* ಸತ್ತ ವ್ಯಕ್ತಿಗೆ ಕೊರೋನಾ ಎರಡನೇ ಡೋಸ್ ಹಾಕಿದ್ರಾ ಆರೋಗ್ಯ ಇಲಾಖೆ!
* 6 ತಿಂಗಳ ಹಿಂದೆಯೇ ಸತ್ತ ವ್ಯಕ್ತಿಗೆ ಕೊರೋನಾ ಲಸಿಕೆ ಸರ್ಟಿಫಿಕೇಟ್
* ಜೀವಂತವಿರುವ ವ್ಯಕ್ತಿಗೆ ತಹಶೀಲ್ದಾರ್ ಮರಣ ಪ್ರಮಾಣ ಪತ್ರ ವಿತರಣೆ
ತುಮಕೂರು, (ಜ.30): ಜೀವಂತವಿರುವ ವ್ಯಕ್ತಿಗೆ ತಹಶೀಲ್ದಾರ್ ಮರಣ ಪ್ರಮಾಣ ಪತ್ರ (Death Certificate) ವಿತರಿಸಿ ಮಹಾಯಡವಟ್ಟೊಂದನ್ನು ಮಾಡಿಕೊಂಡಿದ್ರೆ, ಮತ್ತೊಂದೆಡೆ ಮರಣ ಹೊಂದಿದ್ದ ವ್ಯಕ್ತಿಗೆ ಎರಡನೇ ಡೋಸ್ ಕೋವಿಡ್ ಲಸಿಕೆ ಪಡೆದಿದ್ದ ಪ್ರಮಾಣಪತ್ರ(Covid Vaccine Certificate) ನೀಡಲಾಗಿದೆ.
ಕೆಲಸದಲ್ಲಿ ಜಾಗೃತೆ ಇಲ್ಲದಿದ್ದರೆ ಎಂತಹ ಯಡವಟ್ಟುಗಳಾಗುತ್ತವೆ ಎಂಬುದಕ್ಕೆ ಈ ಎರಡು ಪ್ರಕರಣಗಳು ತಾಜಾ ಉದಾಹರಣೆಯಾಗಿದೆ.
Omicron Threat: ಲಸಿಕೆ ಹಾಕಿಸದವರಿಗೆ ಶಾಕಿಂಗ್ ನ್ಯೂಸ್ ಕೊಟ್ಟ WHO!
ಸತ್ತ ವ್ಯಕ್ತಿಗೆ ಕೊರೋನಾ 2ನೇ ಡೋಸ್ ಸರ್ಟೀಫಿಕೆಟ್
6 ತಿಂಗಳ ಹಿಂದೆ ಮರಣ ಹೊಂದಿದ್ದ ವ್ಯಕ್ತಿಗೆ ಎರಡನೇ ಡೋಸ್ ಕೋವಿಡ್ ಲಸಿಕೆ ಪಡೆದಿದ್ದ ಸರ್ಟಿಫಿಕೆಟ್ ನೀಡಲಾಗಿದೆ. ತುಮಕೂರು ಆರೋಗ್ಯ ಇಲಾಖೆ ಮಹಾ ಎಡವಟ್ಟು ಮಾಡಿದೆ.
ತುಮಕೂರು ನಗರದ ಮೆಳೆಕೋಟೆ ನಿವಾಸಿ ಬಸಪ್ಪ(80) 2021ರ ಏಪ್ರಿಲ್ 9ರಂದು ಮೊದಲ ಡೋಸ್ ತೆಗೆದುಕೊಂಡಿದ್ದರು. ಈ ನಡುವೆ ಜು.16 ರಂದು ಅವರು ಮೃತಪಟ್ಟಿದ್ದಾರೆ. ಆದರೆ ನಿನ್ನೆ (ಜ.29) ಎರಡನೇ ಡೋಸ್ ತೆಗೆದುಕೊಂಡಿರುವ ಬಗ್ಗೆ ಮೆಸೆಜ್ ಬಂದಿದೆ. ಸಂಬಂಧಿಕರು ಸೈಟ್ ಓಪನ್ ಮಾಡಿದಾಗ ಸರ್ಟಿಫಿಕೆಟ್ ಅಪ್‍ಡೇಟ್ ಆಗಿತ್ತು.
