H.Anjaneya: ಸಮಯ ಸಾಧಕರನ್ನು ಕಾಂಗ್ರೆಸ್ಸಿಗೆ ಸೇರಿಸಿಕೊಳ್ಳಬೇಡಿ

Kannadaprabha News   | Asianet News
Published : Jan 31, 2022, 05:17 AM IST
H.Anjaneya: ಸಮಯ ಸಾಧಕರನ್ನು ಕಾಂಗ್ರೆಸ್ಸಿಗೆ ಸೇರಿಸಿಕೊಳ್ಳಬೇಡಿ

ಸಾರಾಂಶ

ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತದೆ ಎಂದು ಹಲವು ಶಾಸಕರು ಕಾಂಗ್ರೆಸ್‌ ಸೇರ್ಪಡೆಗೆ ಸಿದ್ಧರಾಗಿದ್ದಾರೆ. ಆದರೆ ಪಕ್ಷವು ಬರುವವರನ್ನೆಲ್ಲಾ ಸೇರಿಸಿಕೊಳ್ಳಬಾರದು. ಸಮಯ ಸಾಧಕರನ್ನು ದೂರವಿಡಬೇಕು ಎಂದು ಮಾಜಿ ಸಚಿವ ಎಚ್‌. ಆಂಜನೇಯ ಹೇಳಿದ್ದಾರೆ.

ಬೆಂಗಳೂರು (ಜ.31): ಕಾಂಗ್ರೆಸ್‌ (Congress) ಅಧಿಕಾರಕ್ಕೆ ಬರುತ್ತದೆ ಎಂದು ಹಲವು ಶಾಸಕರು ಕಾಂಗ್ರೆಸ್‌ ಸೇರ್ಪಡೆಗೆ ಸಿದ್ಧರಾಗಿದ್ದಾರೆ. ಆದರೆ ಪಕ್ಷವು ಬರುವವರನ್ನೆಲ್ಲಾ ಸೇರಿಸಿಕೊಳ್ಳಬಾರದು. ಸಮಯ ಸಾಧಕರನ್ನು ದೂರವಿಡಬೇಕು ಎಂದು ಮಾಜಿ ಸಚಿವ ಎಚ್‌.ಆಂಜನೇಯ (H.Anjaneya) ಹೇಳಿದ್ದಾರೆ. ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ಗೆ ಬರಲು ಹಲವರು ಸಿದ್ಧರಿದ್ದಾರೆ. 

ಆದರೆ ಬರುವವರನ್ನೆಲ್ಲಾ ಪಕ್ಷಕ್ಕೆ ಸೇರಿಸಿಕೊಳ್ಳಬಾರದು. ಕಾಂಗ್ರೆಸ್‌ನವರು ಸಮರ್ಥರಾಗಿರುವಾಗ ಬೇರೆಯವರನ್ನು ಸೇರಿಸಿಕೊಳ್ಳುವ ಅಗತ್ಯವಿಲ್ಲ. ಕೇವಲ ಅಧಿಕಾರಕ್ಕಾಗಿ ಪಕ್ಷ ಬಿಟ್ಟು ಬೇರೆ ಪಕ್ಷ ಸೇರಲು ಬರುವವರು ಸಮಯ ಸಾಧಕರು. ಅಂತಹವರ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದರು. ಈಗ ಅಧಿಕಾರ ಸಿಗುತ್ತದೆ ಎಂದು ಕಾಂಗ್ರೆಸ್‌ಗೆ ಸೇರುತ್ತೇವೆ ಎನ್ನುತ್ತಾರೆ. ಬಳಿಕ ಪಕ್ಷ ಬಿಟ್ಟು ಹೋಗುತ್ತಾರೆ. ಕಾಂಗ್ರೆಸ್‌ನಲ್ಲಿ ಇರುವ ನಾವೆಲ್ಲಾ ಸಮರ್ಥರಿದ್ದೇವೆ. ಪಕ್ಷದಲ್ಲಿ ಸಮರ್ಥರಿರುವಾಗಿ ಬೇರೆ ಪಕ್ಷದವರನ್ನು ಸೇರಿಸಿಕೊಳ್ಳುವ ಅಗತ್ಯ ನಮಗಿಲ್ಲ ಎಂದು ಹೇಳಿದರು.

