* ಜಾಹೀರಾತು, ತ್ಯಾಜ್ಯ ನಿರ್ವಹಣೆಯಲ್ಲಿ ಅಧಿಕಾರಿಗಳ ಕರಾಮತ್ತು
* ನಿರ್ದಿಷ್ಟಗುತ್ತಿಗೆದಾರರಿಗೇ ಹಲವು ಕಾಮಗಾರಿ ಮಂಜೂರಾತಿ
* ಪಾಲಿಕೆ ಮೇಲೆ 3ನೇ ದಿನದ ಎಸಿಬಿ ಶೋಧದಲ್ಲಿ .617 ಕೋಟಿ ಭ್ರಷ್ಟಾಚಾರ ಬೆಳಕಿಗೆ
ಬೆಂಗಳೂರು (ಮಾ. 3): ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯಲ್ಲಿ ಹುದುಗಿರುವ ಭ್ರಷ್ಟಬೇರುಗಳನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ವು ಶೋಧಿಸಿದಷ್ಟುವಿಸ್ತಾರವಾಗಿದ್ದು, ಮೂರನೇ ದಿನದ ಕಾರ್ಯಾಚರಣೆಯಲ್ಲಿ ತೆರಿಗೆ, ಜಾಹೀರಾತು ಹಾಗೂ ಘನ ತ್ಯಾಜ್ಯ ನಿರ್ವಹಣೆಯಲ್ಲಿ ಸುಮಾರು .617 ಕೋಟಿ ಅಕ್ರಮವನ್ನು ಎಸಿಬಿ ಪತ್ತೆ ಹಚ್ಚಿದೆ. ಇದರೊಂದಿಗೆ ಬಿಬಿಎಂಪಿ (Bruhat Bengaluru Mahanagara Palike) ಮೇಲಿನ ಬೃಹತ್ ಕಾರ್ಯಾಚರಣೆಯೂ ಅಂತ್ಯಗೊಂಡಿದ್ದು, ಇದುವರೆಗಿನ ತನಿಖೆಯಲ್ಲಿ ಕೋಟ್ಯಂತರ ಮೌಲ್ಯದ ಹಗರಣ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಎಸಿಬಿ (Anti Corruption Bureau) ಹೇಳಿದೆ. ಬುಧವಾರ ಬಿಬಿಎಂಪಿ (BBMP) ಕೇಂದ್ರ ಹಾಗೂ ವಲಯ ಕಚೇರಿಗಳು ಸೇರಿದಂತೆ 33 ಸ್ಥಳಗಳಲ್ಲಿ 200 ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಭ್ರಷ್ಟಾಚಾರ (corruption,) ಆರೋಪದ ಹಿನ್ನೆಲೆಯಲ್ಲಿ ಬಿಬಿಎಂಪಿ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿರುವ ಎಸಿಬಿ (ACB), ಮೂರು ದಿನಗಳಿಂದ ಬಿಬಿಎಂಪಿ ಕೇಂದ್ರ ಕಚೇರಿ ಸೇರಿದಂತೆ 3 ವಲಯಗಳ ಕಚೇರಿಗಳಲ್ಲಿ ಶೋಧನೆ ನಡೆಸಿದೆ. ಈ ವೇಳೆ ಹಲವು ಕಡತ ಹಾಗೂ ದಾಖಲಾತಿಗಳನ್ನು ಜಪ್ತಿ ಮಾಡಿದೆ. ಅಲ್ಲದೆ ಖಾಸಗಿ ಸಂಸ್ಥೆ ಹಾಗೂ ಜನ ಸಾಮಾನ್ಯರು ಬಿಬಿಎಂಪಿಗೆ ಸುಮಾರು 15 ಕೋಟಿ ತೆರಿಗೆಯನ್ನು ಪಾವತಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
