
ಬೆಂಗಳೂರು(ಮಾ.03): ಮಹತ್ವಾಕಾಂಕ್ಷಿ ಮೇಕೆದಾಟು ಯೋಜನೆ(Mekedatu Project) ಅನುಷ್ಠಾನಕ್ಕೆ ಆಗ್ರಹಿಸಿ ಪ್ರತಿಪಕ್ಷ ಕಾಂಗ್ರೆಸ್(Congres) ನಡೆಸುತ್ತಿರುವ ಎರಡನೇ ಹಂತದ ‘ನೀರಿಗಾಗಿ ನಡಿಗೆ’ ಪಾದಯಾತ್ರೆ(Padayatra) ಗುರುವಾರ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಬೃಹತ್ ಶಕ್ತಿ ಪ್ರದರ್ಶನ ಸಮಾವೇಶದೊಂದಿಗೆ ಅಂತ್ಯಗೊಳ್ಳಲಿದೆ.
ಕಾಂಗ್ರೆಸ್ ಪಕ್ಷ ಜ.9ರಿಂದ 19ರವರೆಗೆ 13 ದಿನಗಳ ಕಾಲ 160 ಕಿ.ಮೀ.ಗಳ ಪಾದಯಾತ್ರೆ ಆಯೋಜಿಸಿ, ಮೇಕೆದಾಟು ಬಳಿಕ ಸಂಗಮದಿಂದ ಪಾದಯಾತ್ರೆ ಆರಂಭಿಸಿತ್ತಾದರೂ ಕೋವಿಡ್(Covid19) ತೀವ್ರತೆಯಿಂದ ಹೈಕೋರ್ಟ್(High Court) ಮಧ್ಯಪ್ರವೇಶಿಸಿದ್ದರಿಂದ ನಾಲ್ಕೇ ದಿನಕ್ಕೆ ರಾಮನಗರದಲ್ಲಿ(Ramanagara) 60.5 ಕಿ.ಮೀಗೆ ಮೊಟಕುಗೊಳಿಸಿತ್ತು.
ಪ್ರಹ್ಲಾದ್ ಜೋಶಿ ಹೇಳಿಕೆಯಿಂದ ವಿದ್ಯಾರ್ಥಿಗಳ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ: ಡಿಕೆ ಶಿವಕುಮಾರ್
ಕೋವಿಡ್ ಕಡಿಮೆಯಾದ ಹಿನ್ನೆಲೆಯಲ್ಲಿ ರಾಮನಗರದಿಂದ ಬೆಂಗಳೂರಿಗೆ(Bengaluru) ಎರಡನೇ ಹಂತದಲ್ಲಿ ಫೆ.27ರಿಂದ ಮಾ.3ರವರೆಗೆ ಐದು ದಿನಗಳ 79.8 ಕಿ.ಮೀ. ಪಾದಯಾತ್ರೆ ರೂಪಿಸಿ ಚಾಲನೆ ನೀಡಿತ್ತು. ಮಾ.4ಕ್ಕೆ ರಾಜ್ಯ ಬಜೆಟ್ ಹಿನ್ನೆಲೆಯಲ್ಲಿ ಪಾದಯಾತ್ರೆಗೆ ಮೊದಲ ಹಂತದಲ್ಲೇ ಗುರುತಿಸಿದ್ದ ಮಾರ್ಗ ಬದಲಿಸಿದ್ದರಿಂದ 20 ಕಿ.ಮೀ. ದೂರ ಕಡಿಮೆಯಾಯಿತು.
ಎರಡನೇ ಹಂತದಲ್ಲಿ ಮೊದಲ ದಿನ ಭಾನುವಾರ ರಾಮನಗರದಿಂದ ಬಿಡದಿವರೆಗೆ, ಎರಡನೇ ದಿನ ಸೋಮವಾರ ಬಿಡದಿಯಿಂದ ಕೆಂಗೇರಿವರೆಗೆ, ಮೂರನೇ ದಿನ ಮಂಗಳವಾರ ಕೆಂಗೇರಿಯಿಂದ ಬಿಟಿಎಂ ಲೇಔಟ್‌ವರೆಗೆ ಯಶಸ್ವಿ ಪಾದಯಾತ್ರೆ ನಡೆಸಿತ್ತು. ಬುಧವಾರ ನಾಲ್ಕನೇ ದಿನವೂ ಭಾರೀ ಜನಸಾಗರದೊಂದಿಗೆ ಬಿಟಿಎಂ ಲೇಔಟ್‌ನಿಂದ ಆರು ವಿಧಾನಸಭಾ ಕ್ಷೇತ್ರಗಳ ಮೂಲಕ ಪಾದಯಾತ್ರೆ ನಡೆಸಿದ ಕಾಂಗ್ರೆಸ್ ನಾಯಕರು ರಾತ್ರಿ ಅರಮನೆ ಮೈದಾನ ತಲುಪಿದ್ದಾರೆ. ತನ್ಮೂಲಕ ನಾಲ್ಕು ದಿನಗಳ ಯಾತ್ರೆ 68 ಕಿ.ಮೀ ಪೂರ್ಣಗೊಂಡಿದೆ.
