ ಎನ್ನಲಾದ ಅಪಪ್ರಚಾರ ವಿರೋಧಿಸಿ ಕಾಂಗ್ರೆಸ್ ಶುಕ್ರವಾರ ಕಟೀಲಿಗೆ ಪಾದಯಾತ್ರೆ ನಡೆಸಿತು.

ಯುವ ಕಾಂಗ್ರೆಸ್ ನಾಯಕ , ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ನೇತೃತ್ವದಲ್ಲಿ ಬೃಹತ್ ಧರ್ಮ ಜಾಗೃತಿ ನಡೆ ಪಾದಯಾತ್ರೆ ಕಾರ್ಯಕ್ರಮ ಕಟೀಲು ಸಮೀಪದ ಎಕ್ಕಾರು ಕೊಡಮಣಿತ್ತಾಯ ದೈವಸ್ಥಾನದ ಬಳಿಯಿಂದ ಕಟೀಲು ಕ್ಷೇತ್ರದವರೆಗೆ ನಡೆಯಿತು. ಪಾದಯಾತ್ರೆ ಮೂಲಕ ಕಟೀಲು ದೇವಳಕ್ಕೆ ಆಗಮಿಸಿ ಮುಖ್ಯಮಂತ್ರಿ ಬಗ್ಗೆ ಅಪಪ್ರಚಾರ ಮಾಡಿದವರಿಗೆ ಸದ್ಬುದ್ಧಿ ಕೊಡಲೆಂದು ದೇವಳದಲ್ಲಿ ದುರ್ಗೆಯ ಸಮ್ಮುಖದಲ್ಲಿ ಮಿಥುನ್‌ ರೈ ನೇತೃತ್ವದಲ್ಲಿ ಪ್ರಾರ್ಥಿಸಲಾಯಿತು.

ಇದನ್ನೂ ಓದಿ: Dharmasthala Case: ತಿಮರೋಡಿ ಜಾಮೀನು ಅರ್ಜಿ 30ಕ್ಕೆ ವಿಚಾರಣೆ

ದೇವಳದ ಅರ್ಚಕ ಕೆ. ಲಕ್ಷ್ಮೀ ನಾರಾಯಣ ಆಸ್ರಣ್ಣ ಪ್ರಾರ್ಥನೆ ನೆರವೇರಿಸಿದರು.ಮಾಜಿ ಸಚಿವ ಅಭಯ ಚಂದ್ರ ಜೈನ್, ವಿಧಾನ ಪರಿಷತ್ ಮಾಜಿ ಸದಸ್ಯ ಹರೀಶ್ ಕುಮಾರ್, ಕೆಪಿಸಿಸಿ ಸಂಯೋಜಕ ವಸಂತ್ ಬೆರ್ನಾಡ್, ಧಾರ್ಮಿಕ ಪರಿಷತ್ ಸದಸ್ಯ ಸುಬ್ರಮಣ್ಯ ಪ್ರಸಾದ್ ಕೊರಿಯಾರ್, ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್, ಮೂಡಬಿದಿರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಜೈನ್ ಶಿರ್ತಾಡಿ ಮತ್ತಿತರರು ಇದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