300 ಕೋಟಿ ಜಾಹೀರಾತು ಗುಳುಂ: ಹಲವು ವರ್ಷಗಳಿಂದ .267 ಕೋಟಿ ಜಾಹೀರಾತು ಕರ (advertisement revenue)ಸಂಗ್ರಹ ಮಾತ್ರವಲ್ಲದೆ ಬಸ್ ತಂಗುದಾಣ ಮತ್ತು ಪಾದಚಾರಿ ಮಾರ್ಗಕ್ಕೆ (ಸ್ಕೈವಾಕ್) ಅಳವಡಿಸಿರುವ ಜಾಹೀರಾತುಗಳಿಂದ ಸುಮಾರು .27 ಕೋಟಿಗಳಿಗೂ ಅಧಿಕ ಕರ ಸಂಗ್ರಹಿಸದೆ ಇರುವುದು ಬಯಲಾಗಿದೆ. ಹೊಸದಾಗಿ ನಿರ್ಮಿಸಿರುವ ಪಿಪಿಪಿ ಮಾದರಿಯ ಬಸ್ ತಂಗುದಾಣಗಳಲ್ಲಿ ಅಳವಡಿಸಿರುವ ಜಾಹೀರಾತುಗಳಿಂದ ಸುಮಾರು 6 ಕೋಟಿ ಅಧಿಕ ಕರ ಸಂಗ್ರಹ ಮಾಡಿಲ್ಲ. ಹೀಗಾಗಿ ಇದುವರೆಗಿನ ಪರಿಶೀಲನೆಯಿಂದ ಜಾಹೀರಾತು ವಿಭಾಗದಲ್ಲಿ ಅಂದಾಜು .300 ಕೋಟಿ ಅಧಿಕ ಕರ ಸಂಗ್ರಹ ಮಾಡದೆ ಸರ್ಕಾರಕ್ಕೆ ನಷ್ಟಮಾಡಿರುವುದು ತನಿಖೆಯಲ್ಲಿ ಗೊತ್ತಾಗಿದೆ.
ಸರ್ಕಾರಿ ಜಮೀನಿಗೇ ಟಿಡಿಆರ್: ಟಿಡಿಆರ್ (Transfer of Development Rights) ಅನ್ನು ಪಡೆಯುವುದಕ್ಕೋಸ್ಕರ ಕಳಪೆ ಗುಣಮಟ್ಟದ ತಾತ್ಕಾಲಿಕ ಕಟ್ಟಡಗಳನ್ನು ನಿರ್ಮಾಣ ಮಾಡಿ ಬಳಿಕ ಆ ಕಟ್ಟಡಕ್ಕೆ ಹೆಚ್ಚಿನ ಮೊತ್ತದ ಟಿಡಿಆರ್ ಅನ್ನು ಮಂಜೂರು ಮಾಡಿಸಿಕೊಂಡಿದ್ದಾರೆ. ನಂತರ ಅದೇ ಜಾಗದಲ್ಲಿ ಹೊಸದಾಗಿ ಕಟ್ಟಡವನ್ನು ನಿರ್ಮಿಸಿದ್ದಾರೆ. ಕೆಲವು ಕಡೆ ರಸ್ತೆ ಅಗಲೀಕರಣ ಮಾಡಿರುವುದಾಗಿ ದಾಖಲಾತಿಗಳನ್ನು ಸೃಷ್ಟಿಸಿ ರಸ್ತೆ ವಿಸ್ತರಿಸಿಲ್ಲ. ಆದರೆ ಬಿಬಿಎಂಪಿ ಪರಿಹಾರದ ಮೊತ್ತವನ್ನು ಅಕ್ರಮವಾಗಿ ಪಡೆದಿದ್ದಾರೆ. ಸರ್ಕಾರದ ಖರಾಬು ಜಮೀನುಗಳಿಗೆ ಖೊಟ್ಟಿದಾಖಲಾತಿಗಳನ್ನು ಸೃಷ್ಟಿಸಿ ಟಿಡಿಆರ್ ಅನ್ನು ಮಂಜೂರು ಮಾಡಿದ್ದಾರೆ ಎಂದು ಎಸಿಬಿ ಹೇಳಿದೆ.
