ಸರ್ವಪಕ್ಷ ಸಭೆ ಬಳಿಕ ಸಿದ್ದರಾಮಯ್ಯ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು ಹೀಗೆ...

By Suvarna NewsFirst Published Apr 20, 2021, 7:12 PM IST
Highlights

ಕೊರೋನಾ ನಿಯಂತ್ರಣದ ಬಗ್ಗೆ ಇಂದು (ಏ.20) ನಡೆದ ಸರ್ವಪಕ್ಷ ಸಭೆ ಅಂತ್ಯವಾಗಿದೆ. ಬಳಿಕ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು ಹೀಗೆ

ಬೆಂಗಳೂರು, (ಏ.20): ರಾಜ್ಯದಲ್ಲಿ ಕೊರೋನಾ 2ನೇ ಅಲೆ ನಿಯಂತ್ರಣಕ್ಕಾಗಿ ರಾಜ್ಯಪಾಲ ವಜೂಭಾಯ್ ವಾಲಾ ನೇತೃತ್ವದಲ್ಲಿ ಸರ್ವಪಕ್ಷ ಸಭೆ ನಡೆಯಿತು.

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ವರ್ಚುವಲ್ ಸಭೆ ನಡೆದಿದ್ದು, ಸಭೆಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷದ ಹಲವು ನಾಯಕರು ಭಾಗಿಯಾಗಿದ್ರು. ಈ ವೇಳೆ ಹಲವು ನಾಯಕರುಗಳು ತಮ್ಮದೇಯಾದ ಅಭಿಪ್ರಾಯಗಳನ್ನ ವ್ಯಕ್ತಪಡಿಸಿದರು.

ಹಲವು ನಾಯಕರುಗಳು ಲಾಕ್‌ಡೌನ್‌ ಬೇಡ ಅಂದ್ರೆ, ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಮಾತ್ರ ಲಾಕ್‌ಡೌನ್ ಅನಿರ್ವಾಯ ಎಂದು ಅಭಿಪ್ರಾಯ ವ್ಯಕ್ತಡಿದರು.

ಸರ್ವಪಕ್ಷಗಳ ಸಭೆಯಲ್ಲಿ ಅಚ್ಚರಿ ಸಲಹೆ ಕೊಟ್ಟ ಮಾಜಿ ಸಿಎಂ ಕುಮಾರಸ್ವಾಮಿ!

ಇನ್ನು ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯಪಾಲರು ಆಲ್ ಮಾರ್ಟಿ ಮೀಟಿಂಗ್ ಕರೆದಿದ್ದರು. ರಾಜ್ಯ ಪಾಲರು ಈ ಮೀಟಿಂಗ್ ಕರೆದಿರೋದು ಸಂವಿಧಾನ ಬಾಹಿರ ಅಂತ ಹೇಳಿದ್ದೇನೆ. ಅವರು ಮುಖ್ಯಮಂತ್ರಿ ಕರೆಯಬಹುದು ಮಾಹಿತಿ ಪಡೆದುಕೊಳ್ಳಬಹುದು ಅಷ್ಟೇ . ಅವರಿಗೆ ಗೌರವ ಕೊಡೋದಕ್ಕೋಸ್ಕರ ನಾನು ಅಟೆಂಡ್ ಆಗಿದ್ದೆ ಎಂದರು.

ತಾಂತ್ರಿಕ ಸಲಹಾ ಸಮಿತಿಯ ಎರಡನೇ ಅಲೆ ಬಗ್ಗೆ ಮುನ್ಸೂಚನೆ ನೀಡಿತ್ತು. ನವೆಂಬರ್ ನಲ್ಲೇ ಮುನ್ಸೂಚನೆ ಕೊಟಿತ್ತು. ಜನ ಬೆಡ್ ಇಲ್ಲ ಐಸಿಯು ಬೆಡ್ ಅಂಬುಲೆನ್ಸ್ ಇಲ್ಲ ಎಂದು ಪರದಾಡುತ್ತಿದ್ದಾರೆ. ಸರ್ಕಾರ ಯಾವುದೇ ಸಿದ್ದತೆಯನ್ನೇ ಮಾಡಿಕೊಳ್ಳಲಿಲ್ಲ ಎಂದು ಅಸಮಾಧಾನ ಹೊರಹಾಕಿದರು.

ಮಿನಿಸ್ಟರ್ ಆಪ್ತ ಸಾಹಾಯಕನಕಗೆ ಅಕ್ಸಿಜನ್ ಸಿಕ್ಕಲ್ಲ ಎಂದು ಸತ್ತು ಹೋದದ್ರು. ಸ್ವಲ್ಪ ಕಡಿಮೆಯಾಗುತ್ತಿದ್ದ ಹಾಗೇ ಫುಲ್ ಫ್ರೀ ಬಿಟ್ಟು ಬಿಟ್ಟರು. ಜಾತ್ರೆ ಕುಂಭ ಮೇಳ ಮಾಡೋಕೆ‌ ಎಲ್ಲಾ ಬಿಟ್ಟರು. ರಾಜ್ಯ ಹಾಗೂ ಕೇಂದ್ರ  ಬೇಜವಬ್ದಾರಿತನ ತೋರಿದೆ. ಪಿಎಂಗೆ ಚುನಾವಣಾ ನಡೆಸುವ ಬಗ್ಗೆ ಆಸಕ್ತಿದೆಯೋ ಹೊರತು ಜನರ ಸಮಸ್ಯೆ ಆಲಿಸೋದ್ರಲ್ಲಿ ಇಲ್ಲ ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರ ವಿರುದ್ಧ ಕಿಡಿಕಾರಿದರು.

click me!