ವ್ಯಕ್ತಿ ಮರಣ ಹೊಂದಿ 6 ತಿಂಗಳಾದರೂ ಸತ್ತ ವ್ಯಕ್ತಿಗೆ ಹೇಗೆ ಲಸಿಕೆ ಕೊಟ್ರು ಎಂದು ಮೃತ ಬಸವಪ್ಪನ ಕುಟುಂಬ ಆಶ್ಚರ್ಯ ವ್ಯಕ್ತಪಡಿಸಿದೆ. ಜೊತೆಗೆ ಲಸಿಕೆ ನೀಡುವುದರಲ್ಲಿ ಆರೋಗ್ಯ ಇಲಾಖೆ ಮೇಲೆ ಅನುಮಾನಗಳು ವ್ಯಕ್ತವಾಗಿವೆ.
ಬದುಕಿರೋ ರೈತನಿಗೆ ಮರಣ ಪ್ರಮಾಣ ವಿತರಣೆ
ಕೋಲಾರ: ಬದುಕಿರುವ ರೈತನಿಗೆ ಕಂದಾಯ ಇಲಾಖೆಯ ಅಧಿಕಾರಿಗಳು ಮರಣ ಪ್ರಮಾಣ ಪತ್ರ ನೀಡಿದ ವಿಲಕ್ಷಣ ಘಟನೆ, ಜಿಲ್ಲೆಯ ಮುಳಬಾಗಲು ತಾಲೂಕಿನ ಎಂ.ಹೊಸಹಳ್ಳಿ ಗ್ರಾಮದಲ್ಲಿ ವರದಿಯಾಗಿದೆ.
ಜೀವಂತವಿರುವ ವ್ಯಕ್ತಿಗೆ ತಹಶೀಲ್ದಾರ್ ಮರಣ ಪ್ರಮಾಣ ಪತ್ರ ವಿತರಿಸಿ ಮಹಾಯಡವಟ್ಟೊಂದನ್ನು ಮಾಡಿಕೊಂಡು ಸುದ್ದಿಯಲ್ಲಿದ್ದಾರೆ. ಗ್ರಾಮದ ಶಿವರಾಜ್ ಎಂಬಾತರಿಗೆ ತಹಶೀಲ್ದಾರ್ ಮರಣ ಪ್ರಮಾಣ ಪತ್ರ ವಿತರಸಿದ್ದಾರೆ.
ಪಡಿತರ ತರಲು ಹೋದ ವೇಳೆ ರೈತ ಶಿವರಾಜ್ಗೆ ಈ ವಿಷಯ ಗೊತ್ತಾಗಿದ್ದು ರೈತ ಅಚ್ಚರಿಗೊಳಗಾಗಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಮುಳಬಾಗಿಲು ಪೊಲೀಸ್ ಠಾಣೆಗೆ ಆಗಮಿಸಿ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹಿಂದಿನ ತಹಶೀಲ್ದಾರ್ ಜಿ.ರಾಜಶೇಖರ್, ಗ್ರಾಮ ಲೆಕ್ಕಿಗ ಅರವಿಂದ, ಕಂದಾಯ ನಿರೀಕ್ಷಿಕ ಸಾದತ್ ವುಲ್ಲಾ ಖಾನ್, ನಾಡಕಚೇರಿ ಶಿರೇಸ್ತೆದಾರ್ ಜಯರಾಂ ವಿರುದ್ದ ಎಫ್ಐಆರ್ ದಾಖಲಿಸಿದ್ದಾರೆ.