ಅನೇಕ ಶಾಸಕರು ಕಾಂಗ್ರೆಸ್ಸಿಗೆ ಬರ್ತಾರೆ: ಮುಂದಿನ ದಿನಗಳಲ್ಲಿ ಜೆಡಿಎಸ್‌ (JDS), ಬಿಜೆಪಿಯಿಂದ (BJP) ಅನೇಕ ಶಾಸಕರು ಕಾಂಗ್ರೆಸ್ಸಿಗೆ ಬರಲಿದ್ದಾರೆ. ಜೆಡಿಎಸ್‌ನಿಂದ ಬರುವವರ ಕುರಿತು ವರಿಷ್ಠರ ಜೊತೆ ಮಾತುಕತೆಯೂ ನಡೆಸಲಾಗಿದೆ ಎಂದು ಹರಿಹರ ಶಾಸಕ ಎಸ್‌.ರಾಮಪ್ಪ (S.Ramappa) ಹೇಳಿದ್ದಾರೆ. ಹರಿಹರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಜೆಡಿಎಸ್‌ನಿಂದ ಸಾಕಷ್ಟುಶಾಸಕರು ನಮ್ಮ ಪಕ್ಷಕ್ಕೆ ಬರಲು ಚರ್ಚೆ ನಡೆಸಿದ್ದಾರೆ. 

'ಮೊಸರಲ್ಲಿ ಕಲ್ಲು ಹುಡುಕಬೇಡಿ' ಸಿದ್ದುಗೆ ಬೊಮ್ಮಾಯಿ ಇತಿಹಾಸದ ಏಟು!

ಕಾಂಗ್ರೆಸ್‌ನಲ್ಲಿ ಹಾಲಿ ಶಾಸಕರಿಗೆ ಟಿಕೆಟ್‌ ನೀಡುವ ಸಂಪ್ರದಾಯವೂ ಇದೆ ಎಂದರು. ಬಿಜೆಪಿ ಸರ್ಕಾರದಲ್ಲಿ ಅದೇ ಪಕ್ಷದ ಶಾಸಕರಿಗೆ ಪರ್ಸಂಟೇಜ್‌ ಪಡೆದು, ಅನುದಾನ ನೀಡುತ್ತಿದ್ದಾರೆ. ಶೇ.20 ಪರ್ಸಂಟೇಜ್‌ ತೆಗೆದುಕೊಂಡೇ, ಅನುದಾನ ನೀಡಲಾಗುತ್ತಿದೆ. ಇದರಿಂದ ಬೇಸತ್ತ ಆಡಳಿತ ಪಕ್ಷದ ಅನೇಕ ಶಾಸಕರು ಕಾಂಗ್ರೆಸ್ಸಿನತ್ತ ಬರುತ್ತಿದ್ದಾರೆ. ನನಗೂ ಹಿಂದೆ .40 ಕೋಟಿ ಕೊಡುತ್ತೇವೆ. ಬಿಜೆಪಿಗೆ ಬನ್ನಿ ಅಂತ ಆಹ್ವಾನಿಸಿದ್ದರು ಎಂದರು.

ಪರ್ಸಂಟೇಜ್‌ ಪಡೆದು ಅನುದಾನ: ಒಳ್ಳೆಯ ಕೆಲಸ ಮಾಡಿದವರಿಗೆ, ಜನರಿಗೆ ಸ್ಪಂದಿಸುವವರಿಗೆ ಟಿಕೆಟ್‌ ಸಿಕ್ಕೇ ಸಿಗುತ್ತದೆ. ಕಾಂಗ್ರೆಸ್ಸಿನ ಹಿರಿಯ ಮುಖಂಡ ಸಿಎಂ ಇಬ್ರಾಹಿಂರಿಗೆ ಏನೋ ಅಸಮಾಧಾನವಾಗಿದೆ. ಈ ಕಾರಣಕ್ಕಾಗಿ ಹಾಗೆಲ್ಲಾ ಮಾತನಾಡುತ್ತಿರಬಹುದು. ನಮ್ಮ ಪಕ್ಷದ ಹಿರಿಯ ನಾಯಕರು ಇಬ್ರಾಹಿಂ ಜೊತೆಗೆ ಚರ್ಚಿಸುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಹರಿಹರ ಶಾಸಕ ಎಸ್‌.ರಾಮಪ್ಪ ಪ್ರತಿಕ್ರಿಯಿಸಿದರು.

