53 ಜನರ ವಿರುದ್ಧ ದೂರು ನೀಡಿದಾಕೆ ಇದೇ ರೀತಿ ಕಂಪ್ಲೆಂಟ್ ಕೊಟ್ಟಿದ್ದಾಳೆ. ಹೀಗೆ ದೂರು ಕೊಟ್ಟಿರುವುದಕ್ಕೆ ಬೆಲೆ ಇರುತ್ತದೆಯಾ? ಅದೆಲ್ಲ ಆರೋಪಗಳು ಸಾಬೀತಾದರೆ ಕ್ರಮವಾಗುತ್ತದೆ ಎಂದು ಹೇಳಿದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ, ಕಾಂಗ್ರೆಸ್ ಶಾಸಕ ಡಾ.ಶಾಮನೂರು ಶಿವಶಂಕರಪ್ಪ
ದಾವಣಗೆರೆ(ಜೂ.15): ಯಾರೋ ದಾರಿಯಲ್ಲಿ ಹೋಗುವವರು ದೂರು ಕೊಟ್ಟ ತಕ್ಷಣ ಅರೆಸ್ಟ್ ಅಂದರೆ ಏನರ್ಥ? ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ, ಕಾಂಗ್ರೆಸ್ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅವರು ಪೋಕ್ಸೋ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪರ ಬೆಂಬಲ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, 53 ಜನರ ವಿರುದ್ಧ ದೂರು ನೀಡಿದಾಕೆ ಇದೇ ರೀತಿ ಕಂಪ್ಲೆಂಟ್ ಕೊಟ್ಟಿದ್ದಾಳೆ. ಹೀಗೆ ದೂರು ಕೊಟ್ಟಿರುವುದಕ್ಕೆ ಬೆಲೆ ಇರುತ್ತದೆಯಾ? ಅದೆಲ್ಲ ಆರೋಪಗಳು ಸಾಬೀತಾದರೆ ಕ್ರಮವಾಗುತ್ತದೆ ಎಂದು ಹೇಳಿದರು.
ತಮ್ಮ ಮಕ್ಕಳ ಸಲುವಾಗಿ ರಾಜಕಾರಣ ಮಾಡಿದ್ರೆ ನಾವು ಗಂಟೆ ಬಾರಿಸ್ಕೊಂಡು ಕೂಡಬೇಕಾ?: ಮೂವರು ನಾಯಕರ ವಿರುದ್ಧ ಯತ್ನಾಳ್ ಕಿಡಿ
ಸಾಯುವಂತೆ ಹೊಡೆಯಬಾರದಿತ್ತು:
ದರ್ಶನ್ ಮತ್ತು ಗ್ಯಾಂಗ್‌ನಿಂದ ಕೊಲೆ ಪ್ರಕರಣ ಕುರಿತ ಪ್ರಶ್ನೆಗೆ ಇದೇ ವೇಳೆ ಪ್ರತಿಕ್ರಿಯಿಸಿದ ಅವರು, ಚಿತ್ರದುರ್ಗದ ರೇಣುಕಾಸ್ವಾಮಿಗೆ ಬುದ್ಧಿಹೇಳಿ ಕಳುಹಿಸಬೇಕಿತ್ತು. ಆದರೆ ಸಾಯುವಂತೆ ಹೊಡೆಯಬಾರದಿತ್ತು ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಯಾರು ತಪ್ಪು ಮಾಡಿದ್ದಾರೋ ಅಂಥವರಿಗೆ ಶಿಕ್ಷೆ ಆಗಬೇಕಿತ್ತು. ದರ್ಶನ್ ಆಗಲಿ ಅಥವಾ ಬೇರೆ ಯಾರೇ ಆಗಿರಲಿ ಸಾಯುವಂತೆ ಹೊಡೆಯಬಾರದಿತ್ತು. ಹಾಗೆ ಹೊಡೆದಿರುವುದೇ ತಪ್ಪು. ದರ್ಶನ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಅಖಿಲ ಭಾರತ ವೀರಶೈವ ಮಹಾಸಭಾದಿಂದ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಲಾಗಿದೆ ಎಂದು ತಿಳಿಸಿದರು.