ದಲಿತ ಸ್ವಾಮೀಜಿ ಬಾಯಿಯಿಂದ ಎಂಜಲು ಅನ್ನವನ್ನು ತೆಗೆಸಿ ತಿಂದ ಶಾಸಕ ಜಮೀರ್!

Published : May 22, 2022, 09:14 PM IST
ದಲಿತ ಸ್ವಾಮೀಜಿ ಬಾಯಿಯಿಂದ ಎಂಜಲು ಅನ್ನವನ್ನು ತೆಗೆಸಿ ತಿಂದ ಶಾಸಕ ಜಮೀರ್!

ಸಾರಾಂಶ

ವೇದಿಕೆಯ ಮೇಲೆ ದಲಿತ ಸ್ವಾಮೀಜಿಗೆ ಅನ್ನ ತಿನ್ನಿಸಿದ ಚಾಮರಾಜಪೇಟೆ ಶಾಸಕ ಜಮೀರ್‌ ಅಹಮದ್‌ ಖಾನ್‌, ಬಳಿಕ ಅವರ ಬಾಯಿಯಲ್ಲಿದ್ದ ಎಂಜಲು ಅನ್ನವನ್ನು ತಿನ್ನುವ ಮೂಲಕ ಅತಿರೇಕದ ವರ್ತನೆ ತೋರಿದ್ದಾರೆ. 

ಬೆಂಗಳೂರು (ಮೇ.22): ವೇದಿಕೆಯ ಮೇಲೆ ದಲಿತ ಸ್ವಾಮೀಜಿಗೆ (Dalit Swamiji) ಅನ್ನ ತಿನ್ನಿಸಿದ ಚಾಮರಾಜಪೇಟೆ ಶಾಸಕ ಜಮೀರ್‌ ಅಹಮದ್‌ ಖಾನ್‌ (Mla Zameer Ahmed Khan), ಬಳಿಕ ಅವರ ಬಾಯಿಯಲ್ಲಿದ್ದ ಎಂಜಲು ಅನ್ನವನ್ನು ತಿನ್ನುವ ಮೂಲಕ ಅತಿರೇಕದ ವರ್ತನೆ ತೋರಿದ್ದಾರೆ. ಪಾದರಾಯನಪುರದ ಅಲ್‌ ಅಜರ್‌ ಫೌಂಡೇಶನ್‌ ಶಾಲೆಯಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ಜಯಂತಿ ಮತ್ತು ಈದ್‌ ಮಿಲಾದ್‌ ಪ್ರಯುಕ್ತ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಜಮೀರ್‌ ಸ್ವಾಮೀಜಿ ಬಾಯಲ್ಲಿದ್ದ ಅನ್ನವನ್ನು ತಿಂದಿದ್ದು, ಈ ಮೂಲಕ ಸೌಹಾರ್ದತೆ ಸಾರುವ ಪ್ರಯತ್ನ ಮಾಡಿದ್ದಾರೆ.

ಈ ವೇಳೆ ಮಾತನಾಡಿದ ಅವರು, ಜಾತಿ, ಧರ್ಮಗಳಿಗೆ ಮಿಗಿಲಾದದ್ದು ಮಾನವೀಯತೆ. ನಮ್ಮೆಲ್ಲರ ಜಾತಿ ಒಂದೇ ಅದುವೇ ಮನುಷ್ಯ ಜಾತಿ. ಮನುಷ್ಯರಾಗಿ ಬಾಳುವುದೇ ನಿಜವಾದ ಧರ್ಮ. ಮನುಷ್ಯ ಸಂಬಂಧಗಳಿಗೆ ಜಾತಿ, ಧರ್ಮ ಎಂದಿಗೂ ಅಡ್ಡಿಯಾಗದು. ನಾವೆಲ್ಲರೂ ಸಹೋದರರಂತೆ ಬಾಳಬೇಕು. ಸ್ವಾಮೀಜಿ ಬಾಯಲ್ಲಿದ್ದ ಅನ್ನ ತಿಂದ ನಾನು ಸತ್ತು ಹೋದೆನಾ ಎಂದು ಜಮೀರ್ ಟೇಬಲ್‌ ಕುಟ್ಟಿ ಹೇಳಿರುವುದು ಈಗ ಸಖತ್‌ ವೈರಲ್‌ ಆಗಿದೆ. 

ಹುಬ್ಬಳ್ಳಿ ಗಲಭೆಕೋರರಿಗೆ ಜಮೀರ್ ಸಹಾಯ, ಸಿಟಿ ರವಿ ಕೆಂಡಾಮಂಡಲ

ಮಾತ್ರವಲ್ಲದೇ ಮನುಷ್ಯರಾಗಿ ಬಾಳುವುದೇ ನಿಜವಾದ ಧರ್ಮ. ಮನುಷ್ಯ ಸಂಬಂಧಗಳಿಗೆ ಜಾತಿ, ಧರ್ಮ ಎಂದಿಗೂ ಅಡ್ಡಿಯಾಗದು. ನಾವೆಲ್ಲರೂ ಸಹೋದರರಂತೆ ಬಾಳಬೇಕು. ಉತ್ತರ ಪ್ರದೇಶದಲ್ಲಿ ದಲಿತರು ಅಡಿಗೆ ಮಾಡಿದ್ದಾರೆ ಅಂತ ಶಾಲೆಯಲ್ಲಿ ಊಟ ಮಾಡಿಸಿಲ್ಲ. ಅದನ್ನು ನೋಡಿ ನನಗೆದ ನೋವಾಯ್ತು ಈ ದೇಶ ಯಾವ ಕಡೆ ಹೋಗ್ತಿದೆ ಅಂತ ಅನ್ನಿಸ್ತು. ಅದಕ್ಕೆ ನಾನು ದಲಿತ ಸ್ವಾಮೀಜಿ ನಾಗರಾಜ್ ಅವರ ಬಾಯಿಯಿಂದ ಎಂಜಲು ಅನ್ನವನ್ನು ತಿಂದಿದ್ದೇನೆ ಎಂದು ಜಮೀರ್ ಅಹ್ಮದ್ ಖಾನ್ ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್