ಬಿಜೆಪಿ-ಜೆಡಿಎಸ್‌ ಶಾಸಕರು ಕಾಂಗ್ರೆಸ್ಸಿಗೆ: ಜೆಡಿಎಸ್‌, ಬಿಜೆಪಿಯಿಂದ ಅನೇಕ ಶಾಸಕರು ಕಾಂಗ್ರೆಸ್ಸಿಗೆ ಬರಲಿದ್ದು, ಜೆಡಿಎಸ್‌ನಿಂದ ಬರುವವರ ಬಗ್ಗೆ ಪಕ್ಷದ ವರಿಷ್ಠರ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ಹರಿಹರ ಶಾಸಕ ಎಸ್‌ . ರಾಮಪ್ಪ ಹೊಸ ಬಾಂಬ್‌ ಸಿಡಿಸಿದ್ದಾರೆ. ಹರಿಹರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್‌ನಿಂದ ಸಾಕಷ್ಟುಶಾಸಕರು ನಮ್ಮ ಪಕ್ಷಕ್ಕೆ ಬರಲು ಚರ್ಚೆ ನಡೆಸಿದ್ದಾರೆ. ಕಾಂಗ್ರೆಸ್ಸಿನಲ್ಲಿ ಸಿಟ್ಟಿಂಗ್‌ ಎಂಎಲ್‌ಎಗಳಿಗೆ ಟಿಕೆಟ್‌ ನೀಡುವ ಸಂಪ್ರದಾಯವೂ ಇದೆ ಎಂದರು.

ಒಳ್ಳೆಯ ಕೆಲಸ ಮಾಡಿದವರಿಗೆ, ಜನರಿಗೆ ಸ್ಪಂದಿಸುವವರಿಗೆ ಟಿಕೆಟ್‌ ಸಿಕ್ಕೇ ಸಿಗುತ್ತದೆ. ನಮ್ಮ ಪಕ್ಷವು ಮುಂದಿನ ದಿನಗಳಲ್ಲಿ ಅಧಿಕಾರಕ್ಕೆ ಬರಲಿದೆ. ಬಿಜೆಪಿ, ಜೆಡಿಎಸ್‌ನಿಂದ ನಮ್ಮ ಪಕ್ಷಕ್ಕೆ ಬರಲು ಅನೇಕ ಶಾಸಕರೂ ನಮ್ಮ ವರಿಷ್ಠರೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ಅವರು ತಿಳಿಸಿದರು. ಬಿಜೆಪಿ ಸರ್ಕಾರದಲ್ಲಿ ಅದೇ ಪಕ್ಷದ ಶಾಸಕರಿಗೆ ಪರ್ಸಂಟೇಜ್‌ ಪಡೆದು, ಅನುದಾನ ನೀಡುತ್ತಿದ್ದಾರೆ. ಶೇ.20 ಪರ್ಸಂಟೇಜ್‌ ತೆಗೆದುಕೊಂಡೇ, ಅನುದಾನ ನೀಡುತ್ತಿದ್ದಾರೆ. ಈ ಕಾರಣಕ್ಕಾಗಿ ಬೇಸತ್ತ ಆಡಳಿತ ಪಕ್ಷದ ಅನೇಕ ಶಾಸಕರು ಕಾಂಗ್ರೆಸ್ಸಿನತ್ತ ಬರುತ್ತಿದ್ದಾರೆ. 

ಸಿಇಟಿ, ನೀಟ್, ಜೆಇಇ ಅರ್ಜಿ ತುಂಬುವ ಬಗ್ಗೆ ಸರಕಾರದಿಂದ ವಿಶೇಷ ತರಬೇತಿ

ನನಗೂ ಹಿಂದೆ 40 ಕೋಟಿ ರು. ಕೊಡುತ್ತೇವೆ. ಬಿಜೆಪಿಗೆ ಬನ್ನಿ ಅಂತಾ ಆಹ್ವಾನಿಸಿದ್ದರು. ಆದರೆ, ನಾನು ಆ ಸಂದರ್ಭದಲ್ಲಿ ಬಿಜೆಪಿಗೆ ಹೋಗಲಿಲ್ಲ ಎಂದು ಅವರು ಹೇಳಿದರು. ಕಾಂಗ್ರೆಸ್ಸಿನ ಹಿರಿಯ ಮುಖಂಡ ಸಿಎಂ ಇಬ್ರಾಹಿಂರಿಗೆ ಏನೋ ಅಸಮಾಧಾನವಾಗಿದೆ. ಈ ಕಾರಣಕ್ಕಾಗಿ ಹಾಗೆಲ್ಲಾ ಮಾತನಾಡುತ್ತಿರಬಹುದು. ನಮ್ಮ ಪಕ್ಷದ ಹಿರಿಯ ನಾಯಕರು ಸಿಎಂ ಇಬ್ರಾಹಿಂ ಜೊತೆಗೆ ಚರ್ಚಿಸುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಹರಿಹರ ಶಾಸಕ ಎಸ್‌.ರಾಮಪ್ಪ ಪ್ರತಿಕ್ರಿಯಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್