ಡಿಆರ್‌ಸಿ ನೀಡಿದ ನಂತರ ಅದೇ ಡಿಆರ್‌ಸಿಯನ್ನು ಬಹುಮಹಡಿ ಕಟ್ಟಡಗಳ ಎಫ್‌ಎಆರ್ ಹೆಚ್ಚಿಸಲು ಬಳಸಬೇಕಿದೆ. ಆದರೆ ಇದರಲ್ಲಿ ಬಿಬಿಎಂಪಿ ನಗರ ಯೋಜನಾ ವಿಭಾಗದ ಅಧಿಕಾರಿಗಳು ಹೆಚ್ಚಿನ ಟಿಡಿಆರ್ ನಿಗದಿಪಡಿಸಿ ಕೋಟ್ಯಂತರ ಅವ್ಯವಹಾರ ನಡೆಸಿರುವುದು ಪತ್ತೆಯಾಗಿದೆ. ಬಿಬಿಎಂಪಿ ಕಾಮಗಾರಿಗಳ ಹಾಗೂ ಆಂತರಿಕ ಪರಿಶೀಲನೆ ಬಗ್ಗೆ ಆಂತರಿಕ ವಿಚಕ್ಷಣಾ ವಿಭಾಗದ ಮುಖ್ಯ ತಾಂತ್ರಿಕ ಎಂಜಿನಿಯರ್ ನೇತೃತ್ವದಲ್ಲಿ ಸಲ್ಲಿಸಿದ ಸಮಗ್ರ ವರದಿಯಲ್ಲಿ ಲೋಪದೋಷಗಳು ಕಂಡು ಬಂದಿದೆ.
ನವೀನ್ ಸಾವು ಇಟ್ಟುಕೊಂಡು ಜಾತಿ, ಮೀಸಲಾತಿ ಬಗ್ಗೆ ಮಾತನಾಡುವುದು ತರವಲ್ಲ: ಅಶ್ವತ್ಥನಾರಾಯಣ
ಕೆರೆಗಳನ್ನೇ ಮಾಯ ಮಾಡಿದರು: ಕೆಲ ಕೆರೆ ಮತ್ತು ಬಫರ್ ಜೋನ್‌ಗಳಲ್ಲಿ ಅನಧಿಕೃತವಾಗಿ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಾಣ ಮಾಡಲು ಸ್ಥಳ ಪರಿಶೀಲನೆ ಮಾಡದೆ ನಕ್ಷೆಯನ್ನು ಮಂಜೂರು ಮಾಡಿ ಖಾತಾ ಸೃಷ್ಟಿಸಿದ್ದಾರೆ. ಪ್ರಸುತ್ತ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳಿಗೆ ಈಗಾಗಲೇ ಓಸಿಯನ್ನು ನೀಡಿರುವುದು ಕಡತಗಳ ಪರಿಶೀಲನೆಯಿಂದ ಪತ್ತೆಯಾಗಿದೆ ಎಂದು ಎಸಿಬಿ ತಿಳಿಸಿದೆ. ಮೂರು ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಲು ಅನುಮೋದನೆಯನ್ನು ಪಡೆದುಕೊಂಡು 6ಕ್ಕೂ ಅಧಿಕ ಅಂತಸ್ತಿನ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಹತ್ತು ಮಹಡಿಗಳಿಗಿಂತ ಮೇಲ್ಪಟ್ಟಎಲ್ಲ ಕಟ್ಟಡಗಳ ದಾಖಲಾತಿಗಳು ಮತ್ತು ಎರಡು ಎಕರೆ ಜಾಗ ಮತ್ತು ಅದಕ್ಕಿಂತ ಹೆಚ್ಚಿನ ಜಾಗದಲ್ಲಿ ನಿರ್ಮಿಸಿರುವ ಕಟ್ಟಡ ಮತ್ತು ಅಪಾರ್ಟ್‌ಮೆಂಟ್‌ಗಳಿಗೆ ಸಂಬಂಧಿಸಿದ ಕಡತಗಳನ್ನು ಪರಿಶೀಲಿಸಲಾಗಿದೆ. ಇದರಿಂದ ಸರ್ಕಾರಕ್ಕಾಗಿ ಭಾರಿ ಮೊತ್ತದ ತೆರಿಗೆ ನಷ್ಟದ ಕುರಿತಂತೆ ಅಂದಾಜಿಸಲಾಗುತ್ತಿದೆ ಎಂದು ಎಸಿಬಿ ಹೇಳಿದೆ.