ಗುರುವಾರ ಕೊನೆಯ ದಿನ ಬೆಳಗ್ಗೆ 9ಗಂಟೆಗೆ ಮೇಕ್ರಿ ವೃತ್ತದಿಂದ ಯಾತ್ರೆ ಹೊರಟು ಮಧ್ಯಾಹ್ನ 3ಗಂಟೆ ವೇಳೆಗೆ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನ ಸೇರಲಿದೆ. ಅಂದು 11.8 ಕಿ.ಮೀ. ಪಾದಯಾತ್ರೆ ಬಳಿಕ ಬೃಹತ್ ಸಮಾವೇಶದೊಂದಿಗೆ ಅಂತ್ಯಗೊಳ್ಳಲಿದೆ. ಇದರೊಂದಿಗೆ ಕಾಂಗ್ರೆಸ್ ಮೇಕೆದಾಟು ಯೋಜನೆಗಾಗಿ ಒಟ್ಟು 140.3 ಕಿ.ಮೀ. ಪಾದಯಾತ್ರೆ ನಡೆಸಿದಂತಾಗಲಿದೆ.
ಗುರುವಾರದ ಯಾತ್ರೆ ಹಾಗೂ ಸಮಾವೇಶಕ್ಕೆ ಕಾಂಗ್ರೆಸ್ ಸರ್ವಧರ್ಮ, ಜನಾಂಗ, ಪಕ್ಷಗಳ ಜನರನ್ನೂ ಆಹ್ವಾನವಿದೆ. ಕಾಂಗ್ರೆಸ್ಸಿಗರು ಮಾತ್ರವಲ್ಲದೆ ರೈತರು(Farmers), ನಾಗರಿಕರು, ಕಾರ್ಮಿಕರು, ರಾಜಕೀಯೇತರ ಸಂಘಟನೆಗಳ ಕಾರ್ಯಕರ್ತರು, ಕನ್ನಡಪರ ಕಾರ್ಯಕರ್ತರು ಸೇರಿ ಎಲ್ಲ ವರ್ಗದವರಿಗೂ ಹಾಗೂ ಬಿಜೆಪಿ, ಜೆಡಿಎಸ್‌ನೊಂದಿಗೆ ಗುರುತಿಸಿಕೊಳ್ಳಲಾಗದವರೂ ಭಾಗವಹಿಸಲಿದ್ದಾರೆ ಎಂದು ಹೇಳಿದೆ.
Mekedatu Project: ಒನ್ ಮ್ಯಾನ್ ಶೋ ಆಯ್ತಾ ಪಾದಯಾತ್ರೆ: ಡಿಕೆಶಿಗೆ ಸಾಥ್ ಕೊಡೋರೇ ಇಲ್ಲ..!
ಬೆಂಗಳೂರು ನಗರದಲ್ಲಿ ಬುಧವಾರ ಸಾಗಿದ ಮೇಕೆದಾಟು ಪಾದಯಾತ್ರೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಸಭಾ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಉತ್ಸಾಹ.
ಇದು ಹೋರಾಟದ ಮೊದಲ ಭಾಗ ಮಾತ್ರ
ರಾಜಧಾನಿ ಬೆಂಗಳೂರು ಸೇರಿದಂತೆ ಸುಮಾರು 10 ಜಿಲ್ಲೆಗಳ ಎರಡೂವರೆ ಕೋಟಿ ಜನರಿಗೆ ಕುಡಿಯುವ ನೀರು ಒದಗಿಸುವ ಮೇಕೆದಾಟು ಅಣೆಕಟ್ಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ನಡೆಸುತ್ತಿರುವ ಪಕ್ಷಾತೀತ ಪಾದಯಾತ್ರೆ ಗುರುವಾರ ಅಂತ್ಯಗೊಳ್ಳಲಿದೆ. ಈ ಯಾತ್ರೆಯಲ್ಲಿ ಎಲ್ಲ ವರ್ಗದವರೂ ಪಾಲ್ಗೊಳ್ಳಲು ಆಹ್ವಾನಿಸಲಾಗಿದೆ. ಇದು ನಮ್ಮ ಹೋರಾಟದ ಮೊದಲ ಭಾಗ ಮಾತ್ರ. ಯೋಜನೆ ಜಾರಿಗಾಗಿ ಹಂತ ಹಂತವಾಗಿ ಹೋರಾಟಗಳ ಮೂಲಕ ಕೇಂದ್ರ-ರಾಜ್ಯ ಸರ್ಕಾರಗಳ ಮೇಲೆ ನಿರಂತರ ಒತ್ತಡ ಹಾಕಲಾಗುವುದು ಅಂತ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬಿಜೆಪಿಗೆ ಆಗದಿದ್ರೆ ಹೇಳಲಿ, ನಾವು ಮಾಡ್ತೇವೆ: ಸಿದ್ದರಾಮಯ್ಯ
ಮೇಕೆದಾಟು ಯೋಜನೆ(Mekedatu Project) ಜಾರಿಗೊಳಿಸಲು ಕೇಂದ್ರ ಮತ್ತು ರಾಜ್ಯದಲ್ಲಿರುವ ಡಬಲ್ ಎಂಜಿನ್ ಬಿಜೆಪಿ ಸರ್ಕಾರಗಳ(BJP Government) ಕೈಯಲ್ಲಿ ಆಗದಿದ್ದರೆ ಹೇಳಲಿ. ಮುಂದಿನ ಚುನಾವಣೆಯಲ್ಲಿ ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಆಗ ನಾವೇ ಈ ಯೋಜನೆ ಜಾರಿಗೊಳಿಸಿ ತೋರಿಸುತ್ತೇವೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಸವಾಲು ಹಾಕಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