ಕಂದಾಯ ವಿಭಾಗದಲ್ಲಿ ಎಲ್ಲವೂ ಅಯೋಮಯ: ತೆರಿಗೆ ಸಂಗ್ರಹಣೆ ಸಂಬಂಧ 3 ವಲಯ ಕಚೇರಿಗಳಲ್ಲಿ ಪರಿಶೀಲಿಸಿದಾಗ ಕಡಿಮೆ ತೆರಿಗೆಯನ್ನು ನಿಗದಿಪಡಿಸಿರುವುದು ಪತ್ತೆಯಾಗಿದೆ. ವಸತಿ ಉದ್ದೇಶ ಸ್ವತ್ತುಗಳಿಗೆ ಕಡಿಮೆ ತೆರಿಗೆ ನಿಗದಿಪಡಿಸಿ ಸರ್ಕಾರಕ್ಕೆ ನಷ್ಟಮಾಡಿದ್ದಾರೆ. ಬಹು ಮಹಡಿ, ಸಾಫ್ಟ್‌ವೇರ್ ಮತ್ತು ಬಾಡಿಗೆ ಉದ್ದೇಶಕ್ಕಾಗಿ ನಿರ್ಮಾಣ ಮಾಡಿರುವ ಕಟ್ಟಡಗಳಿಗೆ ವಸತಿ ಉದ್ದೇಶ ಸ್ವತ್ತುಗಳೆಂದು ±6Üರಿಗಣಿಸಿ ಕಡಿಮೆ ತೆರಿಗೆ ನಿಗದಿಪಡಿಸಿದ್ದಾರೆ. ತೆರಿಗೆ ನಿಗದಿಯಲ್ಲಿ ಅಪ್ರಮಾಣಿಕವಾಗಿ .217 ಕೋಟಿ ಬಿಬಿಎಂಪಿಗೆ ನಷ್ಟಮಾಡಿರುವುದು 7 ಕಡತಗಳ ಪರಿಶೀಲನೆಯಿಂದ ಗೊತ್ತಾಗಿದೆ.
ಯಾದಗಿರಿಯಲ್ಲಿ 1 ಸ್ಫೋಟ, 9 ಸಾವು, ಶುಭ ಸಮಾರಂಭದ ಮನೆಯಲ್ಲಿ ಸೂತಕದ ಛಾಯೆ
ರಾಜಾ ಕಾಲುವೆಯ ಹಣವನ್ನೂ ತಿಂದರು: ಬೃಹತ್ ನೀರು ಕಾಲುವೆ ವಿಭಾಗದಲ್ಲಿ 2017ನೇ ಸಾಲಿನಿಂದ ಇದುವರೆಗೆ .1,050 ಕೋಟಿ ಟೆಂಡರ್ ಕಾಮಗಾರಿಗಳ ಕಡತಗಳನ್ನು ಪರಿಶೀಲಿಸಲಾಗುತ್ತಿದೆ. ಕಾಲುವೆಗೆ ಖೊಟ್ಟಿದಾಖಲಾತಿ, ಲೆಕ್ಕಪರಿಶೋಧನೆ ವರದಿ ಹಾಗೂ ರಾಜಕಾಲುವೆ ಒತ್ತುವರಿ ಕಾಮಗಾರಿಗಳಿಗೆ ಸಂಬಂಧಪಟ್ಟಕಡತಗಳನ್ನು ವಶಕ್ಕೆ ಪಡೆಯಲಾಗಿದೆ. ಇನ್ನು ನಿರ್ದಿಷ್ಟಗುತ್ತಿಗೆದಾರರಿಗೆ ಮಾತ್ರ ಕಾಮಗಾರಿಗಳು ಹಂಚಿಕೆಯಾಗಿರುವುದು ಪತ್ತೆಯಾಗಿದೆ. ಹೂಳೆತ್ತುವ ಕಾಮಗಾರಿಯಲ್ಲಿ ಸಹ ಅಕ್ರಮ ನಡೆದಿರುವ ಬಗ್ಗೆ ಮೇಲ್ನೋಟಕ್ಕೆ ಕಂಡು ಬಂದಿದೆ.
.1.18 ಲಕ್ಷ ಜಪ್ತಿ: ಬೃಹತ್ ನೀರು ಕಾಲುವೆ ವಿಭಾಗ (-ಸ್ಟಾಮ್‌ರ್ ವಾಟರ್ ಡ್ರೈನೇಜ್)ದ ಸಹಾಯಕ ಕಾರ್ಯಪಾಲಕ ಅಭಿಯಂತರ ಕಚೇರಿಯ ಪರಿಶೀಲನೆ ವೇಳೆ ದಾಖಲೆಗಳಿಲ್ಲದ .1.18 ಲಕ್ಷ ಹಣ ಪತ್ತೆಯಾಗಿದೆ.